More

    ಮೋಸ ಮಾಡಿದ್ರಾ ನಟಿ ಸನ್ನಿ ಲಿಯೋನ್​?; ದೂರು ದಾಖಲಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ..

    ನವದೆಹಲಿ: ನೀಲಿತಾರೆ, ನಟಿ ಸನ್ನಿ ಲಿಯೋನ್​ ವಿರುದ್ಧ ವಂಚನೆ ಕೇಸ್​ ದಾಖಲಾಗಿದೆ. ದೂರು ದಾಖಲಾಗಿದ್ದು ತಿಳಿಯುತ್ತಿದ್ದಂತೆ ಅವರು ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್​​ಗೆ ಅರ್ಜಿ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸನ್ನಿ ಲಿಯೋನ್​ರನ್ನು ಠಾಣೆಗೆ ಕರೆಸಿರುವ ಕೇರಳ ಕ್ರೈಂ ಬ್ರ್ಯಾಂಚ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಕೇರಳದ ಪೆರುಂಬವೂರ್​ ಮೂಲದ ಇವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ಸನ್ನಿ ಲಿಯೋನ್ ವಿರುದ್ಧ ವಂಚನೆ ಆರೋಪ ಹೊರಿಸಿ ಪೊಲೀಸರಿಗೆ ಭಾನುವಾರ ದೂರು ನೀಡಿದೆ. ಸನ್ನಿ ಲಿಯೋನ್ ಒಪ್ಪಂದ ಪ್ರಕಾರ ನಡೆದುಕೊಳ್ಳದೆ ಮೋಸ ಮಾಡಿದ್ದಾರೆ ಎಂದು ಕಂಪನಿ ಆರೋಪ ಮಾಡಿದೆ.

    ಇದನ್ನೂ ಓದಿ: ಒಂದು ಸ್ಕೀಂನಲ್ಲಿ ಬ್ಲಾಕ್‌ಲಿಸ್ಟ್, ಇನ್ನೊಂದರಲ್ಲಿ ಪಾಸ್!ಸಮಾಜ ಕಲ್ಯಾಣ ಇಲಾಖೆ ಕಾರ್ಯವೈಖರಿ ವ್ಯಕ್ತವಾಗಿದೆ ಅನುಮಾನ

    ಸನ್ನಿ ಲಿಯೋನ್​ 12 ವಿವಿಧ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಒಟ್ಟು 29 ಲಕ್ಷ ರೂಪಾಯಿ ಪಡೆದು 2016ರಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅವರು ಅದಕ್ಕೆ ಹಾಜರಾಗಿಲ್ಲ ಎಂದು ಕಂಪನಿ ಆರೋಪಿಸಿದೆ. ಎಫ್​ಐಆರ್ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರಿಂದ ವಿಚಾರಣೆಗೆ ಒಳಗಾಗಿರುವ ಸನ್ನಿ ಲಿಯೋನ್​, ಹಣ ತೆಗೆದುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಆ ಪೈಕಿ 5 ಸಮಾರಂಭಗಳು ಮುಂದೂಡಲ್ಪಟ್ಟಿದ್ದು, ಅದರಲ್ಲಿ ನನ್ನ ತಪ್ಪೇನೂ ಇಲ್ಲ ಎಂದು ಸನ್ನಿ ಸ್ಪಷ್ಟನೆ ನೀಡಿದ್ದಾರೆ. ಮಾತ್ರವಲ್ಲ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಕೇರಳ ಹೈಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. (ಏಜೆನ್ಸೀಸ್)

    ಕಾಣೆಯಾಗಿದ್ದ ಯುವಕ ಮಂಗಳಮುಖಿಯಾಗಿ ಪ್ರತ್ಯಕ್ಷ: ಆತ್ಮಹತ್ಯೆಗೂ ಮುನ್ನ ಸ್ಫೋಟಕ ರಹಸ್ಯ ಬಯಲು!

    ಶರ್ಟ್​ ಫಿಟಿಂಗ್ ಸರಿ ಇಲ್ಲ ಅಂತ ಟೈಲರ್​ನ ಕತ್ತು ಹಿಸುಕಿ ಕೊಂದೇ ಬಿಟ್ಟ!

    ಶರ್ಟ್​ ಫಿಟಿಂಗ್ ಸರಿ ಇಲ್ಲ ಅಂತ ಟೈಲರ್​ನ ಕತ್ತು ಹಿಸುಕಿ ಕೊಂದೇ ಬಿಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts