More

    ತೈವಾನ್​ ಅಧ್ಯಕ್ಷೆ ಅಮೆರಿಕ ಭೇಟಿ; ಸಮರಾಭ್ಯಾಸ ಆರಂಭಿಸಿದ ಚೀನಾ

    ಬೀಜಿಂಗ್​: ತೈವಾನ್ ಅಧ್ಯಕ್ಷೆ ಸಾಯ್​ ಇಂಗ್​ ವೆನ್​ ಅಮೆರಿಕ ಭೇಟಿ ನೀಡುತ್ತಿರುವುದನ್ನು ಆಕ್ಷೇಪಿರಿಸುವ ಚೀನಾ ದ್ವೀಪ ರಾಷ್ಟ್ರದ ಸುತ್ತ ಮೂರು ದಿನಗಳ ಸಮರಾಭ್ಯಾಸ ನಡೆಸುವುದಾಗಿ ಪೀಪಲ್ಸ್​ ಲಿಬರೇಷನ್​ ಆರ್ಮಿ(PLA) ತಿಳಿಸಿದೆ.

    3 ದಿನಗಳ ಕಾಲ ಸಮರಾಭ್ಯಾಸ ಆರಂಭಿಸಿರುವ ಚೀನಾ 8 ಯುದ್ಧ ನೌಕೆ, 42 ಪೈಟರ್​ ಜೆಟ್​ಗಳು ತೈವಾನ್​ ಸುತ್ತ ಕಂಡು ಬಂದಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ.

    ಚೀನಾ ಆಕ್ಷೇಪ

    ಸಾಯ್​ ಇಂಗ್​ ವೆನ್ ಅವರು ಲಾಸ್​ ಏಂಜೆಲಿಸ್​ನಲ್ಲಿ ಅಮೆರಿಕಾ ಸಂಸತ್ತಿನ ಸ್ಪೀಕರ್​ ಕೆವಿನ್​ ಮೆಕಾರ್ಥಿ ಅವರ ಜೊತೆ ಮಾತುಕತೆ ನಡೆಸಿರುವುದನ್ನು ಆಕ್ಷೇಪಿಸಿರುವ ಚೀನಾ ಮುಗಿಸಿ ತೈವಾನ್​ಗೆ ಹಿಂದಿರುಗಿದ ನಂತರ ಆಕ್ರಮಣಕಾರಿ ನಿಲುವು ತಾಳಿದೆ.

    ಶಾಂತಿಗೆ ಭಂಗ ತರಲು ಚೀನಾ ಕುತಂತ್ರ

    ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಹಾಳುಗೆಡವು ಚೀನಾದಲ್ಲಿರುವ ಕಮ್ಯೂನಿಸ್ಟ್​​ ಸರ್ಕಾರವು ಅದರ ಸೇನೆ ಬಳಸಿ ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ತೈವಾನ್​ ನಿರಂಕುಶ ವಿಸ್ತರಣಾಧಾರವನ್ನು ಎದುರಿಸುತ್ತಿದೆ.

    ಈ ಹಿನ್ನಲೆಯಲ್ಲಿ ಪ್ರಜಾಸತಾತ್ಮಕ ರಾಷ್ಟ್ರಗಳ ಸಹಕಾರ ಅತ್ಯಗತ್ಯ,. ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಅಮೆರಿಕ ಸೇರಿದಂತೆ ಸಮಾನ ಮನಸ್ಕ ದೇಶಗಳ ಜೊತೆ ಸೇರುವುದಾಗಿ ತೈವಾನ್​ ಅಧ್ಯಕ್ಷೆ ಸಾಯ್​ ಇಂಗ್​ ವೆನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts