More

    ಕಾಮಗಾರಿ ಪರಿಶೀಲಿಸಿ ಹಸ್ತಾಂತರಿಸಿಕೊಳ್ಳಿ

    ಎನ್.ಆರ್.ಪುರ: ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳು ಪೂರ್ಣಗೊಳ್ಳದೆ, ಮನೆ, ಮನೆಗೆ ನೀರು ಪೂರೈಸದೆ ಯೋಜನೆಗಳನ್ನು ಗ್ರಾಪಂಗೆ ಹಸ್ತಾಂತರಿಸಿಕೊಳ್ಳಬೇಡಿ ಎಂದು ತಾಪಂ ಇಒ ಎಸ್.ನಯನಾ ಎಲ್ಲ ಪಿಡಿಒಗಳಿಗೆ ಸೂಚಿಸಿದರು.

    ಮಂಗಳವಾರ ತಾಪಂ ಸಾಮರ್ಥ್ಯಸೌಧದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಇಲಾಖೆ ಹಾಗೂ ಗ್ರಾಪಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳು ಕಳಪೆಯಾಗಿವೆ. ಓವರ್‌ಹೆಡ್ ಟ್ಯಾಂಕ್‌ಗಳು ಸೋರುತ್ತಿವೆ ಎಂಬ ದೂರುಗಳು ಬರುತ್ತಿವೆ. ಆದ್ದರಿಂದ ಕಾಮಗಾರಿ ಪರೀಶಿಲಿಸದೆ ಯಾವುದೇ ಕಾರಣಕ್ಕೂ ಗ್ರಾಪಂಗೆ ಹಸ್ತಾಂತರಿಸಿಕೊಳ್ಳಬಾರದು. ಸಂಬಂಧಪಟ್ಟ ಇಂಜಿನಿಯರ್ ಅವರಿಂದ ಅಂದಾಜು ಪಟ್ಟಿ ಪಡೆದು, ಅಂದಾಜು ಪಟ್ಟಿಯಂತೆ ಕಾಮಗಾರಿ ನಿರ್ವಹಿಸಲಾಗಿದೆಯೇ? ಕಾಮಗಾರಿ ಗುಣಮಟ್ಟದಿಂದ ಕೂಡಿದೆಯೇ? ಎಂಬುದನ್ನು ಪರಿಶೀಲಿಸಿ ಕಾಮಗಾರಿಗಳನ್ನು ಹಸ್ತಾಂತರಿಸಿಕೊಳ್ಳಿ ಎಂದು ಪಿಡಿಒಗಳಿಗೆ ನಿರ್ದೇಶನ ನೀಡಿದರು.
    ಜೆಜೆಎಂ ಕಾಮಗಾರಿಗಳನ್ನು ಯಾರು ನಿರ್ವಹಿಸುತ್ತಿದ್ದಾರೆ, ಕಾಮಗಾರಿ ಬಗ್ಗೆ ಯಾರಿಗೆ ಕೇಳಬೇಕೆಂಬುವುದೇ ತಿಳಿಯುತ್ತಿಲ್ಲ. ಸಂಬಂಧಪಟ್ಟ ಗುತ್ತಿಗೆದಾರರಿಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದೇ ಇಲ್ಲ. ಸ್ವೀಕರಿಸಿದರೂ ಸರಿಯಾದ ಉತ್ತರ ನೀಡದೆ ಉಡಾೆಯಾಗಿ ವರ್ತಿಸುತ್ತಿದ್ದಾರೆ. ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪ್ರಾರಂಭ ಮಾಡಿರುವ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ ಎಂದು ಎಲ್ಲ ಪಿಡಿಒಗಳು ದೂರಿದರು.
    ಮುತ್ತಿನಕೊಪ್ಪ ಪಿಡಿಒ ಸುಮಿತ್ರಾ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಮರಾಠಿ ಕ್ಯಾಂಪ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಖಾಸಗಿ ಬೋರ್‌ವೆಲ್‌ನಿಂದ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
    ಇಒ ಎಸ್.ನಯನಾ ಮಾತನಾಡಿ, ಸೂಕ್ತ ಕ್ರಮಕೈಗೊಳ್ಳಬೇಕು. ಜೆಜೆಎಂ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಆಯಾ ಪಿಡಿಒಗಳಿಗೆ ಮಾಹಿತಿ ನೀಡಬೇಕು. ಕಾಮಗಾರಿಯ ಅಂದಾಜುಪಟ್ಟಿಯ ಅಂಶಗಳ ವಿವರ ನೀಡುವಂತೆ ಕುಡಿಯುವ ನೀರಿನ ವಿಭಾಗದ ಕಿರಿಯ ಇಂಜಿನಿಯರ್ ರಕ್ಷಿತ್ ಅವರಿಗೆ ಸೂಚಿಸಿದರು.
    ರಕ್ಷ್ಷಿತ್ ಮಾತನಾಡಿ, ಏಳು ಕಾಮಗಾರಿಗಳಲ್ಲಿ ಎರಡು ಬಾಕಿ ಇದೆ. ಶಾಸಕರ ಟಾಸ್‌‌ಕೆೆರ್ಸ್ ಸಮಿತಿಯಿಂದ ನೀಡಿದ 12 ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಎಲ್ಲವನ್ನೂ ಪೂರ್ಣಗೊಳಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
    ಬಿಆರ್‌ಸಿ ಸೇವ್ಯಾನಾಯ್ಕಾ ಮಾತನಾಡಿ, ಶಾಲಾ ಮಕ್ಕಳ ಶೂ, ಸಾಕ್ಸ್‌ಗೆ ಅನುದಾನ ಬಂದಿದ್ದು ಶೀಘ್ರದಲ್ಲೇ ಶೂ, ಸಾಕ್ಸ್ ವಿತರಿಸಲಾಗುವುದು. ಕಡಹಿನಬೈಲು ಗ್ರಾಪಂ ಗುಳ್ಳದಮನೆ ಸರ್ಕಾರಿ ಶಾಲೆ ಮಳೆಗೆ ಸೋರುತ್ತಿದೆ ಎಂದರು. ಈ ಬಗ್ಗೆ ಕಡಹಿನಬೈಲು ಪಿಡಿಒ ಪ್ರೇಮಾ ಸೂಕ್ತ ಕ್ರಮ ಕೈಗೊಳ್ಳುವಂತೆ ಇಒ ಸೂಚಿಸಿದರು.
    ಸಹಾಯಕ ನಿರ್ದೇಶಕರಾದ ಎನ್.ಎಲ್.ಮನೀಶ್, ಸಂತೋಷ್‌ಕುಮಾರ್, ತಾಪಂ ಕಚೇರಿ ಅಧೀಕ್ಷಕಿ ಮಧು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts