More

    ಚೆನ್ನೈ-ಬೆಂಗಳೂರು- ಮೈಸೂರು ‘ಬುಲೆಟ್​ ರೈಲು’ ಯೋಜನೆಗೆ ಶೀಘ್ರ ಡಿಪಿಆರ್? ಕೇವಲ 2.25 ಗಂಟೆ ಪ್ರಯಾಣ!

    ಬೆಂಗಳೂರು: ದಕ್ಷಿಣದ ಎರಡು ಪ್ರಮುಖ ನಗರಗಳಾದ ಚೆನ್ನೈ-ಬೆಂಗಳೂರು ಮತ್ತು ಮೈಸೂರು ನಡುವೆ ಪ್ರಯಾಣದ ಅವಧಿ ಕಡಿಮೆ ಮಾಡುವ ಬಹು ನಿರೀಕ್ಷಿತ ‘ಬುಲೆಟ್​ ರೈಲು’ ಯೋಜನೆಗೆ ಶೀಘ್ರ ಚಾಲನೆ ಸಿಗುವ ಸಾಧ್ಯತೆಯಿದೆ.

    ಇದನ್ನೂ ಓದಿ: ಸಚಿನ್​ ಡೀಪ್​ಫೇಕ್​ ವೀಡಿಯೋ..ಗೇಮಿಂಗ್​ ಕಂಪನಿ ಮಾಲಿಕನ ವಿರುದ್ಧ ಕೇಸ್​!

    435 ಕಿಮೀ ಉದ್ದದ ಈ ರೈಲು ಮಾರ್ಗ ನಿರ್ಮಾಣದ ನಂತರ ಕರ್ನಾಟಕ ಹಾಗೂ ತಮಿಳುನಾಡು ರಾಜಧಾನಿಗಳು ಹಾಗೂ ಸಾಂಸ್ಕೃತಿಕ ರಾಜಧಾನಿ ನಡುವೆ ಈಗಿರುವ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುತ್ತದೆ.

    ಬುಲೆಟ್ ರೈಲು ಯೋಜನೆಯಲ್ಲಿ ಚೆನ್ನೈ, ಪೂನಮಲ್ಲಿ, ಅರಕ್ಕೋಣಂ (ತಮಿಳುನಾಡು), ಚಿತ್ತೂರು (ಆಂಧ್ರಪ್ರದೇಶ), ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣ, ಮಂಡ್ಯ ಹಾಗೂ ಮೈಸೂರು(ಕರ್ನಾಟಕ) ಒಳಗೊಂಡಂತೆ 9 ನಿಲ್ದಾಣಗಳು ನಿರ್ಮಾಣವಾಗಲಿವೆ.
    ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ (ಎನ್​ಎಚ್​ಎಸ್​ಆರ್​ಸಿಎಲ್​) ಜನರಲ್ ಅಲೈನ್‌ಮೆಂಟ್ ಡ್ರಾಯಿಂಗ್ಸ್, ಸರ್ವೇಯಿಂಗ್, ಓವರ್‌ಹೆಡ್, ಓವರ್‌ಗ್ರೌಂಡ್, ಅಂಡರ್‌ಗ್ರೌಂಡ್ ಯುಟಿಲಿಟಿ ಮತ್ತು ಸಬ್‌ಸ್ಟೇಷನ್‌ ಪವರ್ ಸೋರ್ಸಿಂಗ್ ಐಡೆಂಟಿಟಿಗೆ ಗುತ್ತಿಗೆಯನ್ನು ನೀಡಿದೆ ಎಂದು ತಿಳಿದುಬಂದಿದೆ.
    ಪ್ರಸ್ತುತ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸರ್ವೇ ನಡೆಸಲಾಗುತ್ತಿದ್ದು, ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಅಧಿಕಾರಿಗಳು ಭೂಮಾಲೀಕರೊಂದಿಗೆ ಸಭೆ ನಡೆಸಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಕೆಲವೇ ದಿನಗಳಲ್ಲಿ ಬುಲೆಟ್​ ರೈಲು ಯೋಜನೆಯ ಅಂದಾಜು ವೆಚ್ಚ, ನಿಲ್ದಾಣಗಳ ನಿರ್ಮಾಣ ಸೇರಿದಂತೆ ವಿವರವಾದ ಯೋಜನಾ ವರದಿ (ಡಿಪಿಆರ್) ಪ್ರಕಟಗೊಳ್ಳಬಹುದು. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಅಸುಪಾಸಿನಲ್ಲಿ ಮಾರ್ಗ ನಿರ್ಮಾಣವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
    ಎಕ್ಸ್‌ಪ್ರೆಸ್‌ವೇ ಹೊಸಕೋಟೆಯಿಂದ ಆರಂಭವಾಗಿ ಚೆನ್ನೈ ಬಳಿಯ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳುತ್ತದೆ. ಬುಲೆಟ್​ ರೈಲು ಮಾರ್ಗವು ಸಹ ಇದೇ ಮಾರ್ಗದ ಸಮೀಪ ಸಾಗಲಿದೆ ಎಂಬುದು ವಿಶೇಷ.

    ಪ್ರಸ್ತುತ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಅತ್ಯಂತ ವೇಗದ ರೈಲಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ ನಡೆಸುತ್ತಿದೆ. ಇದು 6 ಗಂಟೆ 30 ನಿಮಿಷಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತದೆ. ಆದರೆ, ಬುಲೆಟ್​ ರೈಲು ಕಾರ್ಯಾಚರಣೆ ಶುರು ಮಾಡಿದ ಮೇಲೆ ಈ ಅಂತರವನ್ನು ಕೇವಲ 2 ಗಂಟೆ 25 ನಿಮಿಷಗಳಲ್ಲಿ ತಲುಪಲಿದೆ.

    ಹೈ-ಸ್ಪೀಡ್ ರೈಲು ಗಂಟೆಗೆ ಗರಿಷ್ಠ 350 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಸುರಕ್ಷತೆಯ ಸಲುವಾಗಿ ಆ ವೇಗವನ್ನು ಗಂಟೆಗೆ 250 ಕಿ.ಮೀ ಗೆ ಸೀಮಿತಗೊಳಿಸಬಹುದು. ಪ್ರತಿ ರೈಲಿನಲ್ಲಿ 750 ಜನರು ಪ್ರಯಾಣಿಸಬಹುದು. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಹೈಸ್ಪೀಡ್ ರೈಲು ಸಂಚರಿಸುವುದರಿಂದ ಉದ್ಯಮಿಗಳು, ಟೆಕ್ಕಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

    ಇನ್ನು ಈ ಮಾರ್ಗ ನಿರ್ಮಾಣದ ನಂತರ ಪ್ರವಾಸೋದ್ಯಮವು ಬೆಳವಣಿಗೆಯಾಗುತ್ತದೆ. ಈ ಹೈ-ಸ್ಪೀಡ್ ರೈಲು ಓಡಾಟದಿಂದ ಕ್ರಮೇಣ ವಿಮಾನ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು. ಟಿಕೆಟ್ ಬೆಲೆ ಎಸಿ ರೈಲಿನ ದರಕ್ಕಿಂತ ಹೆಚ್ಚಿರಲಿದೆ ಎನ್ನಲಾಗಿದೆ.

    2016ರಲ್ಲಿ ಜರ್ಮನಿ ಎಂಜಿನಿಯರ್‌ಗಳ ತಂಡವು ಚೆನ್ನೈ-ಬೆಂಗಳೂರು-ಮೈಸೂರು ಹೈ-ಸ್ಪೀಡ್ ರೈಲು ಕಾರಿಡಾರ್‌ಗಾಗಿ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಿತ್ತು. 2018ರಲ್ಲಿ ರೈಲ್ವೆಗೆ ಅಂತಿಮ ವರದಿ ಸಲ್ಲಿಸಲಾಗಿತ್ತು. ಅದರ ಪ್ರಕಾರ, 435 ಕಿ.ಮೀ ರೈಲು ಮಾರ್ಗ ನಿರ್ಮಾಣಕ್ಕೆ 1 ಲಕ್ಷ ಕೋಟಿ ರೂ.ವೆಚ್ಚವಾಗಲಿದೆ ಎಂದು ಹೇಳಿತ್ತು.

    ‘ಕೆಜಿಎಫ್‌’, ‘ಕಾಂತಾರ’ ದಾಖಲೆ ಮುರಿದ ‘ಹನುಮಾನ್’..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts