More

    ಚೀನಿಯರ ಅತಿಕ್ರಮಣ ಹಿಮ್ಮೆಟ್ಟಿಸಲು ಪರ್ವತಶ್ರೇಣಿಯ ಸಮರಕಲಿಗಳ ನಿಯೋಜನೆ

    ನವದೆಹಲಿ: ಪರ್ವತಶ್ರೇಣಿಗಳಲ್ಲಿ ಅತಿ ಎತ್ತರದ ಪ್ರದೇಶಗಳಲ್ಲಿ ಯುದ್ಧ ಮಾಡುವ ತರಬೇತಿ ಪಡೆದಿರುವ ಸಮರಕಲಿಗಳನ್ನು ಭಾರತ ವಾಸ್ತವ ಗಡಿರೇಖೆ ಬಳಿಗೆ ರವಾನಿಸಿದೆ. ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ಯೋಧರು ಭಾರತದ ಭೂಭಾಗವನ್ನು ಅತಿಕ್ರಮಿಸಲು ಯತ್ನಿಸಿದ್ದರೆ ಅದನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಉದ್ದೇಶದಿಂದ ಭಾರತ ಈ ಕ್ರಮ ಕೈಗೊಂಡಿರುವುದಾಗಿ ಹೇಳಲಾಗಿದೆ.

    ಪಿಎಲ್​ಎ ಯೋಧರು ಲಡಾಖ್​ನ ಪಶ್ಚಿಮ, ಮಧ್ಯ ಅಥವಾ ಪೂರ್ವ ವಲಯಗಳಲ್ಲಿ ಭಾರತದ ಭೂಭಾಗವನ್ನು ಅತಿಕ್ರಮಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ತನ್ಮೂಲಕ ಅದು ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಹುನ್ನಾರ ನಡೆಸಿದೆ. ಈ ಹಿನ್ನೆಲೆಯಲ್ಲಿ ಪರ್ವತಶ್ರೇಣಿಗಳಲ್ಲಿ ಯುದ್ಧ ಮಾಡುವ ವಿಶೇಷ ತರಬೇತಿ ಪಡೆದಿರುವ ಯೋಧರನ್ನು ಎಲ್​ಎಸಿ ಬಳಿಗೆ ರವಾನಿಸಲಾಗಿದೆ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ವಾಸ್ತವ ಗಡಿರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ; ಪೂರ್ಣ ಪ್ರಮಾಣದ ಸೇನೆ ನಿಯೋಜನೆ

    ಉತ್ತರಾಖಂಡ, ಲಡಾಖ್​, ಗೂರ್ಖಾ, ಅರುಣಾಚಲಪ್ರದೇಶ ಮತ್ತು ಸಿಕ್ಕಿಂ ಮೂಲದ ಸೇನಾಪಡೆ ಉತ್ತರ ಭಾಗದ ಗಡಿ ರಕ್ಷಣೆಗಾಗಿ ಪರ್ವತಶ್ರೇಣಿಗಳ ಅತಿಎತ್ತರದ ಪ್ರದೇಶದಲ್ಲಿ ಯುದ್ಧಮಾಡುವ ತರಬೇತಿ ಪಡೆದುಕೊಂಡಿದ್ದಾರೆ. ಇದೀಗ ಅಪಾಯದ ಮುನ್ಸೂಚನೆ ದೊರೆತರೆ ಎಲ್​ಎಸಿ ಬಳಿ ಯುದ್ಧಮಾಡಲು ಅನುವಾಗುವಂತೆ ಇವರೆಲ್ಲರನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇವರೆಲ್ಲರೂ ಗೆರಿಲ್ಲಾ ಯುದ್ಧದ ಮಾದರಿಯ ತರಬೇತಿ ಪಡೆದಿದ್ದು, ಅತಿಎತ್ತರದ ಪ್ರದೇಶದಲ್ಲಿ ಹೋರಾಟ ಮಾಡಲು ಸಮರ್ಥರಾಗಿದ್ದಾರೆ. ಕಾರ್ಗಿಲ್​ ಯುದ್ಧದಲ್ಲಿ ಕೂಡ ಇವರ ನೆರವು ಪಡೆದುಕೊಂಡು ಶತ್ರು ಪಾಳೆಯವನ್ನು ಹಣಿಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.

    ಟಿಬೆಟಿಯನ್​ ಪ್ರಸ್ಥಭೂಮಿ ಚಪಾಟೆಯಾಗಿದ್ದು, ಇದರಿಂದ ಚೀನಿ ಯೋಧರಿಗೆ ಅನುಕೂಲವಾಗಲಿದೆ. ಆದರೆ, ಭಾರತದ ಸೀಮೆ ಕರಾಕೋರಂನಲ್ಲಿರುವ ಕೆ2 ಪರ್ವದಿಂದ ಆರಂಭವಾಗಿ ಉತ್ತರಾಖಂಡದ ನಾನಾದೇವಿ ಪರ್ವತಶ್ರೇಣಿಗಳವರೆಗೂ ಹಬ್ಬಿದೆ. ಸಿಕ್ಕಿಂನಲ್ಲಿ ಕಾಂಚೆನ್​ಜುಂಗದಿಂದ ಅರುಣಾಚಲಪ್ರದೇಶದ ನಾಮಚೆ ಬರ್ವಾ ಪರ್ವತಶ್ರೇಣಿಗಳವರೆಗೆ ವಿಸ್ತರಿಸಿದೆ. ಪರ್ವತಶ್ರೇಣಿಗಳ ಪ್ರದೇಶದಲ್ಲಿ ಶತ್ರು ಪಾಳೆಯ ಭೂಮಿಯನ್ನು ವಶಪಡಿಸಿಕೊಳ್ಳುವುದು ಅಷ್ಟೇ ಅಲ್ಲ, ನಮ್ಮ ಭೂಭಾಗವನ್ನು ಸಂರಕ್ಷಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಯುದ್ದ ತಜ್ಞರು ತಿಳಿಸಿದ್ದಾರೆ.

    ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts