More

    ಫೆ.26ರಿಂದ ಶ್ರೀ ಸಿದ್ಧವೃಷಭೇಂದ್ರ ಸ್ವಾಮಿ ಜಾತ್ರೆ

    ಸೊರಬ: ತಾಲೂಕಿನ ಜಡೆ ಮಠದಲ್ಲಿ ಫೆ.26 ಮತ್ತು 27ರಂದು ಜಗದ್ಗುರು ಕುಮಾರ ಕೆಂಪಿನ ಶ್ರೀ ಸಿದ್ಧವೃಷಭೇಂದ್ರ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವ ನಡೆಸಲು ಭಾನುವಾರ ಜಡೆ ಸಂಸ್ಥಾನಮಠದಲ್ಲಿ ಡಾ. ಮಹಾಂತ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ವನಿಸಲಾಯಿತು.

    ಜಾತ್ರೆಯನ್ನು ಸರಳವಾಗಿ ಆಚರಿಸುವಂತೆ ಹಾಗೂ ಪ್ರತಿ ವರ್ಷದ ಪದ್ಧತಿಯಂತೆ ಸಂಸ್ಥಾನ ಮಠದ ಯುವ ವೇದಿಕೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಫೆ.27ರಂದು ನಡೆಯುವ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ್, ಕಾರ್ವಿುಕ ಸಚಿವ ಶಿವರಾಂ ಹೆಬ್ಬಾರ್, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಕುಮಾರ್ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಾಜಿ ಶಾಸಕ ಮಧು ಬಂಗಾರಪ್ಪ, ಜಿಲ್ಲಾ ವೀರಶೈವ ಸಮಾಜದ ರುದ್ರಮುನಿ ಸಜ್ಜನ್ ಮುಂತಾದ ಗಣ್ಯರನ್ನು ಆಹ್ವಾನಿಸಲಾಗುವುದು. ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರಾ ಅವರನ್ನು ಆಹ್ವಾನಿಸಿ, ಅವರಿಂದ ರೈತರಿಗೆ ಉಪನ್ಯಾಸ ಕೊಡಿಸಲು ಸಭೆ ತೀರ್ವನಿಸಿತು.

    ಶ್ರೀಮಠದ ಲಕ್ಷ್ಮಣಕುಮಾರ್ ಉರಣಕರ್ ಇತ್ತೀಚಿಗೆ ನಡೆದಂತಹ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವೀರಶೈವ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ಆಯ್ಕೆಯಾದ ಇಂದೂಧರ್ ಒಡೆಯರ್ (ಅಧ್ಯಕ್ಷ), ಮಲ್ಲಿಕಾರ್ಜುನ ಗುತ್ತೇರ್ (ಉಪಾಧ್ಯಕ್ಷ) ಅವರನ್ನು ಸನ್ಮಾನಿಸಲಾಯಿತು.

    ಜಿಪಂ ಸದಸ್ಯ ಶಿವಲಿಂಗೇಗೌಡ, ಶಿವರಾಜಗೌಡ, ವೆಂಕಟೇಶ, ವೈಕುಂಠ ಕಾಮತ್, ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಭಾರಂಗಿ, ಪ್ರೇಮಾ ಬಂಕಸಾಣ, ಜಯಶೀಲಗೌಡ, ಸಿ.ವಿ.ಶೆಟ್ಟಿ, ಎಂ.ನಾಗಪ್ಪ, ಮೃತ್ಯುಂಜಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts