ಮಕ್ಕಳಿಗೆ ಪ್ರೀತಿ, ಆರೈಕೆಯ ಕೊರತೆ ಸಲ್ಲ : ಶೈಕ್ಷಣಿಕ ಪ್ರಗತಿಗೆ ಶಾಲೆ ವಾಸ್ತವ್ಯ ಕಾರ್ಯಕ್ರಮದಲ್ಲಿ ಬಿಇಒ ವೀರಭದ್ರಯ್ಯ ಸಲಹೆ

1 Min Read
ಮಕ್ಕಳಿಗೆ ಪ್ರೀತಿ, ಆರೈಕೆಯ ಕೊರತೆ ಸಲ್ಲ : ಶೈಕ್ಷಣಿಕ ಪ್ರಗತಿಗೆ ಶಾಲೆ ವಾಸ್ತವ್ಯ ಕಾರ್ಯಕ್ರಮದಲ್ಲಿ ಬಿಇಒ ವೀರಭದ್ರಯ್ಯ ಸಲಹೆ

ಹರಪನಹಳ್ಳಿ: ಪಾಲಕರ ಪ್ರೀತಿ ಹಾಗೂ ಆರೈಕೆ ಕೊರತೆಯಾದರೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ ಹೇಳಿದರು.

ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರೌಢಶಾಲೆ ವಿಷಯವಾರು ಶಿಕ್ಷಕರ ಕ್ಲಬ್ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಶೈಕ್ಷಣಿಕ ಅಭಿವೃದ್ಧಿಗಾಗಿ ಶಾಲೆ ವಾಸ್ತವ್ಯ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲೆಗೆ ಕಳಿಸಿದಾಕ್ಷಣ ಪಾಲಕರ ಜವಾಬ್ದಾರಿ ಮುಗಿದಂತಲ್ಲ. ಮಕ್ಕಳ ಅಭ್ಯಾಸದ ಬಗ್ಗೆ ಗಮನಿಸುವ ಅಗತ್ಯವಿದೆ. ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿ ಮಾಡಿ. ವೈಯಕ್ತಿಕ ಕೆಲಸಗಳ ಒತ್ತಡ ಮಕ್ಕಳ ಮೇಲೆ ಹೇರದೇ ಅವರ ಶಿಕ್ಷಣದ ಅಭಿವೃದ್ಧಿಗೆ ಸಮಯ ಮೀಸಲಿಡಿ. ಅದೇ ನೀವು ಮಕ್ಕಳಿಗೆ ನೀಡುವ ಪ್ರೋತ್ಸಾಹ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್‌ಭಟ್ ಮಾತನಾಡಿ, ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. ಆಗ ಮಾತ್ರ ಸಾಧನೆಯ ಮೆಟ್ಟಿಲು ಸರಳ. ಮಕ್ಕಳ ಏಳ್ಗೆಗೆ ನೀವು ಕಂಡ ಕನಸು ಆಸಕ್ತಿ ಕಳೆದುಕೊಳ್ಳದಿರಲಿ. ಸಹನೆ-ಸಂಸ್ಕಾರ ಕಲಿಸಿ ಓದು ತಾನಾಗೇ ಸರಳೀಕರಣಗೊಳ್ಳುತ್ತದೆ ಎಂದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೂವಣ್ಣ, ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ, ಜೆ.ತಿಪ್ಪೇಸ್ವಾಮಿ, ಎಸ್‌ಡಿಎಂಸಿ ಸದಸ್ಯ ಮದನ್‌ಕುಮಾರ್, ವಿವಿಎಸ್ ಮುಖ್ಯೋಪಾಧ್ಯಾಯ ಕೊಟ್ರಬಸಪ್ಪ, ಉಪ ಪ್ರಾಚಾರ್ಯ ಮಮ್ತಾಜ್‌ಬೇಗಂ, ಶಿಕ್ಷಕಿ ಲತಾ ರಾಠೋಡ್ ಅನೇಕರು ಉಪಸ್ಥಿತರಿದ್ದರು.

See also  ತಂಗಿಗಾಗಿ ಅಕ್ಕನನ್ನೇ ನಗ್ನಗೊಳಿಸಿದ! ಸಹಾಯಕ್ಕೆ ಕೇಳಿ ಬರಲಿ ಎಂದು ಕಾದಿದ್ದವನಿಗೆ ಕಾದಿತ್ತು ದೊಡ್ಡ ಶಾಕ್​!
Share This Article