More

    ಅಕ್ರಮ IVF ಕೇಂದ್ರಗಳನ್ನು ಭೇದಿಸಲು ಅಭಿಯಾನ ಆರಂಭಿಸಿದ ಚೀನಾ

    ಚೀನಾ: ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡಿರುವ ಕಳವಳವವ್ನು ತಗ್ಗಿಸಲು ಚೀನಾ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ವೀರ್ಯ, ಆಂಡಾನು ಮಾರಾಟ ಮತ್ತು ಬಾಡಿಗೆ ತಾಯ್ತನ ಕಲ್ಪಿಸುವ IVF ಸೆಂಟರ್​ಗಳ ಮೇಲೆ ದಾಳಿ ಆರಂಭಿಸಿದೆ.

    ಕಾನೂನಿನ ಪ್ರಕಾರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಮಾತ್ರ ವಿವಾಹಿತೆಯರು ಈ ಸೌಲಭ್ಯ ಪಡೆಯಬಹುದು. ಸಾರ್ವಜನಿಕ ಹಿತಾಸಕ್ತಿಯ ಭಾಗವಾಗಿ ಅನಧಿಕೃತ IVF ಸೆಂಟರ್​ಗಳ ಮೇಲೆ ದಾಳಿ ಆರಂಭಿಸಲಾಗಿದ್ದು, ಈ ಪೈಕಿ ಸರ್ಕಾರದಿಂದ ಮಾನ್ಯತೆ ಪಡೆದ 543 ಕೇಂದ್ರಗಳಿವೆ. ಗರ್ಭ ಧರಿಸಲು ಇಚ್ಛಿಸುವವರು ಈ ಕೇಂದ್ರಗಳನ್ನು ಮಾತ್ರ ಸಂಪರ್ಕಿಸಿ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

    ಈ ಕುರಿತು ಮಾತನಾಡಿರುವ ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರರೊಬ್ಬರು ಇತ್ತೀಚಿನ ದಿನಗಳಲ್ಲಿ ಬಂಜೆತನಕ್ಕೆ ಚಿಕಿತ್ಸೆ ನೀಡುವ ಕೇಂದ್ರಗಳು ಅಲ್ಲಲ್ಲಿ ತಲೆ ಎತ್ತಿವೆ. ಮಾನವನ ಫಲವಂತಿಕೆಯ ತಂತ್ರಜ್ಞಾನ ಏಕರೂಪತೆ ತರುವ ನಿಟ್ಟಿನಲ್ಲಿ ಸರ್ಕಾರ ಇಂತಹ ಕ್ರಮ ಕೈಗೊಂಡಿದೆ. ಇದಲ್ಲದೆ ಜನನ ಪ್ರಮಾಣ ಪತ್ರಗಳ ಅಕ್ರಮ ಖರೀದಿ ಹಾಗೂ ಮಾರಾಟ ಪ್ರಕರಣಗಳು ಸಹ ಬೆಳಕಿಗೆ ಬಂದಿದೆ.

    IVF

    ಇದನ್ನೂ ಓದಿ: VIDEO| ತಾಂತ್ರಿಕ ದೋಷದಿಂದ ಮಂಗಳೂರು-ದುಬೈ ವಿಮಾನ ಹಾರಾಟ ವಿಳಂಬ; ಪ್ರಯಾಣಿಕರು ಕೆಂಡಾಮಂಡಲ

    ಇದೆಲ್ಲವನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಜೂನ್​ನಿಂದ ಡಿಸೆಂಬರ್​ವರೆಗೆ ಅಭಿಯಾನ ಕೈಗೊಳ್ಳಲಾಗಿದೆ. ನಕಲಿ ಜನನ ಪ್ರಮಾಣ ಪತ್ರಗಳಿಂದ ಮಹಿಳೆಯರು ಹಾಗೂ ಮಕ್ಕಳ ಕಳ್ಳಸಾಗಾಣೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದಲ್ಲದೆ ಬೇರೆ ರೀತಿಯ ಅಪರಾಧ ಚಟುವಟಿಕೆಗಳು ಸಹ ನಡೆದಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇಂತಹದೊಂದು ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರರೊಬ್ಬರು ತಿಳಿಸಿದ್ದಾರೆ.

    ಚೀನಾದಲ್ಲಿ ವಯಸ್ಸಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿವಾಹಿತೆಯರು IVF ಮೂಲಕ ಮಕ್ಕಳನ್ನು ಪಡೆಯಲು ಅವಕಾಶ ನೀಡಲಾಗಿದೆ. ಅವಿವಾಹಿತ ಹಾಗೂ ಒಬ್ಬಂಟಿ ಮಹಿಳೆಯರು ತಮ್ಮ ಅಂಡಾಣುಗಳನ್ನು ಶೇಖರಿಸಲು ಹಾಗೂ ಕೃತಕ ಗರ್ಭಧಾರಣೆ ಚಿಕಿತ್ಸೆಗೆ ಒಳಗಾಗಲು ಅವಕಾಶ ನೀಡಬೇಕು ಎಂದು ಚೀನಾ ಸರ್ಕಾರಕ್ಕೆ ರಾಜಕೀಯ ಸಲಹೆಗಾರರ ತಂಡ ಶಿಫಾರಸ್ಸು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts