More

    ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ: ಪಿಎಸ್​ಐ ವಿರುದ್ಧ ಎಫ್​ಐಆರ್​ ದಾಖಲು

    ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ ಪ್ರಕರಣ ಸಂಬಂಧ ಮೂಡಿಗೆರೆ ತಾಲೂಕಿನ ಗೋಣಿಬೀಡು ಪಿಎಸ್​ಐ ಅರ್ಜುನ್​ ವಿರುದ್ಧ ಶನಿವಾರ ಎಫ್​ಐಆರ್​ ದಾಖಲಾಗಿದೆ.

    ಯುವಕ ಪುನೀತ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ. ಪುನೀತ್​ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ನಿವಾಸಿ. ವಿವಾಹಿತ ಮಹಿಳೆಗೆ ಫೋನ್​ ಮಾಡಿದ ಆರೋಪ ಮೇಲೆ ಪುನೀತ್​ನನ್ನು ವಿಚಾರಣೆಗಾಗಿ ಅರ್ಜುನ್​ ಠಾಣೆಗೆ ಕರೆದೊಯ್ದಿದ್ದರು.

    ವಿಚಾರಣೆ ಸಂದರ್ಭದಲ್ಲಿ ಜಾತಿನಿಂದನೆ ಮಾಡಿ, ಮೂತ್ರ ಕುಡಿಸಿದ್ದಾರೆಂದು ಅರ್ಜುನ್​ ವಿರುದ್ಧ ಪುನೀತ್​ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜುನ್​ ವಿರುದ್ಧ ಐಪಿಸಿ ಸೆಕ್ಷನ್ 342, 323, 504, 506, 330 ಮತ್ತು 348 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಕೇಸು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಈ ರಾಶಿಯವರಿಗೆ ಕಳೆದುಹೋದ ಒಳ್ಳೆಯ ದಿನಗಳು ಮತ್ತೆ ಬರುವುದಲ್ಲದೆ ಧನಲಾಭ: ವಾರ ಭವಿಷ್ಯ

    ಈ ರಾಶಿಯವರು ಇಂದು ತಾಳ್ಮೆಯಿಂದಲೇ ವರ್ತಿಸಿ: ನಿತ್ಯ ಭವಿಷ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts