More

    ಪಾಕಿಸ್ತಾನದ ರಾವಲ್​ಪಿಂಡಿ ಮುಂದಿನ ವುಹಾನ್? ಚೀನಾ ಆಡುತ್ತಿದೆ ಚದುರಂಗದಾಟ…

    ಪಾಕಿಸ್ತಾನ: ಚೀನಾ ಮತ್ತು ಪಾಕಿಸ್ತಾನ ಆಪ್ತ ಆದದ್ದೇ ಭಾರತವನ್ನು ವಿರೋಧಿಸುವ ಉದ್ದೇಶದಿಂದ ಎನ್ನುವುದು ಜಗತ್ತಿಗೆ ಗೊತ್ತಿರುವ ಸತ್ಯ. ನಿನ್ನೆ (ನ.7) ಪಾಕಿಸ್ತಾನದಲ್ಲಿ ಚೀನಾ ರಹಸ್ಯವಾಗಿ ಜೈವಿಕ ಅಸ್ತ್ರ ತಯಾರಿಸುತ್ತಿದೆ ಎನ್ನುವುದು ತಿಳಿದುಬಂದಿತ್ತು.

    ಇದೀಗ ಭಾರತದ ಗಡಿಯಿಂದ ಕೇವಲ 250 ಕಿ.ಮೀ ದೂರದಲ್ಲಿರುವ ರಾವಲ್​ಪಿಂಡಿಯಲ್ಲಿ ಚೀನಾ ರಹಸ್ಯವಾಗಿ ಕೋವಿಡ್​-19 ನಂತಹ ಜೈವಿಕ ಅಸ್ತ್ರವನ್ನು ತಯಾರಿಸುತ್ತಿದೆ ಎನ್ನುವುದು ಬಹಿರಂಗವಾಗಿದೆ. ಇದರಿಂದಾಗಿ ಜಗತ್ತು ಮತ್ತೊಂದು ಲಾಕ್​ಡೌನ್​ ಕಡೆಗೆ ಹೋಗಲಿದೆಯಾ ಎನ್ನುವ ಪ್ರಶ್ನೆ ಭೂತದಂತೆ ಎದುರಾಗಿದೆ.

    ವಿಚಿತ್ರ ಎಂದರೆ ಕರೊನ ಹುಟ್ಟಿಕೊಂಡ ‘ವುಹಾನ್​ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿ ಲ್ಯಾಬ್’​ ಪಾಕಿಸ್ತಾನದ ಲ್ಯಾಬ್​ಗೆ ಸಹಾಯ ಮಾಡುತ್ತಿರುವುದು! ಭಾರತಕ್ಕೆ ಚಿಂತೆಯ ವಿಷಯ ಏನೆಂದರೆ ಈ ಲ್ಯಾಬ್​ ಕೇವಲ 250 ಕಿ.ಮೀ ದೂರದಲ್ಲಿರುವುದು. ಭಾರತ ಜೈವಿಕ ಅಸ್ತ್ರಗಳ ಯುದ್ಧಕ್ಕೆ ಇನ್ನೂ ಪೂರ್ಣಪ್ರಮಾಣದಲ್ಲಿ ಸಿದ್ಧವಾಗಿಲ್ಲ. ಇಂತಹ ಸಂದರ್ಭದಲ್ಲಿ ಈ ಸುದ್ದಿ ಹೊರಬಿದ್ದಿರುವುದು ಭಾರತಕ್ಕೆ ದೊಡ್ಡ ತಲೆನೋವು ಆಗಲಿದೆ.

    ಜೈವಿಕ ಅಸ್ತ್ರಗಳನ್ನು ವಿಶ್ವಯುದ್ಧದ ಸಂದರ್ಭದಲ್ಲೇ ನಿಷೇಧಿಸಲಾಗಿತ್ತು. ಆದರೂ ಚೀನಾ-ಪಾಕಿಸ್ತಾನ ಕದ್ದು ಮುಚ್ಚಿ ಇವುಗಳನ್ನು ತಯಾರು ಮಾಡುತ್ತಿದೆ. ಚೀನಾ ಅದರಲ್ಲೂ ಕಳ್ಳಾಟವಾಡುತ್ತಿದೆ. ‘ಸಮಸ್ಯೆ ಬಂದರೆ ನಮಗೆ ಬೇಡ’ ಎಂದು ಜೈವಿಕ ಅಸ್ತ್ರಗಳನ್ನು ದೂರದ ಪಾಕಿಸ್ತಾನದಲ್ಲಿ ತಯಾರಿಸುತ್ತಿದೆ. ಈ ರೀತಿ ಭಾರಿ ಚಾಣಾಕ್ಷತೆಯಿಂದ ಚೀನಾ ಚದುರಂಗದ ಆಟ ಆಡುತ್ತಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts