More

    ಹೊಗೆ, ಧೂಮಪಾನದಿಂದ ದಮ್ಮು

    ಬೆಳಗಾವಿ: ಗ್ರಾಮೀಣ ಭಾರತದಲ್ಲಿ ಹೆಚ್ಚಾಗಿ ಬೆರಣಿ, ಕಟ್ಟಿಗೆ ಬಳಕೆಯಿಂದ ತೀವ್ರ ಹೊಗೆ ಹಾಗೂ ಧೂಮಪಾನದಿಂದ ಶ್ವಾಸಕೋಶದ ಮೇಲೆ ಪರಿಣಾಮವಾಗುತ್ತಿದ್ದು, ಸಿಒಪಿಡಿ (ದಮ್ಮು) ಅಧಿಕವಾಗುತ್ತಿದೆ. ದೇಶದ ಜನಸಂಖ್ಯೆಯಲ್ಲಿ ಸುಮಾರು ಶೇ.20 ಜನ ದಮ್ಮು ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಾವಿನ ಪ್ರಮಾಣವೂ ಅಧಿಕವಾಗುತ್ತಿದೆ ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಎಂ. ದಯಾನಂದ ಹೇಳಿದರು.

    ಕೆಎಲ್‌ಇ ಆಸ್ಪತ್ರೆಯ ಶ್ವಾಸಕೋಶ ವಿಭಾಗವು ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಸಿಒಪಿಡಿ (ದಮ್ಮು) ನಿವಾರಣೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವಾಹನಗಳಿಂದ ಹೊರ ಸೂಸುವ ಹೊಗೆಯು ಅಪಾಯಕಾರಿ. ಇದರಿಂದ ಉಂಟಾಗುವ ವಾಯು ಮಾಲಿನ್ಯದ ಪರಿಣಾಮ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಆಯಾಸ, ಕೆಮ್ಮು, ಕಫ, ಸಿಳ್ಳೆ ಹೊಡೆಯುವ ಧ್ವನಿ ಸೇರಿ ಮುಂತಾದ ಸಮಸ್ಯೆಯಿಂದ ಜನರು ಬಳಲುತ್ತಾರೆ. ಆದ್ದರಿಂದ ಸಮಾಜದಲ್ಲಿ ಈ ಬಗ್ಗೆ ಅರಿವು ಮೂಡಿಸಿ, ವೈದ್ಯರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು. ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಮಾತನಾಡಿ, ಕೃಷಿ ಆಧಾರಿತ ಭಾರತದಲ್ಲಿ ಹೆಚ್ಚಾಗಿ ಲಭ್ಯವಾಗುವ ಕಟ್ಟಿಗೆಗಳನ್ನು ಬಳಕೆ ಮಾಡುತ್ತಿರುವುದರಿಂದ ಬಹಳಷ್ಟು ಹೊಗೆಯು ಹೊರಹೊಮ್ಮುತ್ತದೆ. ಇದರಿಂದ ಇಕ್ಕಟ್ಟಾದ ಪ್ರದೇಶದಲ್ಲಿ ಇದ್ದಾಗ ಅದರ ಸೇವನೆ ಅಧಿಕಗೊಂಡು ಶ್ವಾಸಕೋಶಕ್ಕೆ ತೊಂದರೆಯಾಗುವ ಅಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ ಹೊಗೆಯಿಂದ ದೂರವಿದ್ದು, ಅತ್ಯಾಧುನಿಕ ಸಲಕರಣೆಗಳನ್ನು ಬಳಸುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು. ಡಾ. ಅಂಟೋ ಮ್ಯಾಥಿವ್ ಮಾತನಾಡಿದರು. ಡಾ. ಆರಿಫ್ ಮಾಲ್ದಾರ, ಡಾ. ರಾಜಶೇಖರ ಸೋಮನಟ್ಟಿ, ವಿಭಾಗ ಮುಖ್ಯಸ್ಥ ಡಾ. ಭಾಗ್ಯಶ್ರೀ ಪಾಟೀಲ, ಡಾ. ಜಿ.ಎಸ್. ಗಾವಡೆ, ಡಾ. ಜ್ಯೋತಿ ಹಟ್ಟಿಹೊಳಿ, ಡಾ. ಗೌತಮ, ಡಾ. ಗುರುಪ್ರಸಾದ ಅಂಟಿನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts