More

    ಕರೊನಾ ಲಾಕ್​ಡೌನ್ ಉಲ್ಲಂಘಿಸಿದಲ್ಲದೇ ಬೇಜವಾಬ್ದಾರಿ ಹೇಳಿಕೆ ನೀಡಿದ ಕಾಂಗ್ರೆಸ್​ ಸಚಿವ​

    ರಾಯ್​ಪುರ್​(ಛತ್ತೀಸ್​ಗಢ): ಇಲ್ಲಿನ ಕಾಂಗ್ರೆಸ್​ ಸರ್ಕಾರದ ಸಚಿವರೊಬ್ಬರು ಕರೊನಾ ಲಾಕ್​ಡೌನ್​ ನಿಯಮವನ್ನು ಉಲ್ಲಂಘಿಸಿದ್ದಲ್ಲದೆ, ಬೇಜವಬ್ದಾರಿ ಹೇಳಿಕೆ ನೀಡಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.

    ಛತ್ತೀಸ್​ಗಢದ ವಾಣಿಜ್ಯ ತೆರಿಗೆ(ಅಬಕಾರಿ), ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕವಾಸಿ ಲಖಮ ಅವರು ರಾಯ್​ಪುರದಿಂದ ರಾಯ್​ಗಢದ ದೇವಮಾನವರೊಬ್ಬರ ಆಶ್ರಮಕ್ಕೆ ಭೇಟಿ ನೀಡಲು ಸುಮಾರು 250 ಕಿ.ಮೀ ದೂರವನ್ನು ಬೆಂಗಾವಲು ವಾಹನದೊಂದಿಗೆ ತೆರಳುವ ಮೂಲಕ ಲಾಕ್​ಡೌನ್​ ನಿಯಮ ಉಲ್ಲಂಘಿಸಿದರು.

    ತನ್ನ ಹಾದಿಯಲ್ಲಿ ಮೂರು ಜಿಲ್ಲೆಗಳನ್ನು ಹಾದುಹೋದ ಲಖಮ ರಾಯಗಢದಲ್ಲಿರುವ ಬಾಬಾ ಸತ್ಯಾನಾರಾಯಣ್​ ಅವರ ಕೊಸಮ್​ನರಾ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ, ರಾಯ್​ಪುರ್​ದಲ್ಲಿ ಸುಮ್ಮನೇ ಕೂತು… ಕೂತು… ಬೇಜಾರಾಯಿತು. ಹೀಗಾಗಿ ರಾತ್ರಿ ನಾನೇ ಪ್ಲಾನ್​ ಮಾಡಿಕೊಂಡು ರಾಯ್​ಗಢಕ್ಕೆ ಬಂದೆ ಎಂದು ಬೇಜವಬ್ದಾರಿ ಹೇಳಿಕೆ ನೀಡಿದ್ದಾರೆ.

    ಭೇಟಿಯ ವೇಳೆ ಇಡೀ ಬೆಂಗಾವಲು ವಾಹನ ಸಚಿವರನ್ನು ಹಿಂಬಾಲಿಸಿತ್ತು. ಮಾಸ್ಕ್​ ಧರಿಸಿದೆಯೂ ಓಡಾಡಿ ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದರು. ಭೇಟಿ ಮುಗಿದ ಬಳಿಕ ಥ್ರೀ ಸ್ಟಾರ್​ ಹೋಟೆಲ್​ನಲ್ಲಿ ಸಚಿವರು ಉಳಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಛತ್ತೀಸ್​ಗಢದಲ್ಲಿ ಕರೊನಾ ಸೋಂಕಿತರ ಸಂಖ್ಯೆ 36 ಇದೆ. ಇವರಲ್ಲಿ 24 ಮಂದಿ ಇಲ್ಲಿಯವರೆಗೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ. (ಏಜೆನ್ಸೀಸ್​)

    ನಿಖಿಲ್​-ರೇವತಿ ಮದುವೆ ಕುರಿತ ಪರ-ವಿರೋಧ ಚರ್ಚೆಯ ನಡುವೆಯೇ ಒಡಿಶಾದಲ್ಲಿ ನಡೆಯಿತ್ತೊಂದು ಲಾಕ್​ಡೌನ್​ ಮಾದರಿ ವಿವಾಹ!

    ಕ್ಯಾನ್ಸರ್​ ಪೀಡಿತ 8 ವರ್ಷದ ಮಗುವಿಗೆ ಸಕಾಲದಲ್ಲಿ ಔಷಧ ತಲುಪಿಸಿ ಮಾನವೀಯತೆ ಮೆರೆದ ಭಾರತೀಯ ಪೋಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts