ಕ್ಷುದ್ರಗ್ರಹ ಕಂಡುಹಿಡಿದಿದ್ದಾರೆ 10ನೇ ಕ್ಲಾಸ್‌ ವಿದ್ಯಾರ್ಥಿನಿಯರು!

ನವದೆಹಲಿ: ವಿಜ್ಞಾನ ವಿಷಯದಲ್ಲಿ ಅತೀವ ಆಸಕ್ತಿ ಹೊಂದಿರುವ ಗುಜರಾತ್‌ನ ಸೂರತ್‌ನ ಇಬ್ಬರು ವಿದ್ಯಾರ್ಥಿನಿಯರು ಕ್ಷುದ್ರ ಗ್ರಹವೊಂದನ್ನು ಕಂಡುಹಿಡಿಯುವ ಮೂಲಕ ಇದೀಗ ಭಾರಿ ಶ್ಲಾಘನೆಗೆ ಒಳಗಾಗಿದ್ದಾರೆ. ಈ ಕ್ಷುದ್ರ ಗ್ರಹವು ಇನ್ನು ಕೆಲವೇ ದಿನಗಳಲ್ಲಿ ಭೂಮಿಯ ಸಮೀಪದಿಂದ ಹಾದು ಹೋಗಲಿದೆ. ಅದನ್ನು ಈ ಬಾಲಕಿಯರು ಪತ್ತೆ ಹಚ್ಚಿದ್ದಾರೆ. ವೈದೇಹಿ ವೆಕರಿಯ ಸಂಜಯ್‌ಭಾಯಿ ಹಾಗೂ ರಾಧಿಕಾ ಲಖನಿ ಪ್ರಫ‌ುಲ್ಲಭಾಯಿ ಎಂಬ ಬಾಲಕಿಯರು ಈ ಸಾಧನೆ ಮಾಡಿದ್ದಾರೆ. ಈ ರೀತಿಯ ಯಾವುದೇ ಸಂಶೋಧನೆ ಮಾಡಿದರೆ ಅದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) … Continue reading ಕ್ಷುದ್ರಗ್ರಹ ಕಂಡುಹಿಡಿದಿದ್ದಾರೆ 10ನೇ ಕ್ಲಾಸ್‌ ವಿದ್ಯಾರ್ಥಿನಿಯರು!