More

    ಕರೊನಾ ಮೂರನೇ ಅಲೆಗೆ ಮಕ್ಕಳೇ ಟಾರ್ಗೆಟ್! ರಕ್ಷಣೆ ಹೇಗೆ? ಇಲ್ಲಿದೆ ತಜ್ಞ ವೈದ್ಯರು ಕೊಟ್ಟ ಮಹತ್ವದ ಸಲಹೆ

    ಕರೊನಾದ ಮೊದಲ ಮತ್ತು ಎರಡನೇ ಅಲೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ಸಾರ್ವಜನಿಕರು, ಮೂರನೇ ಅಲೆ ಹೆಚ್ಚಾಗಿ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತದೆ ಎಂಬ ಆತಂಕಕಾರಿ ಮಾಹಿತಿಯಿಂದ ಇನ್ನಷ್ಟು ಭಯಭೀತಗೊಂಡಿದ್ದಾರೆ. ಇನ್ನು ಕೆಲವು ತಿಂಗಳಲ್ಲಿ ಬರಲಿದೆ ಎನ್ನಲಾದ ಈ ಮೂರನೇ ಅಲೆ ಎಷ್ಟು ಪರಿಣಾಮಕಾರಿ ಆಗಿರುತ್ತದೆ, ಯಾರ್ಯಾರ ಮೇಲೆ ಇದರ ಎಫೆಕ್ಟ್ ಹೆಚ್ಚಾಗಿರುತ್ತದೆ? ಅದರಿಂದ ರಕ್ಷಿಸಿಕೊಳ್ಳಲು ಏನೇನು ಮಾಡಬೇಕು? ಈ ಬಗ್ಗೆ ತಜ್ಞರು ಏನಂತಾರೆ? ಇಲ್ಲಿದೆ ವಿವರ.

    ನಿರೂಪಣೆ: ಅರುಣ ಎಂ.ಜಿ.

    ಮಕ್ಕಳ ಮೇಲೆ ಸೋಂಕಿನ ಪರಿಣಾಮ ಎಷ್ಟಿರುತ್ತೆ?

    ಕರೊನಾ ಮೂರನೇ ಅಲೆಗೆ ಮಕ್ಕಳೇ ಟಾರ್ಗೆಟ್! ರಕ್ಷಣೆ ಹೇಗೆ? ಇಲ್ಲಿದೆ ತಜ್ಞ ವೈದ್ಯರು ಕೊಟ್ಟ ಮಹತ್ವದ ಸಲಹೆದೇಶದ ಜನಸಂಖ್ಯೆ ಯಲ್ಲಿ 18 ವರ್ಷದೊಳಗಿ ನವರೇ ಶೇ. 40ರಷ್ಟು ಇದ್ದಾರೆ. ಕರೊನಾ 3ನೇ ಅಲೆಗೆ ಮಕ್ಕಳೇ ಟಾರ್ಗೆಟ್ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ದೊಡ್ಡವರು ಮತ್ತು ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಮತ್ತು ಸೋಂಕನ್ನು ಎದುರಿಸುವ ಕ್ಷಮತೆ ಬೇರೆ ಬೇರೆ ರೀತಿ ಇರುತ್ತದೆ. ಬಹುಶಃ ಈಗಾಗಲೇ ತೆಗೆದುಕೊಂಡ ಪ್ಲೂ, ಎಂಎಂಆರ್ ಲಸಿಕೆಗಳು ಪರೋಕ್ಷವಾಗಿ ಮಕ್ಕಳಿಗೆ ರಕ್ಷಣೆ ನೀಡುತ್ತಿವೆ. ದೊಡ್ಡವರಿಗೆ ಹೋಲಿಸಿದರೆ ಮಕ್ಕಳ ಅಂಗಾಂಗಗಳು ಸೋಂಕನ್ನು ಎದುರಿಸುವ ಮತ್ತು ಚೇತರಿಸಿಕೊಳ್ಳುವ ಸಾಮರ್ಥ್ಯ ಜಾಸ್ತಿ ಹೊಂದಿರುತ್ತವೆ. ಇಷ್ಟಿದ್ದರೂ ಮಕ್ಕಳಿಗೆ ಕರೊನಾ ತಗುಲಿದಾಗ ರೋಗ ಲಕ್ಷಣ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ ಅವರಿಂದ ಇತರರಿಗೆ ಹರಡುವ ಸಾಧ್ಯತೆ ಹೆಚ್ಚು.

    ನಮ್ಮ ದೇಶದಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಕರೊನಾ ವ್ಯಾಕ್ಸಿನ್ ಹಾಕಿಲ್ಲ. ಈ ಅಂಶವನ್ನೇ ಪರಿಗಣಿಸಿ ನೋಡಿದಾಗ ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಬಹುಶಃ ತೊಂದರೆ ಆಗಬಹುದು. ಮಕ್ಕಳಿಗೂ ವ್ಯಾಕ್ಸಿನ್ ಕೊಡುವುದು ಹೇಗೆ ಎಂದು ಟ್ರಯಲ್ ನಡೆಯುತ್ತಿದೆ. ಯಾವುದೇ ಕೆಟಗರಿ ಆಗಲಿ ವ್ಯಾಕ್ಸಿನ್ ಹಾಕಿಸಿಕೊಳ್ಳದ ವ್ಯಕ್ತಿಗಳೇ ಸೂಪರ್ ಸ್ಪ್ರೆಡರ್ ಆಗ್ತಾರೆ. ಅಲ್ಲದೆ ಅವರಲ್ಲಿ ರೋಗದ ತೀವ್ರತೆ ಹೆಚ್ಚಿರುತ್ತೆ. ಒಂದು ಬಾರಿ ವ್ಯಾಕ್ಸಿನ್ ಹಾಕಿಸಿಕೊಂಡವರೇನೂ ಸೇಫಲ್ಲ. ಎರಡು ಡೋಸ್ ಹಾಕಿಸಿಕೊಳ್ಳಲೇಬೇಕು. 1 ಮತ್ತು 2ನೇ ಅಲೆಯಲ್ಲಿ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವವರ ಸಂಖ್ಯೆಯಲ್ಲೂ ಮಕ್ಕಳ ಪ್ರಮಾಣ ಕಡಿಮೆ ಎಂಬುದು ಸಮಾಧಾನಕರ. ಎಷ್ಟೇ ಅಲೆ ಬಂದರೂ ಕರೊನಾ ವಿರುದ್ಧ ಗೆಲ್ಲಲು ಪ್ರತಿಯೊಬ್ಬರೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವಿಕೆ ಅಸ್ತ್ರವನ್ನ ಬಳಸಲೇಬೇಕು.

    ವಿಶೇಷ ಸಲಹೆ: ನಿಮ್ಮ ಮಗುವಿಗೆ ಯಾವುದಾದರೂ ದೀರ್ಘಕಾಲಿಕ ಕಾಯಿಲೆ ಇದ್ದಲ್ಲಿ, ಅಂದರೆ ಥೈರಾಯ್್ಡ ಡಯಾಬಿಟಿಸ್, ಹೃದಯಸಂಬಂಧಿ ಕಾಯಿಲೆ, ಎಚ್​ಐವಿ, ಅಂಗಾಂಗದ ಕೊರತೆ, ಕ್ರಾನಿಕ್ ಡಿಸೀಸ್ ಇದ್ದರೆ, ರೋಗದ ತೀವ್ರತೆ ಹೆಚ್ಚು. ಇದನ್ನ ತಡೆಯಲು ಈಗಿನಿಂದಲೇ ಆರೋಗ್ಯದತ್ತ ಗಮನ ಹರಿಸಬೇಕು. ಲಾಕ್​ಡೌನ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗದವರು ನಿಮ್ಮ ವೈದ್ಯರನ್ನ ದೂರವಾಣಿ ಮೂಲಕವಾದರೂ ಸಂರ್ಪಸಿ ಮಗುವಿನ ಆರೋಗ್ಯದ ಬಗ್ಗೆ ತಿಳಿಸಿ ವೈದ್ಯರ ಸಲಹೆ ಮೇರೆಗೆ ಔಷಧ ಮುಂದುವರಿಸಬೇಕು. ಇಂತಹ ಮಕ್ಕಳಿಗೆ ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮದತ್ತ ಗಮನ ಹರಿಸಿ.

    ವ್ಯಾಕ್ಸಿನ್ ಅಗತ್ಯ: ಕರೊನಾ ವ್ಯಾಕ್ಸಿನ್ ಹಾಕಿಸಿ ಕೊಂಡವರು ಮತ್ತು ಈಗಾಗಲೇ ಸೋಂಕು ಬಂದು ಗುಣವಾದವರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತೆ. ಇಂತಹವರಲ್ಲಿ ವೈರಲ್ ಲೋಡ್ ಕಡಿಮೆ ಇದ್ದು, ಸೋಂಕು ತಗುಲಿದರೂ ಹೆಚ್ಚು ತೀವ್ರತೆ ಇರುವುದಿಲ್ಲ. ಇತರರಿಗೆ ಸ್ಪ್ರೆಡ್ ಆಗುವ ಸಾಧ್ಯತೆಯೂ ಕಡಿಮೆ. ವ್ಯಾಕ್ಸಿನ್​ನಿಂದ ರೋಗದ ತೀವ್ರತೆ, ಸಾವಿನ ಪ್ರಮಾಣ, ಐಸಿಯುಗೆ ಅಡ್ಮಿಟ್ ಆಗುವ ಸಾಧ್ಯತೆ ಕಡಿಮೆ. ಹೊಸದಾಗಿ ಮಕ್ಕಳಿಗೂ ವ್ಯಾಕ್ಸಿನ್ ಹಾಕಿಸುವ ಅವಕಾಶ ಲಭ್ಯವಾದಾಗ ಹಿಂಜರಿಕೆ ಬೇಡ.

    ಮಕ್ಕಳ ಸೇಫ್ಟಿಗೆ ಪಾಲಕರು ಏನು ಮಾಡಬೇಕು?

    • ಮಕ್ಕಳ ದೈಹಿಕ ಚಟುವಟಿಕೆ, ಶ್ವಾಸಕೋಶಗಳ ಸಾಮರ್ಥ್ಯ ಚೆನ್ನಾಗಿದ್ರೆ ಕಾಯಿಲೆ ದೂರವಿರುತ್ತದೆ. ಹಾಗಾಗಿ ದೈಹಿಕ ಪರಿಶ್ರಮ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳು ಮನೆಯಲ್ಲೇ ವ್ಯಾಯಾಮ, ಯೋಗ ಮಾಡುತ್ತಾ ಆಟವಾಡಿಕೊಂಡಿದ್ದರೆ ದೇಹದಲ್ಲಿ ರಕ್ತಸಂಚಾರ ಚೆನ್ನಾಗಿರುತ್ತದೆ.
    • ಆರೋಗ್ಯಕರ ಆಹಾರ ಸೇವನೆ ಮುಖ್ಯ. ರಕ್ತಹೀನತೆ, ನಿಶ್ಶಕ್ತಿ ಇರುವ ಮಕ್ಕಳಿಗೆ ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರ ಕೊಡಬೇಕು.
    • ನಿತ್ಯ ಮೂರು ಹೊತ್ತೂ ಮಕ್ಕಳನ್ನು ಯೂಟ್ಯೂಬ್, ಟಿವಿ ಮುಂದೆ ಕೂರಲು ಬಿಡಬೇಡಿ. ಮೂವಿ ನೋಡುತ್ತಾ ಅಲ್ಲೇ ಊಟ ಮಾಡಿ ಮಲಗುವ ಮಕ್ಕಳೇ ಹೆಚ್ಚು. ಅದಕ್ಕೆ ಕಡಿವಾಣ ಹಾಕಿ ಉತ್ತಮ ಜೀವನ ಶೈಲಿ ರೂಢಿಸಿ.
    • ಕಾಂಪೌಂಡ್ ಒಳಗೆ ಅಥವಾ ಮನೆ ಒಳಗೆ ಸೇಫ್ ಅನ್ನಿಸುವ ವಾತಾವರಣದಲ್ಲಿ ಮಕ್ಕಳನ್ನ ಆಟವಾಡಲು ಬಿಡಿ.
    • ರೆಡಿಮೇಡ್ ಫುಡ್ ಬೇಡ. ಮನೆಯಲ್ಲೇ ತಯಾರಿಸಿದ ಆಹಾರ ಕೊಡಿ. ವಿಟಮಿನ್ಸ್ ಮತ್ತು ಮಿನರಲ್ಸ್ ಸಿಗುವಂತಹ, ರೋಗ ನಿರೋಧಕ ಶಕ್ತಿ ವೃದ್ಧಿಸುವ ಪ್ರೊಟೀನ್​ಯುುಕ್ತ ತಿನಿಸಿಗೆ ಆದ್ಯತೆ ಇರಲಿ. ಕಾಳು, ಬೇಳೆ, ಮೊಟ್ಟೆ, ಮೊಳಕೆ ಕಾಳು, ಹಣ್ಣು, ಬಟಾಣಿ, ರಾಜ್ಮಾ, ಅವರೆ, ಸೊಪ್ಪು, ತರಕಾರಿ, ಮೂಲಂಗಿ, ಕ್ಯಾರಟ್, ಬೀಟ್​ರೂಟ್ಸ್​ಗೆ ಆದ್ಯತೆ ಕೊಡಿ.
    • ಬಾಣಂತಿ ಮತ್ತು ಗರ್ಭಿಣಿಯರು ಮನೆಯಲ್ಲಿದ್ದರೂ ಮಾಸ್ಕ್ ಹಾಕಿಕೊಳ್ಳುವ ಹವ್ಯಾಸ ರೂಢಿಸಿಕೊಳ್ಳಬೇಕು.
    • ಅಪೌಷ್ಟಿಕತೆಯಿಂದ ಬಳಲುತ್ತಿರುವ ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಕರೊನಾ ಸೋಂಕು ಅಪಾಯಕಾರಿ ಆಗಬಹುದು. ಜಾಗ್ರತೆ ವಹಿಸಿ.
    • ಜನಸಂದಣಿ ಪ್ರದೇಶದಿಂದ ಮಕ್ಕಳನ್ನು ದೂರವಿಡಿ. ಪಾರ್ಟಿ, ಫಂಕ್ಷನ್, ಪಾರ್ಕ್ ಅಂತ ಸುತ್ತಾಡಬೇಡಿ.
    • ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡ ಕೂಡಲೇ ಪರೀಕ್ಷೆ ಮಾಡಿಸಿ ಅಗತ್ಯವಿದ್ದಲ್ಲಿ ಚಿಕಿತ್ಸೆ ಕೊಡಿಸಬೇಕು.

    ಮಕ್ಕಳನ್ನು ಭಯಪಡಿಸಬೇಡಿ

    ಕರೊನಾ ಮೂರನೇ ಅಲೆಗೆ ಮಕ್ಕಳೇ ಟಾರ್ಗೆಟ್! ರಕ್ಷಣೆ ಹೇಗೆ? ಇಲ್ಲಿದೆ ತಜ್ಞ ವೈದ್ಯರು ಕೊಟ್ಟ ಮಹತ್ವದ ಸಲಹೆಜನರು ಮೊದಲು ಆತಂಕದಿಂದ ಹೊರ ಬರಬೇಕು. ಕರೊನಾ ಭಯ ಹೆಚ್ಚಾದರೆ ಮನುಷ್ಯ ಖಿನ್ನತೆಗೆ ಒಳಗಾಗಿ ಸತ್ತು ಹೋಗ ಬಹುದು. 3-4ನೇ ಅಲೆ ಬಂದರೂ ಸರಿ ಯಾರೂ ಧೃತಿಗೆಡದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಧೈರ್ಯ ಕಳೆದುಕೊಳ್ಳಬಾರದು. ಕರೊನಾಗೆ ಮಕ್ಕಳು- ಪಾಲಕರು ಎಂಬ ವ್ಯತ್ಯಾಸ ಇಲ್ಲ. ಸೋಂಕಿನಿಂದ ತಪ್ಪಿಸಲು ಶಾಲೆ ಬಂದ್ ಮಾಡಿ ಮಕ್ಕಳನ್ನು ಮನೆಯಲ್ಲೇ ಇರಿಸಿದ್ದೇವೆ. ಆದರೆ ಪಾಲಕರು ಹೊರಗೆ ಓಡಾಡುತ್ತಿದ್ದಾರೆ. ಅವರಿಂದಲೇ ಮಕ್ಕಳಿಗೆ ಸೋಂಕು ಹರಡುವುದಿಲ್ಲವೇ? ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು. ಕರೊನಾ ಬಂದರೂ ಅವರ ದೇಹ ಅದಕ್ಕೆ ಹೆಚ್ಚು ರಿಯಾಕ್ಟ್ ಮಾಡಲ್ಲ. ಹಾಗಾಗಿ ಮಕ್ಕಳು ಸೇಫ್. ದೊಡ್ಡವರಿಗೆ ಹೋಲಿಸಿದರೆ ಕೋವಿಡ್​ನಿಂದ ಸತ್ತವರಲ್ಲಿ ಮಕ್ಕಳ ಸಂಖ್ಯೆ ತೀರ ಕಡಿಮೆ. ಪಾಲಕರು ಅನಗತ್ಯವಾಗಿ ಹೊರಹೋಗಬೇಡಿ. ಮಕ್ಕಳು ಕರೊನಾ ಪಾಸಿಟಿವ್ ಬಂದವರ ಮನೆ ಬಳಿ ಸುತ್ತಾಡಲು ಬಿಡಬೇಡಿ. ಹಾಗಂತ ಮನೆಯಲ್ಲೇ ಮಕ್ಕಳನ್ನು ಜೈಲಿನಂತೆ ಕೂಡಿಹಾಕಬೇಕು ಅಂತಲ್ಲ. ಬಾಯಿ-ಮೂಗು ಕವರ್ ಆಗುವಂತೆ ಮಾಸ್ಕ್ ಹಾಕಿ. ಸುರಕ್ಷಿತ ಸ್ಥಳದಲ್ಲಿ ಆಡಲು ಬಿಡಿ. ಮನೆಯ ಒಳಗೆ ನೀವೂ ಅವರೊಂದಿಗೆ ಆಡಿ, ಉತ್ಸಾಹ ತುಂಬಿ. ಒಳ್ಳೆಯ ಹವ್ಯಾಸಗಳನ್ನ ಹೇಳಿಕೊಡಿ. ಹೊರಗಿನಿಂದ ಬಂದ ಕೂಡಲೇ ಮಕ್ಕಳನ್ನು ಮುಟ್ಟಬೇಡಿ. ಚೆನ್ನಾಗಿ ಕೈ ತೊಳೆದುಕೊಂಡು ಮುಟ್ಟಿ. ಮನೆಯಲ್ಲಿ ಒಬ್ಬರಿಗೆ ಕರೊನಾ ಬಂದರೂ ಉಳಿದವರಿಗೆ ಹರಡುತ್ತದೆ. ರೋಗ ಲಕ್ಷಣ ಇರೋರು ಸ್ವಲ್ಪ ದಿನ ಮಕ್ಕಳಿಂದ ದೂರವಿರಿ. ಮಕ್ಕಳ ವಿಚಾರದಲ್ಲಿ ಪಾಲಕರ ಮನಸ್ಸು ಅತೀ ಸೂಕ್ಷ್ಮ. ಇದೇ ಕಾರಣಕ್ಕೆ ಪಾಲಕರು ಅನಗತ್ಯವಾಗಿ ಭಯಕ್ಕೆ ಒಳಗಾಗಿ ಮಕ್ಕಳಿಗೂ ಮಾನಸಿಕ ಹಿಂಸೆ ಆಗುವಂತೆ ಮಾಡುತ್ತಿ ದ್ದಾರೆ. ಕೆಲವರಂತೂ ಕರೊನಾ ಟೆಸ್ಟ್ ವರದಿ ಪಾಸಿಟಿವ್ ಬರುತ್ತಿದ್ದಂತೆ ತನ್ನಿಂದ ಎಲ್ಲರಿಗೂ ಹರಡುತ್ತೆ ಎಂದು ನೊಂದು ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ! ಸೋಂಕು ಬಂದಾಕ್ಷಣ ಬದುಕೇ ಇಲ್ಲ ಎಂಬುದು ಸರಿಯಲ್ಲ. ಕರೊನಾ ಸಾವಿನ ಸುದ್ದಿಗಳನ್ನು ಮಕ್ಕಳ ಮುಂದೆ ಮಾತನಾಡಬೇಡಿ.

    •  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts