More

    ಪಳ್ಳತ್ತಡ್ಕ ಸೇತುವೆ ಪ್ರಯಾಣ ನರಕಸದೃಶ : ಲೋಕೋಪಯೋಗಿ ಇಲಾಖೆಗೆ ಚಾಲಕರ ಹಿಡಿಶಾಪ

    ಪುರುಷೋತ್ತಮ ಪೆರ್ಲ ಕಾಸರಗೋಡು
    ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಯ ಪಳ್ಳತ್ತಡ್ಕ ಸೇತುವೆ ವಾಹನ ಚಾಲಕರ ಪಾಲಿಗೆ ನರಕ ಸದೃಶವಾಗುತ್ತಿದೆ. ಪ್ರಸಕ್ತ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂಣಗೊಳ್ಳುವ ಹಂತಕ್ಕೆ ತಲುಪುತ್ತಿದ್ದರೂ ಪಳ್ಳತ್ತಡ್ಕ ಸೇತುವೆಗೆ ಮಾತ್ರ ಗ್ರಹಚಾರ ಕಾಟ ತಪ್ಪುತ್ತಿಲ್ಲ.

    ಒಂದೆಡೆ ಚೆರ್ಕಳದಿಂದ ಅಡ್ಕಸ್ಥಳವರೆಗಿನ 29 ಕಿ.ಮೀ. ರಸ್ತೆ ಮೆಕ್ಕಡಾಂ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿರುವ ಮಧ್ಯೆ, ಪಳ್ಳತ್ತಡ್ಕ ಸೇತುವೆಯನ್ನು ಕಡೆಗಣಿಸಿರುವ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತವಾಗಿದೆ.

    ಸೇತುವೆ ದೃಢತೆ ಬಗ್ಗೆ ತಪಾಸಣೆ ನಡೆಸುವ ನಿಟ್ಟಿನಲ್ಲಿ 13 ಲಕ್ಷ ರೂ. ಮೊತ್ತದ ಅಮದಾಜು ಪಟ್ಟಿಯನ್ನು ಲೋಕೋಪಯೋಗಿ ಇಲಾಖೆಗೆ ಈಗಾಗಲೇ ಸಲ್ಲಿಸಿದ್ದರೂ ಇದರ ಅಂತಿಮ ವರದಿ ಇನ್ನೂ ಕೈಸೇರಿಲ್ಲ. ಹೊಸ ಸೇತುವೆ ನಿರ್ಮಾಣ ಅಥವಾ ಇದನ್ನೇ ದುರಸ್ತಿಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಇನ್ನೂ ಕೈಗೊಳ್ಳಲಾಗಿಲ್ಲ. ಮೂರು ಸ್ಪಾೃನ್ ಒಳಗೊಂಡ ಸೇತುವೆಯ ಒಂದು ಪಿಲ್ಲರ್‌ನ ತಳಭಾಗದ ಕಬ್ಬಿಣ ಕಿಲುಬು ಹಿಡಿದು ಕಾಂಕ್ರೀಟ್ ಚಪ್ಪಡಿ ಉದುರುತ್ತಿದೆ. ಸೇತುವೆ ಮೇಲ್ಭಾಗದ ಕಾಂಕ್ರೀಟ್ ಎದ್ದು ಹೊಂಡ ಬಿದ್ದಿದೆ. ಪ್ರತಿ ಸ್ಪಾೃನ್ ಮಧ್ಯೆ ಅಂತರ ಹೆಚ್ಚಾಗುತ್ತಿದ್ದು, ವಾಹನ ಸಂಚಾರ ಅಪಾಯಕಾರಿಯಾಗುತ್ತಿದೆ. ಸೇತುವೆಯಲ್ಲಿ ನಿರಂತರ ಸಂಚರಿಸುವ ವಾಹನಗಳ ಬಿಡಿಭಾಗಕ್ಕೆ ಹಾನಿಯಾಗುತ್ತಿದ್ದು, ಇಲಾಖೆ ಕಾರ್ಯನಿರ್ವಹಣೆಗೆ ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ.

    ದ್ವಿಚಕ್ರ ವಾಹನ ಸವಾರರ ಪಾಲಿಗೆ ಪಳ್ಳತ್ತಡ್ಕ ಸೇತುವೆ ಶಾಪವಾಗಿ ಪರಿಣಮಿಸಿದೆ. ಸೇತುವೆ ಶಿಥಿಲಾವಸ್ಥೆ ಬಗೆಗಿನ ಅಧ್ಯಯನ ವರದಿಯೊಂದಿಗೆ ಸೇತುವೆ ದುರಸ್ತಿ ಅಥವಾ ಬದಲಿ ಸೇತುವೆ ನಿರ್ಮಾಣದ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ವಾಹನ ಚಾಲಕರು ಆಗ್ರಹಿಸಿದ್ದಾರೆ.

    ಸೇತುವೆಯಲ್ಲಿ ಹೊಂಡ ಬಿದ್ದಿದ್ದರೂ ವಾಹನ ಸಂಚಾರದ ಬಗ್ಗೆ ಆತಂಕ ಬೇಡ. ಸೇತುವೆಯ ಒಂದು ಸ್ಪಾೃನ್ ಶಿಥಿಲಗೊಂಡಿದ್ದರೂ ಎಲ್ಲ ಮೂರು ಸ್ಪಾೃನ್‌ಗಳ ತಪಾಸಣೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ಈ ಕಾರ್ಯ ಶೀಘ್ರ ಪೂರ್ತಿಗೊಳ್ಳಲಿದೆ.
    ಎಂ.ಬೆನ್ನಿ ಜೋಸೆಫ್, ಸಹಾಯಕ ಅಭಿಯಂತ,
    -ಸೇತುವೆ ವಿಭಾಗ, ಲೋಕೋಪಯೋಗಿ ಇಲಾಖೆ, ಕಾಸರಗೋಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts