More

    ಧೀರ ಯೋಧರನ್ನು ಗೌರವಿಸುವುದು ಹೇಗೆಂದು ಭಾರತವನ್ನು ನೋಡಿ ಕಲಿಯಿರಿ

    ಸಿಂಗಾಪುರ: ಲಡಾಖ್​ನ ಪೂರ್ವಭಾಗದಲ್ಲಿನ ಗಲ್ವಾನ್​ ಮತ್ತು ಶಿಯಾಕ್​ ನದಿಗಳ ಸಂಗಮದ ಸ್ಥಳದಲ್ಲಿರುವ ವೈ ಜಂಕ್ಷನ್​ ಬಳಿ ಜೂ.15ರಂದು ನಡೆದ ರಕ್ತಸಿಕ್ತ ಘಷಣೆಯಲ್ಲಿ ಸತ್ತ ಯೋಧರು ಎಷ್ಟು ಎಂಬ ಬಗ್ಗೆ ಮಾಹಿತಿ ನೀಡಲು ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಮತ್ತು ಅವರ ಸಚಿವ ಸಂಪುಟದ ಸದಸ್ಯರು ನಿರಾಕರಿಸುತ್ತಿದ್ದಾರೆ. ಸತ್ತ ಯೋಧರ ಕುಟುಂದವರಿಗೇ ಈ ಬಗ್ಗೆ ಮಾಹಿತಿ ನೀಡುವ ಕ್ರಮವನ್ನೇ ಇಟ್ಟುಕೊಳ್ಳದ ರೀತಿಯ ಸೆನ್ಸಾರ್​ ನೀತಿ ಅಲ್ಲಿದೆ. ಇದು ಚೀನಿಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

    ಗಲ್ವಾನ್​ ಕಣಿವೆಯ ಘರ್ಷಣೆಯಲ್ಲಿ ನಮ್ಮ ಎಷ್ಟು ಯೋಧರು ಹುತಾತ್ಮರಾಗಿದ್ದಾರೆ… ಈ ಬಗ್ಗೆ ಮಾಹಿತಿ ಏಕೆ ನೀಡುತ್ತಿಲ್ಲ… ಎಂದು ಸಾಮಾಜಿಕ ಜಾಲತಾಣ ಟ್ವಿಟರ್​ಗೆ ಸಮನಾದ ಚೀನಾದ ವೈಬೋ ಎಂಬ ಸಾಮಾಜಿಕ ಜಾಲತಾಣದಲ್ಲಿ ಚೀನಿಯರು ಸರ್ಕಾರವನ್ನು ಪ್ರಶ್ನಿಸಲಾರಂಭಿಸಿದ್ದಾರೆ.

    ನಮ್ಮವರು ಒಬ್ಬರೂ ಸತ್ತಿಲ್ಲವೇ…? ಯಾರೊಬ್ಬರೂ ಗಾಯಗೊಂಡಿಲ್ಲವೇ…? ಭಾರತದ ಪಾಳೆಯದಲ್ಲಿ 20 ಯೋಧರು ಸತ್ತಿದ್ದಾರೆ ಎಂದರೆ ನಮ್ಮವರೂ ಸತ್ತಿರಬೇಕಲ್ಲವೇ… ಕನಿಷ್ಠ ಗಾಯಗೊಂಡಿರಬೇಕಲ್ಲವೇ… ಎಂದೆಲ್ಲ ಪ್ರಶ್ನೆಗಳನ್ನು ಕೇಳಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ.

    ಇದನ್ನೂ ಓದಿ: ಯುಪಿಎ ಅವಧಿಯಲ್ಲಿ ಚೀನಿಯರ 600 ಅತಿಕ್ರಮಣ, 43 ಸಾವಿರ ಕಿ.ಮೀ. ವಶ

    ಪೀಪಲ್ಸ್​ ಲಿಬರೇಷನ್​ ಆರ್ಮಿಯಲ್ಲಿ (ಪಿಎಲ್​ಎ) ಕೆಲಸ ಮಾಡುತ್ತಿದ್ದು, ಕೆಲವರು ಲಡಾಖ್​ನಲ್ಲಿ ನಿಯೋಜನೆಗೊಂಡಿರುವುದು ತಿಳಿದಿದ್ದ ಸಂಬಂಧಿಕರು, ತಮ್ಮವರ ಬಗೆಗಿನ ಮಾಹಿತಿಗಾಗಿ ಹಪಾಹಪಿಸುತ್ತಿದ್ದಾರೆ.

    ಭಾರತ ಮತ್ತು ಚೀನಾ ನಡುವಿನ ಪರಿಸ್ಥಿತಿಯ ಬಗ್ಗೆ ಆತಂಕಗೊಂಡಿದ್ದೇನೆ. ಭಾರತದಲ್ಲಿನ ವಿಡಿಯೋ ಮತ್ತು ಸುದ್ದಿಗಳನ್ನು ನೋಡಿದಾಗ, ಪಿಎಲ್​ಎಯ ಅತ್ಯಂತ ಚಿಕ್ಕವಯಸ್ಸಿನ ಯೋಧರ ಬಗ್ಗೆ ಆತಂಕ ಮೂಡುತ್ತಿದೆ. ಆ ಘರ್ಷಣೆಯಲ್ಲಿ ಆದ ಸಾವು-ನೋವಿನ ಬಗ್ಗೆ ಸರ್ಕಾರ ಅಧಿಕೃತ ಮಾಹಿತಿ ನೀಡುತ್ತಿಲ್ಲ. ಚೀನಾದ ಗಡಿ ಭದ್ರತೆಗೆ ನಿಯೋಜನೆಗೊಂಡಿದ್ದವರೆಲ್ಲರೂ ತುಂಬಾ ಚಿಕ್ಕವಯಸ್ಸಿನವರು. ಅವರ ಅಳಿವು-ಇರುವಿನ ಬಗ್ಗೆ ಮಾಹಿತಿ ತಿಳಿಯದೆ ಅವರ ಪಾಲಕರು ಕಂಗಾಲಾಗಿರುತ್ತಾರೆ ಎಂದು ವೈಬೋ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

    ನಾವು ದೇಶಪ್ರೇಮಿಗಳು. ನಮ್ಮ ಸ್ನೇಹಿತರ ಸುರಕ್ಷತೆಯ ಬಗ್ಗೆ ನಾವು ಆತಂಕಗೊಂಡಿದ್ದೇವೆ. ನೀವೆಲ್ಲರೂ ಸುರಕ್ಷಿತವಾಗಿದ್ದು, ಆರೋಗ್ಯವಾಗಿರುವುದಾಗಿ ಭಾವಿಸಿದ್ದೇವೆ ಸ್ನೇಹಿತರೆ. ಎಲ್ಲರಿಗೂ ಧನ್ಯವಾದಗಳು ಎಂದು ವೈಬೋದ ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

    ಇದನ್ನೂ ಓದಿ: ಚೀನಿಯರ ಅತಿಕ್ರಮಣ ಹಿಮ್ಮೆಟ್ಟಿಸಲು ಪರ್ವತಶ್ರೇಣಿಯ ಸಮರಕಲಿಗಳ ನಿಯೋಜನೆ

    ಭಾರತ ಸರ್ಕಾರ ಈ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿರುವುದಾಗಿ ಹೇಳಿದೆ. ಅವರೆಲ್ಲರ ಬಲಿದಾನವನ್ನು ಸ್ಮರಿಸಿ, ಇಡೀ ದೇಶವೇ ಅವರೆಲ್ಲರಿಗೂ ಗೌರವಾರ್ಪಣೆ ಮಾಡಿದೆ. ಅಂದರೆ, ದೇಶದ ರಕ್ಷಣೆಗಾಗಿ ದುಡಿಯುವ ಯೋಧರ ಬಗ್ಗೆ ಭಾರತೀಯರಲ್ಲಿ ಎಷ್ಟೊಂದು ಗೌರವವಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಆದರೆ, ನಾವು ಮಾಡುತ್ತಿರುವುದು ಏನು? ಹುತಾತ್ಮರಾದ ಯೋಧರ ಬಲಿದಾನವನ್ನು ಸ್ಮರಿಸಿ ಗೌರವಿಸುವುದು ಹೇಗೆ ಎಂಬುದನ್ನು ನಾವು ಭಾರತೀಯರನ್ನು ನೋಡಿ ಕಲಿಯಬೇಕು. ನಾವೇಕೆ ನಮ್ಮ ಹುತಾತ್ಮ ಯೋಧರಿಗೆ ಬಹಿಂಗವಾಗಿ ಶ್ರದ್ಧಾಂಜಲಿ ಅರ್ಪಿಸುವುದಿಲ್ಲ? ಅಂದರೆ, ಪಿಎಲ್​ಎ ಯೋಧರು ಯಾರೂ ಸತ್ತಿಲ್ಲವೇ? ಗಾಯಗೊಂಡವರನ್ನು ಸ್ಥಳಾಂತರಿಸಲಾಗಿದೆಯೇ ಇಲ್ಲವೇ…? ದಯವಿಟ್ಟು ಮಾಹಿತಿ ಕೊಡಿ ಎಂದು ಮತ್ತೊಬ್ಬ ವೈಬೋ ಬಳಕೆದಾರ ತಮ್ಮ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಭಾರತದೊಂದಿಗಿನ ಘರ್ಷಣೆಯಲ್ಲಿ ನೂರಾರು ಯೋಧರು ಸಹಜವಾಗಿ ಪಾಲ್ಗೊಂಡಿರುತ್ತಾರೆ. ನಾವು ತುಂಬಾ ಶಿಸ್ತಿನವರು ಮತ್ತು ಕಠಿಣವಾದ ತರಬೇತಿ ಹೊಂದಿರುವವರು ನಿಜ. ಆದರೂ, ನಾವೆಲ್ಲರೂ ಮನುಷ್ಯರೇ ತಾನೆ. ಈ ಘರ್ಷಣೆಯಲ್ಲಿ ನಮ್ಮ ಸಾಕಷ್ಟು ಯೋಧರು ಸತ್ತಿರಬೇಕು ಇಲ್ಲವೇ ಗಾಯಗೊಂಡಿರಬೇಕು. ಭಾರತೀಯ ಪಾಳೆಯದಲ್ಲಿ ಆಗಿರುವ ಸಾವು-ನೋವಿನ ಮಾಹಿತಿ ನೋಡಿ ಸಂಭ್ರಮಿಸುತ್ತಿರುವ ನಮ್ಮವರನ್ನು ಕಂಡಾಗ ನನಗೆ ಸಂತೋಷ ಮತ್ತು ದುಃಖ ಎರಡೂ ಆಗುತ್ತದೆ. ನಮ್ಮ ಯೋಧರ ಬಗ್ಗೆ ಮಾಹಿತಿ ತಿಳಿಯಲು ಅವರ ಕುಟುಂಬ ವರ್ಗದವರು ಕಾತರಿಸುತ್ತಿರಬಹುದು… ಎಂದು ಇನ್ನೊಬ್ಬ ವೈಬೋ ಬಳಕೆದಾರರು ಹೇಳಿದ್ದಾರೆ.

    20 ವರ್ಷ ಜೀವಂತವಾಗಿರುತ್ತೆ ಕರೊನಾ; ಹಸಿ ಮಾಂಸ, ಮೀನು ಮುಟ್ಟಬೇಡಿ; ಚೀನಾ ತಜ್ಞರ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts