More

    ಮದ್ಯ, ಆಹಾರ ಹೋಂ ಡೆಲಿವರಿ ಹೆಸರಲ್ಲಿ ಧೋಖಾ! ಇಬ್ಬರ ಬಂಧನ

    ಜೈಪುರ : ಲಾಕ್​ಡೌನ್​ ಸಮಯದಲ್ಲಿ ಮದ್ಯ ಮತ್ತು ಆಹಾರ ಪದಾರ್ಥಗಳನ್ನು ಮನೆಗೇ ತಲುಪಿಸುವುದಾಗಿ ನಂಬರ್ ನೀಡಿ, ಆನ್​ಲೈನ್​ ಹಣ ವರ್ಗಾಯಿಸಿಕೊಂಡು 100 ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ ಇಬ್ಬರು ಖದೀಮರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಭರತಪುರ ಜಿಲ್ಲೆಯ ನಿವಾಸಿಗಳಾದ ತಾರೀಫ್ ಖಾನ್(24) ಮತ್ತು ತೌಫೀಕ್​(22) ಬಂಧಿತ ಆರೋಪಿಗಳು.

    ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯು, ಜನಪ್ರಿಯ ಸ್ವೀಟ್​ ಶಾಪಿನಿಂದ ಫುಡ್​ ಪ್ಯಾಕೆಟ್​ಗಳ ಡೆಲಿವರಿ ಮಾಡುವುದಾಗಿ ಇಂಟರ್​ನೆಟ್​ನಲ್ಲಿ ಹಾಕಿದ್ದ ನಂಬರ್​ಗೆ ಫೋನ್​ ಮಾಡಿದ್ದರು. ಆಗ ಆರೋಪಿಗಳು, ಅಂಗಡಿಯ ಸಿಬ್ಬಂದಿ ಎಂದು ಹೇಳಿಕೊಂಡು ಮುಂಗಡ ಹಣ ವರ್ಗಾಯಿಸಲು ಬಾರ್​ಕೋಡ್​ ಸ್ಕ್ಯಾನ್​ ಮಾಡಿ ಎಂದು ಹೇಳಿದರು. ಹಾಗೆ ಮಾಡಿದಾಗ ನಾಲ್ಕು ಪ್ರತ್ಯೇಕ ವ್ಯವಹಾರಗಳು ನಡೆದು ದೂರುದಾರರ ಖಾತೆಯಿಂದ 82,500 ರೂಪಾಯಿಗಳು ಕಡಿತಗೊಂಡಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಅಮೆರಿಕದಲ್ಲಿ ಮೀರಾಬಾಯಿ ಚಾನು ಚಿಕಿತ್ಸೆ, ತರಬೇತಿಗೆ ಮೋದಿ ನೆರವು!

    ವಿಚಾರಣೆ ನಡೆಸಿದಾಗ ಆರೋಪಿಗಳು ಹರಿಯಾಣದ ಮೇವಾತ್​ನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದರು. ಒಡಿಶಾ, ಹರಿಯಾಣ, ರಾಜಸ್ತಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿಂದ ನಕಲಿ ಮೊಬೈಲ್ ನಂಬರ್​ಗಳನ್ನು ಬಳಸುತ್ತಿದ್ದರು ಎಂಬುದು ತಿಳಿದುಬಂತು. ಈ ಮೊಬೈಲ್ ನಂಬರ್​ಗಳನ್ನು ಟ್ಯಾಪ್​ ಮಾಡಿ, ತನಿಖೆ ಕೈಗೊಂಡ ನಂತರ ಆರೋಪಿಗಳನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಬಂಧಿಸಲಾಯಿತು. ಆರೋಪಿಗಳಿಂದ ನಾಲ್ಕು ಮೊಬೈಲ್​ಗಳು, 28 ಸಿಮ್​ ಕಾರ್ಡ್​ಗಳು ಮತ್ತು 16,000 ರೂ. ನಗದು ಮತ್ತು ವಂಚನೆಯ ಹಣದಿಂದ ಖರೀದಿಸಿದ್ದ ಮಾರುತಿ ಬ್ರೀಜಾ ಕಾರನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಆ್ಯಂಟೋ ಅಲ್​ಫೊನ್ಸೆ ಹೇಳಿದ್ದಾರೆ. (ಏಜೆನ್ಸೀಸ್)

    ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್​ಚಂದ್​ ಹೆಸರು

    ನೀರಿನ ಮೇಲೆ ಶೀರ್ಷಾಸನ! ಫಿನ್ಲೆಂಡ್​ ಮಹಿಳೆಯ ವಿಭಿನ್ನ ಪ್ರ’ಯೋಗ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts