More

    ಚೀನಾದಲ್ಲಿ ಇನ್ನು ಮುಂದೆ “ಲಾಕ್​ಡೌನ್”​​ ಪದ ಬಳಸುವಂತಿಲ್ಲ!

    ಬೀಜಿಂಗ್​: ವಿಶ್ವದಾದ್ಯಂತ ಕರೊನಾ ವೈರಸ್​​ ಪರಿಚಯಿಸಿಕೊಟ್ಟು, ಲಾಕ್​ಡೌನ್​​ ನೀತಿಗೆ ನಾಂದಿ ಹಾಡಿದ ಚೀನಾ ಇದೀಗ ಈ ಪದ ಬಳಕೆಗೆ ನಿರ್ಬಂಧ ಹೇರಿದೆ.

    ಚೀನಾದ ಪ್ರಸಿದ್ಧ ನಗರಗಳಲ್ಲಿ ಒಂದಾಗಿರುವ ಶಾಂಘೈ ಕಳೆದ ಎರಡು ತಿಂಗಳಿನಿಂದ ಕರೊನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಲಾಕ್​ಡೌನ್​ ಘೋಷಿಸಿತ್ತು, ಸದ್ಯ ಸಹಜ ಜೀವನದತ್ತ ಮರಳುತ್ತಿರುವ ಇಲ್ಲಿನ ಜನರು ಕೊಂಚ ನಿರಾಳರಾಗಿದ್ದು, ಮನೆಗಳಿಂದ ಹೊರಬರುತ್ತಿದ್ದಾರೆ.

    ಕರೊನಾ ಪರಿಚಯಿಸಿಕೊಟ್ಟ ಚೀನಾದಲ್ಲಿ ಕಳೆದ ಎರಡು ತಿಂಗಳಿನಿಂದ ಕರೊನಾ ರಣಕೇಕೆ ಮುಂದುವರಿದಿತ್ತು. ಇತ್ತ ವಿಶ್ವದ ಇತರೆ ರಾಷ್ಟ್ರಗಳಲ್ಲಿ ಸೋಂಕು ತಗ್ಗಿದ್ದರೆ, ಇತ್ತ ಚೀನಾದಲ್ಲಿ ಮಾತ್ರ ಭಾರೀ ಹೆಚ್ಚಳ ಕಂಡಿತ್ತು. ಇವೆಲ್ಲದರ ನಡುವೆ ವುಹಾನ್​, ಶಾಂಘೈ ಸೇರಿದಂತೆ ಇತರೆ ನಗರಗಳಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿತ್ತು.

    ಶಾಂಘೈ, ವುಹಾನ್​ನಲ್ಲಿ ನಾವು ಲಾಕ್​ ಡೌನ್​ ಘೋಷಿಸಿಲ್ಲ, ಪ್ರಮುಖ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿವೆ. ಹಾಗಾಗಿ ಈ ಪದ ಬಳಕೆ ಅಷ್ಟು ಸಮಂಜಸವಲ್ಲ ಎಂದು ಇಲ್ಲಿನ ಅಧಿಕಾರಿಗಳು ನಿರ್ಧಾರಕ್ಕೆ ಬಂದಿದ್ದಾರೆ.

    ಜೂನ್​ 1 ರಿಂದ ಎಂದಿನಂತೆ ಕಾರ್ಯಾರಂಭಗೊಂಡಿದ್ದು, ಜನರು ಕೂಡ ಸಹಜಸ್ಥಿತಿಯತ್ತ ಮರಳುತ್ತಿದ್ದು, ಇನ್ನು ಮುಂದೆ ಲಾಕ್​ಡೌನ್​ ಎನ್ನುವ ಪದವನ್ನು ಬಳಸುವಂತಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

    ಮಾಧ್ಯಮಗಳು ಸಹ ಈ ಪದವನ್ನು ಬಳಸುವಂತಿಲ್ಲ ಎಂದಿರುವ ಇಲ್ಲಿನ ಆಡಳಿತ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಸದ್ಯಕ್ಕೆ ಶಾಂಘೈ ಹಾಗೂ ವುಹಾನ್​ ನಗರದಲ್ಲಿ ಮಾತ್ರ ಈ ಪದ ಬಳಕೆಗೆ ನಿರ್ಬಂಧ ಹೇರಲಾಗಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

    ರೈತರ ಖಾತೆಗೆ ಬಂತು ಹಣ: ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನ ವರ್ಗಾವಣೆ

    ಸಿದ್ದರಾಮಯ್ಯನವರಿಗೆ ದೃಷ್ಟಿದೋಷವಿದೆ, ಸರಿಪಡಿಸಿಕೊಳ್ಳುವುದು ಒಳ್ಳೆಯದು: ಸಿಟಿ ರವಿ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts