More

    ಮಕ್ಕಳಿಗಾಗಿ ಬೀದಿ ಬೆಕ್ಕುಗಳನ್ನು ಬೇಟೆ ಆಡುವ ಸ್ಪರ್ಧೆ ಬಗ್ಗೆ ಕೇಳಿದ್ದೀರಾ?!

    ನವದೆಹಲಿ: ನ್ಯೂಜಿಲೆಂಡ್‌ನಲ್ಲಿ ವಾರ್ಷಿಕ ಬೆಕ್ಕಿನ ಬೇಟೆಯ ಸ್ಪರ್ಧೆಯ ಸಂಘಟಕರು ಈ ಸ್ಪರ್ಧೆಯಲ್ಲಿ ಮಕ್ಕಳಿಗೆ ಕಾಡು ಬೆಕ್ಕುಗಳನ್ನು ಕೊಲ್ಲಬೇಕು ಎಂಬ ವಿಚಾರ ಬಹಿರಂಗವಾದ ನಂತರ ಆಯೋಜಕರು ಆಕ್ರೋಶವನ್ನು ಎದುರಿಸಿದ್ದರು.

    ವಿವರಗಳ ಪ್ರಕಾರ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಕಾಡು ಬೆಕ್ಕುಗಳನ್ನು ಬೇಟೆಯಾಡಬೇಕಾಗುತ್ತದೆ ಎಂದು ಸಂಘಟಕರು ಘೋಷಿಸಿದ್ದರು. ಸಾಕುಪ್ರಾಣಿಗಳನ್ನು ಕೊಲ್ಲಬೇಡಿ ಎಂದು ಮಕ್ಕಳಿಗೆ ಹೇಳಲಾಗಿತ್ತು. ಆದರೆ ಬಹುಮಾನಕ್ಕಾಗಿ ಸಾಧ್ಯವಾದಷ್ಟು ಕಾಡು ಬೆಕ್ಕುಗಳನ್ನು ಕೊಲ್ಲಲು ಸಣ್ಣ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.

    ಬೀದಿ ಬೆಕ್ಕುಗಳನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ?

    ನ್ಯೂಜಿಲೆಂಡ್‌ನಲ್ಲಿ, ಕಾಡು ಬೆಕ್ಕುಗಳನ್ನು ಹೊರಗಿನಿಂದ ಬಂದ ಜೀವಿಗಳು ಎಂದು ಪರಿಗಣಿಸಲಾಗುತ್ತದೆ. ಇವು ಆ ದೇಶದ ಜೈವಿಕ ಭದ್ರತೆಗೆ ಅಪಾಯವನ್ನುಂಟುಮಾಡುತ್ತವೆ.

    ಕಾರ್ಯಕ್ರಮದ ರದ್ದತಿಯ ಕುರಿತು ಪ್ರತಿಕ್ರಿಯಿಸಿದ ನ್ಯೂಜಿಲೆಂಡ್‌ನ ‘ಸೊಸೈಟಿ ಫಾರ್ ದಿ ಪ್ರಿವೆನ್ಶನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್‌’ನ ಪ್ರತಿನಿಧಿ ಮಂಗಳವಾರ, “ಮಕ್ಕಳಿಗೆ ಒಂದು ದಾರಿತಪ್ಪಿ ಅಥವಾ ಭಯಭೀತವಾದ ಸಾಕು ಬೆಕ್ಕು ಮತ್ತು ಬೀದಿ ಬೆಕ್ಕಿನ ನಡುವೆ ಇರುವ ವ್ಯತ್ಯಾಸ ತಿಳಿಯುವುದಿಲ್ಲ” ಇದರಿಂದಾಗಿ ಸಾಕು ಬೆಕ್ಕುಗಳು ಕೊಲ್ಲಲ್ಪಡುತ್ತವೆ ಎಂಬ ಭಯವಿತ್ತು.

    ಇದನ್ನೂ ಓದಿ: ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ 2 ಬೆಕ್ಕುಗಳನ್ನು ಪತ್ತೆಹಚ್ಚಿ!

    “ನಾವು ನಮ್ಮ ಮಕ್ಕಳಿಗೆ ಪ್ರಾಣಿಗಳ ಬಗ್ಗೆ ಸಹಾನುಭೂತಿಯನ್ನು ಕಲಿಸಬೇಕು, ಅವರಿಗೆ ಪ್ರಾಣಿಗಳನ್ನು ಕೊಲ್ಲುವ ಸಾಧನಗಳನ್ನು ಕೊಡಬಾರದು’ ಎಂದು ಪ್ರಾಣಿ ಕಲ್ಯಾಣ ಚಾರಿಟಿ ಸೇಫ್‌ನ ವಕ್ತಾರರು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದರು.

    ಕೊನೆಗೂ ರದ್ದಾಯಿತು ಬೇಟೆ ಕಾರ್ಯಕ್ರಮ!

    ನ್ಯೂಜಿಲೆಂಡ್‌ನ ಬಹುಪಾಲು ಗ್ರಾಮೀಣ ಪ್ರದೇಶವಾದ ಸೌತ್ ಐಲ್ಯಾಂಡ್‌ನ ಉತ್ತರ ಕ್ಯಾಂಟರ್‌ಬರಿಯಲ್ಲಿ ಬೇಟೆಯಾಡುವುದು ಜನಪ್ರಿಯವಾಗಿದೆ. ಅಲ್ಲಿನ ಸ್ಥಳೀಯ ಶಾಲೆಗಾಗಿ ಜೂನ್‌ನಲ್ಲಿ ನಿಧಿಸಂಗ್ರಹದ ಭಾಗವಾಗಿ ಈ ಬೇಟೆ ಆಡುವ ಕಾರ್ಯಕ್ರಮವನ್ನು ಘೋಷಿಸಲಾಗಿತ್ತು.

    ಪ್ರತಿ ವರ್ಷ ನಡೆಯುವ ಸ್ಪರ್ಧೆಯಲ್ಲಿ ಮಕ್ಕಳು ಸೇರಿದಂತೆ ನೂರಾರು ಜನರು ಕಾಡು ಹಂದಿಗಳು, ಜಿಂಕೆಗಳು ಮತ್ತು ಮೊಲಗಳನ್ನು ಬೇಟೆ ಆಡಲು ಸ್ಪರ್ಧಿಸುತ್ತಾರೆ.

    ಉತ್ತರ ಕ್ಯಾಂಟರ್ಬರಿ ಹಂಟಿಂಗ್ ಸ್ಪರ್ಧೆಯ ಸಂಘಟಕರು ಮಂಗಳವಾರ ಕ್ಯಾಟ್ ಈವೆಂಟ್ ಅನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದು ಅವರು ಈ ಕಾರ್ಯಕ್ರಮದ ಬಗ್ಗೆ “ಕೆಟ್ಟ ಮತ್ತು ಅನುಚಿತ ಇಮೇಲ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು.

    ಇದನ್ನೂ ಓದಿ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು

    ‘ನಮ್ಮ ಸ್ಥಳೀಯ ಪಕ್ಷಿಗಳು ಮತ್ತು ಇತರ ದುರ್ಬಲ ಪ್ರಾಣಿಗಳ ಜಾತಿಗಳನ್ನು ರಕ್ಷಿಸುವ ಬಗ್ಗೆ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದವರಿಗೆ ನಾವು ನಿರಾಶೆ ಮಾಡಿದ್ದು ಈ ಬಗ್ಗೆ ನಾವು ಕ್ಷಮೆಯಾಚಿಸುತ್ತೇವೆ” ಎಂದು ಆಯೋಜಕರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts