More

    ಈ ರಾಶಿಯವರಿಗೆ ಕಳೆದುಹೋದ ಒಳ್ಳೆಯ ದಿನಗಳು ಮತ್ತೆ ಬರುವುದಲ್ಲದೆ ಧನಲಾಭ: ವಾರ ಭವಿಷ್ಯ

    ಮೇಷ

    ಮೇಷ ರಾಶಿಯ ಸೂರ್ಯನು ಮೇ 15 ರಂದು ವೃಷಭ ರಾಶಿ ಪ್ರವೇಶಿಸಿದ್ದಾನೆ. ಭಯಂಕರ ವ್ಯಾಧಿಯ ತೀವ್ರತೆಯನ್ನು ಇಳಿಮುಖದತ್ತ ಸಾಗಿಸಿದ್ದಾನೆ. ಜೂ. 15ಕ್ಕೆ ಮಿಥುನ ರಾಶಿ ಪ್ರವೇಶದಿಂದ ಸ್ವಲ್ಪ ಮಟ್ಟಿಗೆ ರಾಷ್ಟ್ರದ ಭೀಕರ ಪರಿಣಾಮಗಳು ಹತೋಟಿಗೆ ಬರುತ್ತವೆ. ಮೇಷ ರಾಶಿಯಲ್ಲಿ ಜನಿಸಿದವರು ಸೂರ್ಯನನ್ನು ಪ್ರಾರ್ಥಿಸಿ. 11ರ ಗುರು, ಸ್ವಕ್ಷೇತ್ರ ಶನಿಯು ಕೊಡುವುದನ್ನು ಕೊಟ್ಟೇ ಕೊಡುತ್ತಾರೆೆ. ನೀವು ಸಂತಸ ಪಡುವ ಸಮಯ.

    ವೃಷಭ

    ರವಿ-ಶುಕ್ರ-ರಾಹು-ಬುಧರು ವೃಷಭದಲ್ಲೇ ಇದ್ದು ಸತ್ಯವನ್ನು ಮುಚ್ಚಿಟ್ಟವರ, ಸಂಜೀವಿನಿ ಔಷಧ, ಉಪಕರಣ ಮಾರಾಟದಿಂದ ಪ್ರಜೆಗಳಿಗೆ ಕಂಟಕರಾಗಿರು ವವರನ್ನು ದೇವರೇ ಬಯಲು ಮಾಡುತ್ತಾನೆ. ಕಾರ್ಯ ಸಾಧನೆಗಾಗಿ ಈ ಶ್ಲೋಕವನ್ನು ಪಠಿಸಿ. ಗಾಂಗೇಯ ಕಾರ್ತಿಕೇಯಶ್ಚ ಗುಹಃ ಸ್ಕಂದ ಉಮಾಸುತಃ || ದೇವಸೇನಾಪತಿಃ ಸ್ವಾಮಾ ಸೇನಾನಿಶ್ಚ ಶಿಖಿಧ್ವಜಃ || ಹರವೀರ್ಯಶ್ಚ ಮೇಧಾವೀ ವರೇದ್ಯೋ ವರದಃ ಸುಖಿ || ಕುಮಾರಃ ಶಕ್ತಿಧಾರೀ ಚ ತಸ್ಯ ನಮಾನಿಷೋಡಶ || ಯಃ ಪಠೇನ್ ಮಾನವೋ ಭಕ್ತ್ಯಾ ಭಾಧಾ ತಸ್ಯ ನ ಔಯತೇ ||

    ಮಿಥುನ

    ಮೇ 26ರಂದು ಬುಧನು ತನ್ನ ಸ್ವಂತ ಮನೆಗೆ ಬಂದು ಮೇಷಾಧಿಪತಿ ಸಂಯೋಗದಲ್ಲಿ ಇರುತ್ತಾನೆ. ಜೂ. 15ಕ್ಕೆ ರವಿಯು ಅಲ್ಲಿ ಬಂದು ಸೇರುತ್ತಾನೆ. ರವಿಯು ಏಕಾಂಗಿಯಾಗಿ ತನ್ನ ಮಿತ್ರನ ಮನೆಯಲ್ಲಿ ಇರುವುದರಿಂದ ಪ್ರಜಾಕ್ಷೇಮ ಮಾಡುವ ದಾರಿಯಲ್ಲಿ ಸಾಗುತ್ತಾನೆ. 9ರಲ್ಲಿ ಗುರು ಇರುವುದರಿಂದ ಕ್ಷೇಮ-ಸುಖವು, ವ್ಯವಹಾರದಲ್ಲಿ ಸಮಾಧಾನ. ವಿಷ್ಣು ಪುರಾಣ ಅಥವಾ ಭಾಗವತದ ಒಂದು ಅಧ್ಯಾಯ ಪಾರಾಯಣ ಮಾಡಿ.

    ಕಟಕ

    ಜೂ. 2ಕ್ಕೆ ಕಟಕ ರಾಶಿಗೆ ಕುಜನು ಬರುವುದರಿಂದ ಸಪ್ತಾಷ್ಟಮದಲ್ಲಿ ಶನಿ-ಗುರುವು ಯಾವ ಅಪಾಯವನ್ನು ಮಾಡದೆ ರಕ್ಷಿಸುತ್ತಾರೆೆ. ಗುರುವು ಕೊಡದದ್ದನ್ನು ಹರಿ-ಹರರು ಕೊಡಬಲ್ಲರೇ ಎಂಬ ಮಾತನ್ನು ಅರ್ಥೈಸಿಕೊಂಡು ಗುರುಪ್ರಾರ್ಥನೆಯನ್ನು ಮಾಡಿ. ಷಣ್ಮುಖನನ್ನು ಪ್ರಾರ್ಥಿಸಿ. ಉಮಾಮಹೇಶ್ವರ ಸ್ತೋತ್ರ ಪಾರಾಯಣ ಮಾಡಿ.

    ಸಿಂಹ

    ರಾಶ್ಯಾಧಿಪತಿ ಸೂರ್ಯನು ದಶಮದಲ್ಲಿ ಬಂದು ಕಾಲಕ್ಕೆ ಅನುಗುಣವಾಗಿ ಗ್ರಹಗಳು ಸುಸ್ಥಿತಿಯಲ್ಲಿ ಇರುವುದರಿಂದ ನಕಾರಾತ್ಮಕ ವಿಷಯಗಳಿಗೆ ಗುರುವು ಅನುವು ಮಾಡಿಕೊಡುವುದಿಲ್ಲ. ಏಕೈಕ ಗ್ರಹವು ಶುಭಸ್ಥಾನದಲ್ಲಿದ್ದಲ್ಲಿ ಅದೇ ದೊಡ್ಡ ವಿಷಯವೆಂದು ಶಾಸ್ತ್ರ ಹೇಳುತ್ತದೆ. ನಿಮ್ಮ ಇಷ್ಟಾರ್ಥ ಈಡೇರಿಸುತ್ತಾರೆ. ಸದಾಕಾಲವೂ ಶನಿಯನ್ನು ಪ್ರಾರ್ಥಿಸಿ. ಸುಬ್ರಹ್ಮಣ್ಯ ಆರಾಧನೆ ಇರಲಿ.

    ಕನ್ಯಾ

    ರಾಶಿ-9ರಲ್ಲಿ ರವಿ-ಬುಧ-ರಾಹು-ಶುಕ್ರನು ಉಚ್ಚ ರಾಶಿಯಾದ ವೃಷಭದಲ್ಲಿದ್ದು, ಪಂಚಮ ಶನಿ, ಷಷ್ಠ ಗುರುವಿನ ತಾಪ, ನಿರಾಸೆಯನ್ನು ಕಡಿಮೆಮಾಡಿ ರೋಗಗ್ರಸ್ಥರಾಗಿರುವವರನ್ನು ಆರೋಗ್ಯದೆಡೆಗೆ ಕೊಂಡೊಯ್ಯುತ್ತಾನೆ. ದೇವರಲ್ಲಿ ನೀವು ಧ್ಯಾನಾಸಕ್ತರಾದರೆ ಕೆಲಸ ಕಾರ್ಯಗಳಲ್ಲಿ ತಡೆಗೋಡೆಗಳು ತಾನೇ ಕುಸಿದು ಬೀಳುತ್ತವೆೆ. ಸಾಂಬಸದಾಶಿವ ಕವಚ, ದತ್ತಾಷ್ಟಕ ಪಠಿಸಿ.

    ತುಲಾ

    ಮೇ 23, 24, ಶುಭಾಶುಭಗಳನ್ನು ಸೂಚಿಸಿ ಯಾವುದೋ ವಿಶೇಷವಾದ ವಿಷಯದಲ್ಲಿ ನಿಮಗಾಗಿರುವ ನೋವನ್ನು, ಸೋಲನ್ನು ನಿಭಾಯಿಸಿ ಪಂಚಮ ಗುರು ನಿಮ್ಮನ್ನು ಕೈಹಿಡಿದು ನಡೆಸುತ್ತಾನೆ. ನಿಮ್ಮ ಕುಲಗುರು, ಜನ್ಮದಾತರಾದ ಮಾತಾ-ಪಿತರನ್ನು ವಂದಿಸಿ ಆಶೀರ್ವಾದ ಪಡೆಯಿರಿ. ಬೇಕಾದ್ದನ್ನು ಪಡೆದುಕೊಳ್ಳಿ. ಭವಾನಿಕವಚ ಪಾರಾಯಣ ಮಾಡಿ.

    ವೃಶ್ಚಿಕ

    ಕಳೆದ ವಾರದಲ್ಲಿ ಕೊಟ್ಟ ಕುಬೇರ ಮಂತ್ರವನ್ನು ಏಕಾ ಏಕಿ ನಿಲ್ಲಿಸಬೇಡಿ. ಕುಬೇರನು ಒಲಿದರೆ ಮಹಾ ಲಕ್ಷ್ಮೀ ಮನೆಯಲ್ಲಿ ನಿಲ್ಲುತ್ತಾಳೆ. ಕಳೆದುಹೋದ ಒಳ್ಳೆಯ ದಿನಗಳು ಮತ್ತೆ ಬರುವುದಲ್ಲದೆ ಧನಲಾಭ, ಕಾರ್ಯ ಸಿದ್ಧಿಯಾಗುವುದರಲ್ಲಿ ಸಂದೇಹ ಬೇಡ. ನಿಮಗೆ ಪರಿಹಾರ ಕೊಟ್ಟವರನ್ನು ಗುರುವೆಂದು ಭಾವಿಸಿ. ಅವಶ್ಯವಾಗಿ ಈ ವಾರ ನವಗ್ರಹ ಕವಚ ಪಠಿಸಿ.

    ಧನು

    ಆಸೆೆ-ನಿರಾಸೆ, ಜಯ ಅಪಜಯ ಇವೆಲ್ಲ ದೇವರೇ ಸೃಷ್ಟಿಸಿರುವ ನಿಯಾಮಕಗಳು. ಇದನ್ನು ಮೀರಿ ನಡೆಯಲು ಸಾಧ್ಯವಿಲ್ಲ. ದೇವರೇ ದಾರಿತೋರುತ್ತಾನೆ. ನಾವು ಯಾರಿಗೆ ಏನು ಕೊಡುತ್ತೇವೆಯೋ ಅದನ್ನು ದೇವರು ನಮಗೆ ನೀಡುತ್ತಾನೆ. ಸಾಗಲಿ ನಿಮ್ಮ ಜಯದ ಬಂಡಿ. ದತ್ತ ಚರಿತ್ರೆಯನ್ನು ಪಾರಾಯಣ ಮಾಡಿರಿ. ಶ್ರೀರಾಮನನ್ನು ಭಜಿಸಿ.

    ಮಕರ

    ಮಕರ ಸೂರ್ಯನು ಪಂಚಮದಲ್ಲಿ ಶುಕ್ರ-ಬುಧ-ರಾಹುವಿನೊಂದಿಗೆ ಕೂಡಿದ್ದಾನೆ. ಆದರೆ ಜನ್ಮಶನಿಯು ನಿಮ್ಮನ್ನು ಕಟ್ಟಿಹಾಕಿದ್ದರೂ ದೇವರೇ ಸಂತೋಷದ ಹಾದಿಗೆ ತರುತ್ತಾನೆ. ಯಾರಿಗೂ ದ್ರೋಹವನ್ನು ಬಗೆಯದೆ, ದ್ವಿತೀಯ ಗುರುವಿಂದ ಯಶಸ್ಸು ಪಡೆದು ನಿರಾಯಾಸವಾಗಿ ಸಾಗಬಹುದು. ಸುಂದರಕಾಂಡ ಪಾರಾಯಣ ಮಾಡಿರಿ.

    ಕುಂಭ

    ಕುಂಭ ರಾಶಿಯಲ್ಲಿ ಗುರು ಎಂದರೆ ಜನ್ಮರಾಶಿಯಲ್ಲೇ ಗುರು ಇದ್ದಾನೆ. ದ್ವಾದಶ ಶನಿಯು ಹೂಡಿದ ಗಾಡಿಯನ್ನು ಕಟ್ಟಿಹಾಕಬಹುದು. ಆದರೆ ದೈವ ಸಹಾಯವಿದ್ದರೆ ಹಗ್ಗವೇ ತುಂಡಾಗಿ ದೇವರೇ ಗಾಡಿಯನ್ನು ನಡೆಸುತ್ತಾನೆ. ದೈವಬಲ ಪಡೆದು ಮುಂದೆ ಸಾಗಿರಿ. ಅರ್ಧನಾರೀಶ್ವರ ಸ್ತೋತ್ರ ಪಠಿಸಿ. ಲಿಂಗಾಷ್ಟಕವನ್ನು ನಿತ್ಯವೂ ಪಠಿಸಿ. ಪುಣ್ಯವನ್ನು ವೃದ್ಧಿ ಮಾಡಿಕೊಳ್ಳಿ.

    ಮೀನ

    ಪೂ.ಭಾ, ಉ. ಭಾ-4, ರೇವತಿ-4 ಅಷ್ಟೂ ನಕ್ಷತ್ರಗಳು ಮೀನ ರಾಶಿಗೆ ಸೇರಿದ್ದು ಇದಕ್ಕೆ ಅಧಿಪತಿ ಗುರುವಾಗಿದ್ದಾನೆ. ಗುರುವು ದ್ವಾದಶ ಏಕಾದಶದಲ್ಲಿ ಶನಿಯಿದ್ದಾನೆ. ಧರ್ಮಮಾರ್ಗದಲ್ಲಿ ಮುಂದೆ ಸಾಗಿ. ಏಕಾದಶ ಶನಿ ಬೇಕಾದ್ದೆಲ್ಲ ಕೊಡುತ್ತಾನೆ. ಸಂಕಟನಾಶಕ ವಿಷ್ಣು ಮಂತ್ರವನ್ನು ಪಠಿಸಿ. ಕೃಷ್ಣ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ | ಪ್ರಣತಕ್ಲೇಶನಾಶಾಯ ಗೋವಿಂದಾಯ ನಮೋ ನಮಃ ||

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts