More

    ಮಹಿಳಾ ಅಧಿಕಾರಿಯಿಂದಲೇ ಮಕ್ಕಳ ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ!; ಸರಿಯೇ ಇಲ್ಲ ಈ ಸರಯೂ ಚಾರಿಟಬಲ್ ಟ್ರಸ್ಟ್​

    ಬೆಂಗಳೂರು: ಭಿಕ್ಷಾಟನೆ ಮಾಡುವ ಮಕ್ಕಳ ರಕ್ಷಣೆ ನೆಪದಲ್ಲಿ ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಟ್ರಸ್ಟ್ ಮೂಲಕವೇ ಅವರ ಕಳ್ಳಸಾಗಣೆ ಮಾಡಿರುವ ಹಾಗೂ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಬೆಂಗಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಧ್ಯಾಹ್ನದ ಬಿಸಿಯೂಟ ವಿಭಾಗದ ಸಹಾಯಕ ನಿರ್ದೇಶಕಿಯಾಗಿರುವ ನಾಗರತ್ನ ಈ ದಂಧೆಯಲ್ಲಿ ಭಾಗಿಯಾದ ಅಧಿಕಾರಿ. ಬೆಂಗಳೂರಿನ ವಿಜಯನಗರದಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಟ್ರಸ್ಟ್ ಮೂಲಕ ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತಿತ್ತು ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

    ನಾಗರತ್ನ ‘ಸರಯೂ ಚಾರಿಟಬಲ್ ಟ್ರಸ್ಟ್’ ಹೆಸರಿನ ಅನಧಿಕೃತ ಟ್ರಸ್ಟ್ ನಡೆಸುತ್ತಿದ್ದಾರೆಂದು ಕಾನೂನು ಸೇವಾ ಪ್ರಾಧಿಕಾರ ವರದಿ ಸಲ್ಲಿಸಿದೆ. ಕಳ್ಳಸಾಗಣೆ ಹಾಗೂ ಲೈಂಗಿಕ ದೌರ್ಜನ್ಯದ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಿದೆ. ಇದೇ ಪ್ರಕರಣದಲ್ಲಿ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಪ್ರಸನ್ನ ಕುಮಾರ್ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ, ನಾಗರತ್ನ ಟ್ರಸ್ಟ್ ನಡೆಸುತ್ತಿರುವ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ. ಸರ್ಕಾರಿ ಶಾಲೆಯ ಆವರಣದಲ್ಲಿ ನಾಗರತ್ನ ಅಕ್ರಮವಾಗಿ ಟ್ರಸ್ಟ್ ನಡೆಸುತ್ತಿದ್ದು, ಅಲ್ಲಿ ಮಕ್ಕಳ ಕಳ್ಳಸಾಗಣೆ ನಡೆಯುತ್ತಿದೆ ಎಂಬ ವಿಚಾರ ತಿಳಿದ ನಂತರ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಶನಿವಾರ ನಡೆದ ವಿಚಾರಣೆ ವೇಳೆ ಪ್ರಶ್ನಿಸಿದೆ. ಈ ಕುರಿತು ಜೂ.18ರ ಒಳಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

    ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

    ಬಹಿರಂಗವಾಗಿದ್ದು ಹೇಗೆ?: ಬೆಂಗಳೂರಿನಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ಹೈಕೋರ್ಟ್ ಸೂಚಿಸಿತ್ತು. ಪ್ರಾಧಿಕಾರ ಮಕ್ಕಳ ಸಮೀಕ್ಷೆ ಆರಂಭಿಸುತ್ತಿದ್ದಂತೆಯೇ, ವಿಜಯನಗರ ಬಿಇಒ ಆಗಿದ್ದ ನಾಗರತ್ನ ನಡೆಸುತ್ತಿರುವ ಸರಯೂ ಚಾರಿಟಬಲ್ ಟ್ರಸ್ಟ್‌ನ ನಾಲ್ವರು ಮಕ್ಕಳು ಪಾಲಕರ ಜತೆ ಮಧ್ಯಪ್ರದೇಶಕ್ಕೆ ತೆರಳಿದ್ದು, ಹಿಂದಿರುಗಿ ಬಂದಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ತಕ್ಷಣ ಮಧ್ಯಪ್ರದೇಶ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿದ್ದ ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ್ ಶೆಟ್ಟಿ ನೇತೃತ್ವದ ತಂಡ ಮಕ್ಕಳ ಬಗ್ಗೆ ಮಾಹಿತಿ ನೀಡಿತ್ತು. ಆಗ ಪತ್ತೆಯಾಗಿದ್ದ ಮಕ್ಕಳು, ಸರಯೂ ಟ್ರಸ್ಟ್‌ನಲ್ಲಿ ತಮ್ಮನ್ನು ಲೈಂಗಿಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂದು ತಿಳಿಸಿದ್ದರು. ತಕ್ಷಣ ಸರಯೂ ಟ್ರಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದಾಗ ಕಳೆದ 8 ವರ್ಷಗಳಿಂದ ವಿಜಯನಗರ ಸುತ್ತಲಿನ ಪ್ರದೇಶಗಳಲ್ಲಿ ಆಟಿಕೆಗಳನ್ನು ಮಾರುತ್ತಿದ್ದ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿದ್ದ 33 ಮಕ್ಕಳನ್ನು ಟ್ರಸ್ಟ್‌ನಲ್ಲಿ ನಿಯಂತ್ರಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು.

    ಇದನ್ನೂ ಓದಿ: ಹೆಂಡತಿಯನ್ನು ಇನ್ನೊಬ್ಬನ ಜತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಗಂಡ; ಇಬ್ಬರನ್ನೂ ಹೊರಕ್ಕೆಳೆದು ಕಂಬಕ್ಕೆ ಕಟ್ಟಿ ಥಳಿಸಿದ..

    ಟ್ರಸ್ಟ್‌ನಲ್ಲಿ ಪುರುಷ ಸಿಬ್ಬಂದಿ: ವಿಜಯನಗರ ಹೊಸಹಳ್ಳಿ 9ನೇ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಶಾಲಾ ಆವರಣದಲ್ಲೇ ಸರಯೂ ಚಾರಿಟಬಲ್ ಟ್ರಸ್ಟ್‌ನಡಿ ಮಕ್ಕಳ ಪಾಲನಾ ಸಂಸ್ಥೆ ನಡೆಸುತ್ತಿದ್ದರು. ಬಾಲ ನ್ಯಾಯ ಕಾಯ್ದೆ 41ರ ಪ್ರಕಾರ ತಾತ್ಕಾಲಿಕ ನೋಂದಣಿ ಪತ್ರವನ್ನೂ ಸಹ ಪಡೆದಿರಲಿಲ್ಲ. 19 ಗಂಡು ಮತ್ತು 14 ಹೆಣ್ಣು ಮಕ್ಕಳನ್ನು ಇಟ್ಟುಕೊಂಡಿದ್ದರು. ಮಕ್ಕಳನ್ನು ನೋಡಿಕೊಳ್ಳಲು ಪುರುಷ ಸಿಬ್ಬಂದಿಯನ್ನು ನೇಮಿಸಿದ್ದರು. ಬಾಲ ನ್ಯಾಯ ಕಾಯ್ದೆ 2015ರ ಉಲ್ಲಂಘನೆಯಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಮ್ತಾಜ್ ಅವರು ನಾಗರತ್ನ, ಸಾದಿಕ್ ಪಾಷ ಹಾಗೂ ಸುಮೇರಾ ಎನ್ನುವವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್​ಐಆರ್ ದಾಖಲಾಗಿದ್ದು, ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹೂತಿಟ್ಟ 20 ದಿನಗಳ ಬಳಿಕ ಶವ ಹೊರಕ್ಕೆ ತೆಗೆಸಿದ ಪೊಲೀಸರು!; ಅದು ಬರೀ ಸಾವಲ್ಲ, ಕೊಲೆ..

    ಊಟ ಕೇಳಿದ 82 ವರ್ಷದ ತಾಯಿಗೆ ಹೊಡೆದು ಮನೆಯಿಂದ ಹೊರಹಾಕಿದ ಮಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts