More

    ಬಾಹ್ಯಾಕಾಶದ ವೈವಿಧ್ಯತೆ ವೀಕ್ಷಿಸಿದ ಮಕ್ಕಳು

    ಮೇಲುಕೋಟೆ: ಬಾಹ್ಯಾಕಾಶದ ವಿಶೇಷತೆಗಳನ್ನು ಶಾಲಾ ಮಕ್ಕಳಿಗೆ ತಿಳಿಸಲು ಕೇಂದ್ರ ಸರ್ಕಾರದ ಚಕ್ರದ ಮೇಲೆ ಅಂತರಿಕ್ಷ (ಸ್ಪೇಸ್ ಆನ್ ವ್ಹೀಲ್ಸ್ ) ವಿಶೇಷ ಬಸ್ ರೂಪಿಸಿ ಶಾಲೆಗಳ ಬಳಿಗೆ ಹೋಗಿ ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆ ಎಂದು ಇಸ್ರೋ ವಿಜ್ಞಾನಿ ಡಾ.ಶ್ರೀನಿವಾಸ್ ತಿಳಿಸಿದರು.

    ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಮೇಲುಕೋಟೆಯಲ್ಲಿ ಆಯೋಜಿಸಿದ್ದ ಬಾಹ್ಯಾಕಾಶದ ವೈವಿಧ್ಯತೆಯ ಬಸ್ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜು ಮಕ್ಕಳಿಗೆ ವಿಶ್ವ ಬಾಹ್ಯಾಕಾಶ ಸಪ್ತಾಹದ ನಿಮಿತ್ತ ಅಂತರಿಕ್ಷ ವಿಶೇಷತೆ, ಇಸ್ರೋ ಸಾಧನೆಯ ವಿವರ, ವಿವಿಧ ಉಪಗ್ರಹಗಳ ಮಾಹಿತಿ, ಮಂಗಳಗ್ರಹ ಹಾಗೂ ಚಂದ್ರಯಾನದ-2 ಬಾಹ್ಯಾಕಾಶದಿಂದ ಭೂಮಿಯ ಚಿತ್ರಣ ಸೇರಿದಂತೆ ಮುಂತಾದ ವಿಶೇಷತೆ ಪರಿಚಯಿಸುವ ಸಲುವಾಗಿ ಇಸ್ರೋ ಸ್ಪೇಸ್ ಆನ್‌ವ್ಹೀಲ್ಸ್ ಬಸ್ ಪ್ರದರ್ಶನ ಆಯೋಜಿಸಿದೆ ಎಂದರು.

    ಮಕ್ಕಳು ಬಾಹ್ಯಾಕಾಶದ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸುವ ಗುಣ ಹೊಂದಲು ಪ್ರೇರೇಪಿಸಲಾಗಿದೆ. ಉತ್ತರ ಕರ್ನಾಟಕ, ತಮಿಳುನಾಡು ಸೇರಿದಂತೆ ನಾನಾ ಕಡೆ ಲಕ್ಷಾಂತರ ಮಕ್ಕಳು ಪ್ರದರ್ಶನ ವೀಕ್ಷಿಸಿದ್ದಾರೆ. ಇಸ್ರೋ ಯಶಸ್ವಿ ಚಂದ್ರಯಾನ ನಡೆಸುವ ಮೂಲಕ ಭಾರತಕ್ಕೆ ಅಳಿಲು ಸೇವೆ ಮಾಡಿದೆ. 600ಕ್ಕೂ ಹೆಚ್ಚು ವಿಜ್ಞಾನಿಗಳು ನೂರಾರು ತಂತ್ರಜ್ಞರು ಈ ಬೃಹತ್ ಯಜ್ಞದಲ್ಲಿ ತೊಡಗಿದ್ದರು. ಸರ್ಕಾರಿ ಶಾಲಾ ಮಕ್ಕಳು ಇಸ್ರೋಗೆ ಬಂದು ವೀಕ್ಷಿಸಲು ಸಾಧ್ಯವಿಲ್ಲದ ಕಾರಣ ಶಾಲೆ ಬಳಿಗೆ ಇಸ್ರೋ ಬಸ್ ಕೊಂಡೊಯ್ಯುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಇಸ್ರೋ ಭಾರತದ ಹೆಮ್ಮೆಯಾಗಿದ್ದು ಚಂದ್ರಯಾನದ ಯಶಸ್ಸಿನಲ್ಲಿ ವಿಜ್ಞಾನಿಗಳ ಕೊಡುಗೆ ಅವಿಸ್ಮರಣೀಯವಾಗಿದೆ. ಯಶಸ್ವಿ ಚಂದ್ರಯಾನದ ಸಾಧನೆಗೆ ವಿಶ್ವದೆಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಸ್ರೋ ವಿಜ್ಞಾನಿಗಳು ವಿಶ್ವ ಬಾಹ್ಯಾಕಾಶ ಸಾಪ್ತಾಹದ ವೇಳೆ ಮೇಲುಕೋಟೆಗೆ ಬಂದು ಶಾಲಾ- ಕಾಲೇಜು ಮಕ್ಕಳಿಗೆ ಅಂತರಿಕ್ಷದ ಮಾಹಿತಿ ನೀಡಿರುವುದು ಅವಿಸ್ಮರಣೀಯವಾಗಿದೆ ಎಂದರು.
    ಇಸ್ರೋ ವಿಜ್ಞಾನಿಗಳಾದ ಡಾ.ಶ್ರೀನಾಥ್, ಡಾ.ವಿಶ್ವನಾಥ್, ಡಾ.ಮಾಲತಿ, ಡಾ.ಆಕಾಶ್, ಡಾ.ಪ್ರೀತಿ ಮಹದೇವ್, ಎಸ್‌ಇಟಿ ಸಮೂಹ ಶಿಕ್ಷಣ ಸಂಸ್ಥೆಗಳ ರಿಜಿಸ್ಟಾರ್ ನಿಂಗೇಗೌಡ, ಸಿಆರ್‌ಪಿ ಬೆಟ್ಟಸ್ವಾಮಿಗೌಡ, ಯದುಶೈಲಾ ಪ್ರೌಢಶಾಲೆ ಮುಖ್ಯಶಿಕ್ಷಕ ವಸಂತಕುಮಾರ್, ಬಾಲಕಿಯರ ಶಾಲೆ ಮುಖ್ಯಶಿಕ್ಷಕ ಮಂಜುನಾಥ್ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts