More

    ಅಣ್ವಸ್ತ್ರದಲ್ಲಿ ಭಾರತಕ್ಕಿಂತಲೂ ಪಾಕ್, ಚೀನಾನೇ ಸ್ಟ್ರಾಂಗ್​ ಎಂದಿದೆ ವರದಿ!

    ನವದೆಹಲಿ: ಅತಿ ಹೆಚ್ಚಿನ ಅಣ್ವಸ್ತ್ರಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತವೂ ಒಂದು ಎಂದೇ ಜನಪ್ರಿಯತೆ ಗಳಿಸಿದೆ. ಕಳೆದ ವರ್ಷವಷ್ಟೇ 10 ಹೊಸ ಶಸ್ತ್ರಾಸ್ತ್ರಗಳನ್ನು ಸೇರ್ಪಡೆಗೊಳಿಸುವ ಮೂಲಕ ದೇಶವು ಅಣ್ವಸ್ತ್ರ ಸಂಗ್ರಹವನ್ನು ಹೆಚ್ಚಿಸಿಕೊಂಡಿದೆ.

    ಆದರೆ ಈ ನಡುವೆಯೇ ಸ್ವೀಡನ್‌ ಮೂಲದ ‘ದಿ ಸ್ಟಾಕ್‌ಹೊಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌’ (ಎಸ್‌ಐಪಿಆರ್‌ಐ) ಒಂದು ವರದಿಯನ್ನು ಬಹಿರಂಗಪಡಿಸಿದ್ದು, ಅದರ ಅನ್ವಯ ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳು ಭಾರತಕ್ಕಿಂತ ಹೆಚ್ಚು ಅಣ್ವಸ್ತ್ರಗಳನ್ನು ಹೊಂದಿವೆ!

    ಈ ವರದಿಯ ಪ್ರಕಾರ ಚೀನಾದಲ್ಲಿ 320 ಮತ್ತು ಪಾಕಿಸ್ತಾನದಲ್ಲಿ 160 ಅಣ್ವಸ್ತ್ರಗಳಿದ್ದರೆ ಭಾರತದಲ್ಲಿ ಇರುವುದು 150 ಮಾತ್ರ. 2019ರಲ್ಲಿ ಬಂದಿದ್ದ ವರದಿಯ ಅನ್ವಯ ಚೀನಾ ಬಳಿ 290 ಅಣ್ವಸ್ತ್ರ ಇದ್ದರೆ ಪಾಕಿಸ್ತಾನದಲ್ಲಿ 150-160 ಹಾಗೂ ಭಾರತದಲ್ಲಿ 130-140 ಇದ್ದವು ಎಂದು ಸಿಐಪಿಆರ್‌ಐ ತಿಳಿಸಿತ್ತು.

    ಇದನ್ನೂ ಓದಿ: ಇಷ್ಟಪಟ್ಟವಳನ್ನು ವರಿಸಲು ಸುಶಾಂತ್​ಗೆ ಸಿಕ್ಕಿತ್ತು ಹಸಿರು ನಿಶಾನೆ! ಯಾರವಳು?

    ಇದೀಗ ಚೀನಾ ಮತ್ತು ಭಾರತದ ನಡುವೆ ಲಡಾಖ್​ ಗಡಿವಿವಾದ ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ವರದಿಯನ್ನು ಎಸ್​ಐಪಿಆರ್​ಐ ಬಹಿರಂಗಪಡಿಸಿದೆ.

    ‘ತನ್ನ ಅಣ್ವಸ್ತ್ರ ಸಂಗ್ರಹವನ್ನು ಆಧುನೀಕರಣಗೊಳಿಸುವತ್ತ ಚೀನಾ ಹೆಜ್ಜೆ ಇರಿಸಿದೆ. ಚೀನಾ ಇದೇ ಮೊದಲ ಬಾರಿಗೆ ಭೂಮಿಯಿಂದ, ಸಬ್‌ಮೆರಿನ್‌ಗಳಿಂದ ಮತ್ತು ಯುದ್ಧವಿಮಾನಗಳಿಂದ ಉಡಾವಣೆಗೊಳ್ಳುವ ಅಣು ಕ್ಷಿಪಣಿಗಳ ಅಭಿವೃದ್ಧಿಯತ್ತ ದೃಷ್ಟಿಹರಿಸಿದೆ, ಭೂ ಮತ್ತು ಸಮುದ್ರ ಆಧಾರಿತ ಕ್ಷಿಪಣಿಗಳು ಮತ್ತು ಪರಮಾಣು ಸಾಮರ್ಥ್ಯದ ಯುದ್ಧ ವಿಮಾನಗಳನ್ನು ಅತ್ಯಾಧುನಿಕ ಶೈಲಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ವರದಿ ಹೇಳಿದೆ.

    ವಿಶ್ವದ ಶೇ.90ರಷ್ಟು ಅಣ್ವಸ್ತ್ರಗಳನ್ನು ರಷ್ಯಾ ಮತ್ತು ಅಮೆರಿಕ ರಾಷ್ಟ್ರಗಳೆರೆಡೇ ಹೊಂದಿವೆ. ರಷ್ಯಾದಲ್ಲಿ 6,375 ಅಣ್ವಸ್ತ್ರಗಳಿದ್ದರೆ, ಅಮೆರಿಕದಲ್ಲಿ 5,800 ಇರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.ಭಾರತ ಸೇರಿದಂತೆ ಅಮೆರಿಕ, ರಷ್ಯಾ, ಇಂಗ್ಲೆಂಡ್, ಫ್ರಾನ್ಸ್, ಚೀನಾ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯಾ ರಾಷ್ಟ್ರಗಳು ಮಾತ್ರ ಅಣ್ವಸ್ತ್ರಗಳನ್ನು ಹೊಂದುವ ಅವಕಾಶ ಹೊಂದಿವೆ. (ಏಜೆನ್ಸೀಸ್​)

    ತಮಿಳುನಾಡಿನಲ್ಲಿ ನಾಲ್ಕು ಜಿಲ್ಲೆಗಳು ಸಂಪೂರ್ಣ ಲಾಕ್​ಡೌನ್​: ಮುಖ್ಯಮಂತ್ರಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts