More

    ನರೇಂದ್ರ ಮೋದಿ, ಅಮಿತ್ ಷಾ ಪ್ರಚೋದನೆಯಿಂದ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ

    ಚಿಕ್ಕಮಗಳೂರು: ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದಿರುವ ಗುಂಡಿನ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ಪ್ರಚೋದನೆಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದಾರೆ.

    ರಾಜಘಾಟ್​ಗೆ ವಿದ್ಯಾರ್ಥಿಗಳು ಮೆರವಣಿಗೆ ಹೊರಟಿದ್ದ ಸಂದರ್ಭ ನಿಮಗೆ ಸ್ವಾತಂತ್ರ್ಯ ಬೇಕೆ, ತೆಗೆದುಕೊಳ್ಳಿ ಎಂದು ಹೇಳಿ ಗುಂಡು ಹಾರಿಸಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದರು. ಹೀಗಾದರೆ ಎಲ್ಲಿಂದ ರಕ್ಷಣೆ ಸಿಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

    ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಹ ಈ ಕೃತ್ಯಕ್ಕೆ ಪ್ರೇರಣೆ ನೀಡಿದ್ದು, ಅವರು ನೀಡಿದ ಹೇಳಿಕೆ ದೇಶಭಕ್ತರದೋ ಅಥವಾ ದೇಶದ್ರೋಹಿಗಳದೋ? ಸಿಎಎ ವಿರೋಧಿಸುವವರೆಲ್ಲ ದೇಶವಿರೋಧಿಗಳು ಎಂದು ಬಿಂಬಿಸಿ ದ್ವೇಷ ಬಿತ್ತುವ ಮೂಲಕ ಸಮಾಜ ಒಡೆಯಲಾಗುತ್ತಿದೆ ಎಂದು ಆರೋಪಿಸಿದರು.

    ಗಾಂಧೀಜಿ ಹಿಂದು ವಿರೋಧಿಯಾಗಿರಲಿಲ್ಲ. ಸಂವಿಧಾನ ವಿರೋಧಿಯಾಗಿ ನಡೆದಿರಲಿಲ್ಲ. ಸೌಹಾರ್ದತೆ, ಸಹಬಾಳ್ವೆಗೆ ಜೀವನದುದ್ದಕ್ಕೂ ಶ್ರಮಿಸಿದ್ದರು. ಹೀಗಿದ್ದರೂ ಗಾಂಧೀಜಿಯನ್ನು ಹಿಂದು ಮಹಾಸಭಾದವರು ಕೊಂದರು. ಗಾಂಧೀಜಿ ಹತ್ಯೆಗೆ ಆರು ಬಾರಿ ಸಂಚು ನಡೆದಿತ್ತು. ಇದು ಏಕೆ ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts