More

    ಇ ಕಾಮರ್ಸ್​ ಕಂಪನಿಗೆ ಹೂಡಿಕೆ ಸೋಗಲ್ಲಿ 7.30 ಲಕ್ಷ ರೂ. ಧೋಖಾ! ಗಿಫ್ಟ್​ ಆಸೆಗೆ ಹಣ ಕಳೆದುಕೊಂಡ ಯುವಕ

    ಬೆಂಗಳೂರು: ಇ ಕಾಮರ್ಸ್​ ಉದ್ಯಮದಲ್ಲಿ 2.30 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡ ಸೈಬರ್ ಕಳ್ಳರು ಉಡುಗೊರೆ ಕೊಡುವುದಾಗಿ ನಂಬಿಸಿ, 5 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹೂಡಿ ನಿವಾಸಿ ಪ್ರತಿಕ್​ (23) ಹಣ ಕಳೆದುಕೊಂಡವರು. ಈತ ಕೊಟ್ಟ ದೂರಿನ ಮೇರೆಗೆ ಆರೋಪಿ ಮುನ್ನಿ ದೇವಿ ಎಂಬಾಕೆಯ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ವೈಟ್​ಫೀಲ್ಡ್​ ಉಪ ವಿಭಾಗ ಸಿಇಎನ್​ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಪ್ರತಿಕ್​ ಮೊಬೈಲ್​ಗೆ ಕರೆ ಮಾಡಿದ ಮಹಿಳೆ, ಇ ಕಾಮರ್ಸ್​ ಕಂಪನಿ ಈಝಿಬೈಟೈಮ್​.ಕಾಂ ಕಂಪನಿಯಿಂದ ಕರೆ ಮಾಡುತ್ತಿದ್ದೇನೆ. ಇ-ಕಾಮರ್ಸ್​ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಆಕರ್ಷಕ ಲಾಭಾಂಶ ಮತ್ತು ಉಡುಗೊರೆ ಕೊಡುವುದಾಗಿ ನಂಬಿಸಿ ಆರಂಭದಲ್ಲಿ 2.30 ಲಕ್ಷ ರೂ. ಅನ್ನು ಆನ್​ಲೈನ್​ನಲ್ಲಿ ಹೂಡಿಕೆ ಮಾಡಿಸಿಕೊಂಡಿದ್ದರು. ಇದಾದ ಮೇಲೆ ನಿಮ್ಮ ಹೆಸರಿಗೆ ಟಿವಿ ಗಿಫ್ಟ್ ಬಂದಿದೆ. ಅದನ್ನು ಪಡೆಯಲು 6 ಸಾವಿರ ರೂ. ಪಾವತಿ ಮಾಡಬೇಕೆಂದು ಪ್ರತಿಕ್​ಗೆ ಹೇಳಿದ್ದಾರೆ. ಇದನ್ನೂ ನಂಬಿದ ಪ್ರತಿಕ್​, 6 ಸಾವಿರ ರೂ. ವರ್ಗಾವಣೆ ಮಾಡಿದ್ದರು. ಆದರೆ, ಟಿವಿ ಮಾತ್ರ ಕೈ ಸೇರಲಿಲ್ಲ. ಆಗ ಪ್ರತಿಕ್​, ನಾನು ಹೂಡಿಕೆ ಮಾಡಿರುವ ಹಣವನ್ನು ವಾಪಸ್​ ಪಡೆಯುವುದಾಗಿ ಕೇಳಿಕೊಂಡಿದ್ದಾರೆ. ಅದಕ್ಕೆ ವಂಚಕಿ, ನೀವು ಹೂಡಿಕೆ ಮಾಡಿರುವ ಹಣ ದುಪ್ಪಟ್ಟು ಆಗಿದೆ. 5 ಲಕ್ಷ ರೂ. ಪಾವತಿ ಮಾಡಿದರೆ ಸಂಪೂರ್ಣ ಹಣವನ್ನು ವಾಪಸ್​ ಕೊಡುವುದಾಗಿ ಷರತ್ತು ವಿಧಿಸಿದ್ದಾರೆ.

    ದಿಕ್ಕು ತೋಚದ ಪ್ರತಿಕ್​, ಸ್ನೇಹಿತರ ಬಳಿ ಸಾಲ ಪಡೆದು 5 ಲಕ್ಷ ರೂಪಾಯಿಯನ್ನು ಆರೋಪಿಗಳು ಹೇಳಿದ ಬ್ಯಾಂಕ್​ ಖಾತೆಗೆ ಜಮೆ ಮಾಡಿದ್ದರು. ಆದರೆ, ಹೂಡಿಕೆ ಹಣ ಮಾತ್ರ ವಾಪಸ್​ ಬರಲಿಲ್ಲ. ಮೊಬೈಲ್​ ನಂಬರ್​ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ದಿಕ್ಕು ತೋಚದೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಇದರ ಅನ್ವಯ ಎಫ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ವಿದ್ಯಾರ್ಥಿನಿಗೇ ಲವ್​ ಲೆಟರ್ ಬರೆದ ಶಿಕ್ಷಕ! ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಕೊಟ್ಟ ಗ್ರಾಮಸ್ಥರು

    ವಿದ್ಯಾರ್ಥಿನಿಗೇ ಲವ್​ ಲೆಟರ್ ಬರೆದ ಶಿಕ್ಷಕ! ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಕೊಟ್ಟ ಗ್ರಾಮಸ್ಥರು

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts