More

    ಮಕ್ಕಳ ಭವಿಷ್ಯಕ್ಕೆ ಮೊಬೈಲ್ ಮುಳ್ಳು

    ದಾವಣಗೆರೆ: ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಅವರ ಭವಿಷ್ಯಕ್ಕೆ ನಾವೇ ಮುಳ್ಳಾಗುತ್ತೇವೆ ಎಂದು ಡಿಸಿಎಂ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಆರ್.ಭೋಜರಾಜ ಯಾದವ್ ಹೇಳಿದರು.

    ನಗರದ ಡಿಸಿಎಂ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಾ ದಿನದಲ್ಲಿ ಮಾತನಾಡಿದರು.

    ಚಿಕ್ಕ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಟಿವಿ, ಮೊಬೈಲ್ ದಾಸರಾಗುವುದನ್ನು ತಪ್ಪಿಸಬೇಕು. ಮಕ್ಕಳು ದೊಡ್ಡವರಾದ ಮೇಲೆ ತಾವೇ ಓದಿ, ಬರೆಯಲು ಶಕ್ತರಾಗುತ್ತಾರೆ. ಆದರೆ ಪ್ರಾಥಮಿಕ ಹಂತದಲ್ಲಿಯೇ ಅವರನ್ನು ತಿದ್ದುವ ಅಗತ್ಯವಿರುತ್ತದೆ ಎಂದರು.

    ಶಿಕ್ಷಕರು ಶಾಲೆಯಲ್ಲಿ ಮಾತ್ರ ಪಾಠ ಹೇಳಿ ಕೊಡಬಹುದು. ಆದರೆ ಮನೆಯಲ್ಲಿ ಅವರಿಗೆ ಓದುವ ವಾತಾವರಣ ನಿರ್ವಿುಸಿಕೊಡುವ ಜವಾಬ್ದಾರಿ ಪಾಲಕರ ಮೇಲಿರುತ್ತದೆ ಎಂದು ಅಭಿಪ್ರಾಯಪಟ್ಟರು.

    ಮಕ್ಕಳ ಭವಿಷ್ಯಕ್ಕೆ ಮೊಬೈಲ್ ಮುಳ್ಳು

    ಹೈಸ್ಕೂಲ್ ಮುಖ್ಯ ಶಿಕ್ಷಕ ಎಚ್. ಎಸ್. ಹಾಲೇಶ್ ಮಾತನಾಡಿ, ಮಕ್ಕಳು ಪ್ರತಿಭೆ ಪ್ರದರ್ಶಿಸಲು ಇಲ್ಲಿ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಇಂಗ್ಲಿಷ್ ವಿಭಾಗದ ಮುಖ್ಯಶಿಕ್ಷಕ ಬಸನಗೌಡ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಕೆ.ಎಲ್. ರಾಧಾ ಮಾತನಾಡಿದರು.

    ಪ್ರಾಥಮಿಕ ಶಾಲೆ ಮಕ್ಕಳು ನೃತ್ಯ, ಹಾಡು, ಕತೆ ಹೇಳುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು.

    ಕೆ.ಎಂ. ಬಸವರಾಜಪ್ಪ ಸ್ವಾಗತಿಸಿದರು. ಶಿಕ್ಷಕ ರಾಜಭಕ್ಷಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts