More

    ಧೂಮಪಾನಿಗಳೇ ಹುಷಾರ್: ಧೂಮಪಾನದಿಂದ ಕರೊನಾ ತಗುಲಿ ಬೇಗ ಸಾವು ಸಂಭವಿಸುತ್ತದೆ : ಆರೋಗ್ಯ ಸಚಿವಾಲಯ

    ನವದೆಹಲಿ:ಧೂಮಪಾನದಿಂದ ಕೋವಿಡ್ -19 ಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
    ಧೂಮಪಾನ ಮಾಡುವಾಗ ಕೈಯಿಂದ ಬಾಯಿಗೆ ವೈರಸ್ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಧೂಮಪಾನಿಗಳು COVID-19 ಗೆ ಹೆಚ್ಚು ಗುರಿಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದ್ದು, ತಂಬಾಕು ಉತ್ಪನ್ನಗಳ ಬಳಕೆಯು ಉಸಿರಾಟದ ಸೋಂಕಿನ ತೀವ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಕರೊನಾಗೆ ತುತ್ತಾಗುವಂತೆ ಮಾಡುತ್ತದೆ ಎಂದು ಎಚ್ಚರಿಸಿದೆ.

    ಇದನ್ನೂ ಓದಿ: ಚಪಾತಿ ತಿಂದು ಜಡ್ಜ್​ ಮತ್ತವರ ಮಗನ ಸಾವಿನ ಪ್ರಕರಣಕ್ಕೆ ಬೆಚ್ಚಿಬೀಳಿಸುವ ಟ್ವಿಸ್ಟ್​; ಎಲ್ಲಿ ಹೋಗಿ ತಲುಪತ್ತೆ ಕೇಸ್​?

    ಸಚಿವಾಲಯ ‘ಭಾರತದಲ್ಲಿ COVID-19 ಮತ್ತು ತಂಬಾಕು ಬಳಕೆ’ ಎಂಬ ದಾಖಲೆಯಲ್ಲಿ, ಕೋವಿಡ್ ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆಯಾದ್ದರಿಂದ ಧೂಮಪಾನಿಗಳಲ್ಲಿ ಕೋವಿಡ್​ಗೆ ತುತ್ತಾಗಬಹುದಾದ ತೀವ್ರ ರೋಗಲಕ್ಷಣಗಳು ಕಂಡುಬರುವ ಸಾಧ್ಯತೆ ಇರುತ್ತದೆ.
    ಧೂಮಪಾನ ಮಾಡುವಾಗ ಬೆರಳುಗಳು ಮತ್ತು ತುಟಿಗಳೊಂದಿಗೆ ಸಂಪರ್ಕ ವಿರುತ್ತದೆ. ಸಿಗರೇಟ್ ಕಲುಷಿತವಾಗಿದ್ದರೆ ಇದು ಕೈಯಿಂದ ಬಾಯಿಗೆ ವೈರಸ್ ಹರಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
    ಹೃದಯರಕ್ತನಾಳದ ಕಾಯಿಲೆ, ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಮತ್ತು ಮಧುಮೇಹ ಕಾಯಿಲೆಯಂತಹ ಸಾಂಕ್ರಾಮಿಕವಲ್ಲದ ಪ್ರಮುಖ ಕಾಯಿಲೆ (ಎನ್‌ಸಿಡಿ) ಇರುವವರಲ್ಲಿ ತಂಬಾಕು ಬಳಕೆಯು ಒಂದು ಪ್ರಮುಖ ಅಪಾಯಕಾರಿ ಅಂಶವಾಗಿದೆ, ಈ ರೋಗಿಗಳು COVID-19 ಗೆ ತುತ್ತಾದರೆ ತೀವ್ರವಾದ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

    ಇದನ್ನೂ ಓದಿ: ಫ್ರಾನ್ಸ್​ ಟು ಇಂಡಿಯಾ : ರಫೇಲ್ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿಲಾಲ್

    “ಧೂಮಪಾನವು ಶ್ವಾಸಕೋಶದ ಕಾರ್ಯವನ್ನು ಕುಂಠಿತಗೊಳಿಸುತ್ತದೆ, ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ದೇಹವು ವಿವಿಧ ಕಾಯಿಲೆಗಳ ವಿರುದ್ಧ ಹೋರಾಡುವುದು ಕಷ್ಟವಾಗುತ್ತದೆ.
    ಧೂಮಪಾನ, ಇಲೆಕ್ಟ್ರಾನಿಕ್ ಸಿಗರೇಟ್‌ಗಳು, ಹೊಗೆರಹಿತ ತಂಬಾಕು ಸೇವನೆ, ಪಾನ್ ಮಸಾಲಾದಂತಹ ಉತ್ಪನ್ನಗಳ ಬಳಕೆಯಿಂದ ದೇಹದ ವಾಯು ಮಾರ್ಗಗಳಿಗೆ ಹಾನಿಯಾಗುತ್ತದೆ. ಇದರಿಂದ ಶ್ವಾಸಕೋಶದ ರೋಗನಿರೋಧಕ ಕ್ರಿಯೆಯಲ್ಲಿ ಕುಂಠಿತವಾಗಿ ಶ್ವಾಸಕೋಶದ ಸೋಂಕಿನ ಅಪಾಯ ಹೆಚ್ಚಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
    ತಂಬಾಕು ಬಳಕೆಯು COVID-19 ನ್ನು ವೇಗವಾಗಿ ಹರಡಿ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಏಕೆಂದರೆ, ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ ಮುಖ್ಯವಾಗಿ ಲಾಲಾರಸದ ಹನಿಗಳ ಮೂಲಕ ಅಥವಾ ಮೂಗಿನಿಂದ ಹೊರಬಂದು ಪ್ರಸರಣಗೊಳ್ಳುತ್ತದೆ.

    ಇದನ್ನೂ ಓದಿ: ‘ರಾಮಮಂದಿರ ಭೂಮಿ ಪೂಜೆಗೆ ದಯವಿಟ್ಟು ಬರಬೇಡಿ…ಅಂದು ಸಂಜೆ ಮನೆಯಲ್ಲಿ ದೀಪ ಹಚ್ಚಿ’

    ತಂಬಾಕು ಉತ್ಪನ್ನಗಳನ್ನು (ಖೈನಿ, ಗುಟ್ಖಾ, ಪಾನ್, ಜರ್ದಾ) ಸೇವಿಸುವುದರಿಂದ ಉಗುಳುವ ಚಟ ಹೆಚ್ಚಾಗುತ್ತದೆ.
    ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಸಾಂಕ್ರಾಮಿಕ ರೋಗಗಳಾದ COVID-19, ಕ್ಷಯ, ಹಂದಿ ಜ್ವರ, ಎನ್ಸೆಫಾಲಿಟಿಸ್, ಇತ್ಯಾದಿಗಳ ಹರಡುವಷ್ಟು ತೀವ್ರ ಅಪಾಯಕಾರಿಯಾಗಿದೆ ಎಂದು ಸಚಿವಾಲಯ ಒತ್ತಿಹೇಳುತ್ತದೆ.
    “ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಯಾವುದೇ ತಂಬಾಕು ಉತ್ಪನ್ನಗಳ ಬಳಕೆಯ ವಿರುದ್ಧ ಎಚ್ಚರಿಕೆ ನೀಡುತ್ತದೆ” ಎಂದು ಅದು ಹೇಳಿದೆ, ತಂಬಾಕುಸೇವನೆ ತ್ಯಜಿಸಿದ 12 ಗಂಟೆಗಳ ಒಳಗೆ ರಕ್ತಪ್ರವಾಹದಲ್ಲಿನ ಇಂಗಾಲದ ಮಾನಾಕ್ಸೈಡ್ ಮಟ್ಟ ಸಾಮಾನ್ಯ ಸ್ಥಿತಿಗೆ ಬರುತ್ತದೆ.
    2-12 ವಾರಗಳಲ್ಲಿ, ರಕ್ತಪರಿಚಲನೆಯು ಸುಧಾರಿಸುತ್ತದೆ ಮತ್ತು ಶ್ವಾಸಕೋಶದ ಕಾರ್ಯವು ಹೆಚ್ಚಾಗುತ್ತದೆ. 1-9 ತಿಂಗಳೊಳಗೆ ಕೆಮ್ಮು ಮತ್ತು ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ ಎಂದು ಅದು ಹೇಳಿದೆ.

    ಕ್ಷುದ್ರಗ್ರಹ ಕಂಡುಹಿಡಿದಿದ್ದಾರೆ 10ನೇ ಕ್ಲಾಸ್‌ ವಿದ್ಯಾರ್ಥಿನಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts