More

    “ನನಗೆ ಒಂದು ವಿಷಯದ ಬಗ್ಗೆ ಬೇಸರವಾಗಿದೆ”; ನೂತನ ಪಕ್ಷದ ಸಭೆ ಬಳಿಕ ಹೀಗೆ ಹೇಳಿದ್ದೇಕೆ ಸೂಪರ್​ಸ್ಟಾರ್​ ರಜನಿಕಾಂತ್

    ಚೆನ್ನೈ: ನನಗೆ ಒಂದು ವಿಷಯದ ಬಗ್ಗೆ ಬೇಸರವಾಗಿದೆ ಎಂದು ಸೂಪರ್ ಸ್ಟಾರ್​ ರಜನಿಕಾಂತ್​ ​ತಿಳಿಸಿದ್ದಾರೆ. ಅವರು ಘೋಷಣೆ ಮಾಡಿದ ತಮ್ಮ ಪಕ್ಷದ ಸಭೆ ನಂತರ ಮಾತನಾಡಿ ಈ ಬೇಸರ ಹೊರ ಹಾಕಿದರು.

    ರಜನಿ ಮಕ್ಕಳ ಮಂದ್ರಮ್​ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಸಭೆ ಇಂದು ಚೆನ್ನೈನಲ್ಲಿ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ರಜನಿಕಾಂತ್​ “ಸಭೆಯಲ್ಲಿ ತುಂಬ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಆದರೆ ನನಗೆ ಒಂದು ವಿಷಯದ ಬಗ್ಗೆ ಬೇಸರವಾಯಿತು. ಅದು ಏನೆಂದು ಸಮಯ ಬಂದಾಗ ತಿಳಿಸುತ್ತೇನೆ” ಎಂದರು.

    ರಾಜಕೀಯ ಪ್ರವೇಶದ ಬಗ್ಗೆ ಮತ್ತು ತಮ್ಮ ಪಕ್ಷವನ್ನು ಘೋಷಣೆ ಮಾಡಿದ ಎರಡು ವರ್ಷಗಳ ನಂತರ ಸಭೆ ನಡೆದಿದೆ. ಜಿಲ್ಲಾ ಪದಾಧಿಕಾರಿಗಳ ಸಭೆ ಇದಾಗಿತ್ತು. ಚರ್ಚೆಗಳು ಕೂಡ ಚೆನ್ನಾಗಿ ನಡೆದವು. ಈ ಬಗ್ಗೆ ನನಗೆ ತೃಪ್ತಿ ಇದೆ. ಅಲ್ಲದೆ ಜಿಲ್ಲಾ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದರು ಎಂದು ಅವರು ತಿಳಿಸಿದರು.

    ಇದೊಂದು ಪುನರ್​ಮನನದ ಬಗ್ಗೆ ಸಭೆಯಾಗಿತ್ತು. ಅವರು ರಾಜಕೀಯ ಪ್ರವೇಶದ ಬಗ್ಗೆ ನಡೆದ ಚರ್ಚೆ ಸಂದರ್ಭದಲ್ಲಿ ಅವರ ಜನಪ್ರಿಯ ಅಭಿಮಾನಿಗಳ ಕ್ಲಬ್ ರಾಜ್ಯಾದ್ಯಂತ ವಿಸರ್ಜಿಸಲ್ಪಟ್ಟಿತ್ತು. ಆದಾದ ಕೆಲವು ತಿಂಗಳ ನಂತರ ರೂಪುಗೊಂಡ ಪಕ್ಷ ಮತ್ತು ಅದರ ಪದಾಧಿಕಾರಿಗಳ ಕಾರ್ಯಕ್ಷಮತೆಯ ವಿಮರ್ಶೆ ಸಭೆ ಇದಾಗಿತ್ತು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

    2021ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆ ವೇಳೆಗೆ ಹೊಸ ಪಕ್ಷ ಕಾರ್ಯಾರಂಭ ಮಾಡಲಿದೆ. ರಜನಿಕಾಂತ್​ ಅವರು ಸಿಎಎ ವಿರೋಧಿಸಿದ ಬೆನ್ನಲ್ಲೇ ಕೆಲ ಮುಸ್ಲಿಂ ಧರ್ಮಗುರುಗಳು ಪ್ರತಿಭಟನೆ ನಡೆಸಲು ರಜನಿಕಾಂತ್​ ಅವರನ್ನು ಭೇಟಿಯಾಗಿದ್ದರು.

    ಮುಸ್ಲಿಮರ ಜತೆಗಿನ ಸಭೆ ಚನ್ನಾಗಿತ್ತು. ಭ್ರಾತೃತ್ವ, ಶಾಂತಿ ಮತ್ತು ಪ್ರೀತಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅವರು ನನ್ನ ಬೆಂಬಲ ಕೇಳಿದರು. ಕೇಂದ್ರ ಗೃಹ ಮಂತ್ರಿ ಅವರನ್ನು ಭೇಟಿಯಾಗಿ ನಿಮ್ಮ ಆತಂಕವನ್ನು ತಿಳಿಸಿ ಎಂದು ಸೂಚಿಸಿದ್ದೇನೆ, ಅಲ್ಲದೆ ನನ್ನ ಸಹಾಯ ನಿಮಗೆ ಇರುತ್ತದೆ ಎಂದಿದ್ದೇನೆ ಎಂದು ಮಾಹಿತಿ ನೀಡಿದರು.

    1996ರ ಚುನಾವಣೆ ಸಂದರ್ಭದಲ್ಲಿ ರಜನಿಕಾಂತ್​ ಅವರ “ಈ ಚುನಾವಣೆಯಲ್ಲಿ ಒಂದು ವೇಳೆ ಜಯಲಲಿತಾ ಗೆದ್ದರೆ, ತಮಿಳುನಾಡನ್ನು ಉಳಿಸುವುದು ಸಾಧ್ಯವಿಲ್ಲ” ಎಂಬ ಹೇಳಿಕೆ ತಮಿಳುನಾಡಿನ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತ್ತು ಎಂದು ವಿಶ್ಲೇಷಣೆ ಮಾಡಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts