More

    ಕೆವೈಸಿ ಅಪ್​ಡೇಟ್​ ಮಾಡ್ತೀವಿ ಮೇಡಂ ಎನ್ನುತ್ತಲೇ 12 ಲಕ್ಷ ರೂಪಾಯಿ ಪೀಕಿದ ಸೈಬರ್ ಕಳ್ಳರು!

    ಬೆಂಗಳೂರು: ಬ್ಯಾಂಕ್ ಖಾತೆಗೆ ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್ ಬದಲಾಯಿಸಿ ಸೈಬರ್ ಕಳ್ಳರು 12.89 ಲಕ್ಷ ರೂ. ದೋಚಿದ್ದಾರೆ.

    ಜೆ.ಪಿ.ನಗರದ ಆರ್‌ಬಿಐ ಲೇಔಟ್ ನಿವಾಸಿ ಜಲಾ ಪ್ರಭಾ (69) ವಂಚನೆಗೆ ಒಳಗಾದವರು. ಜೂನ್ 22ರಂದು ಜಲಾ ಪ್ರಭಾ ಮೊಬೈಲ್ ನಂಬರ್‌ಗೆ ಕೆವೈಸಿ ಅಪ್‌ಡೇಟ್ ಮಾಡಬೇಕೆಂದು ಅಪರಿಚಿತ ವ್ಯಕ್ತಿಯಿಂದ ಸಂದೇಶ ಬಂದಿದೆ. ಗಮನಿಸಿದ ಜಲಾ ಪ್ರಭಾ, ಸಂದೇಶದಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, ಎಸ್‌ಬಿಐ ಬ್ಯಾಂಕ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ನಿಮ್ಮ ವೈಯಕ್ತಿಕ ಖಾತೆಗೆ ಕೆವೈಸಿ ಅಪ್‌ಡೇಟ್ ಮಾಡಬೇಕು. ಇಲ್ಲವಾದರೆ, ಖಾತೆ ಬ್ಲಾಕ್ ಆಗಲಿದೆ ಎಂದು ಹೆದರಿಸಿದ್ದಾರೆ. ಅದಕ್ಕೆ ಒಪ್ಪಿದ ಜಲಾ ಪ್ರಭಾ, ಏನು ಮಾಡಬೇಕೆಂದು ಹೇಳಿದಾಗ ಸೈಬರ್ ಕಳ್ಳ, ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಮತ್ತು ಹುಟ್ಟಿದ ದಿನಾಂಕವನ್ನು ಪಡೆದಿದ್ದಾರೆ. ಆನಂತರ ಸೈಬರ್ ಕಳ್ಳ, ದೂರುದಾರರ ಅರಿವಿಗೆ ಬಾರದಂತೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್ ಬದಲಾಯಿಸಿ ಹಂತ ಹಂತವಾಗಿ 12.89 ಲಕ್ಷ ರೂ. ಅನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಸ್ವಲ್ಪ ದಿನಗಳ ಬಳಿಕ ಬ್ಯಾಂಕ್‌ಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಜಲಾ ಪ್ರಭಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಣವೀರ್​ ಹೊಸ ವೇಷ; ಹೆಂಡತಿ ಬಟ್ಟೆ, ಬ್ಯಾಗು ತೊಟ್ಟ ಗಂಡ ಎಂದು ಅಣಕಿಸಲಾರಂಭಿಸಿದ ನೆಟ್ಟಿಗರು

    ಯಮುನಾ ನದಿಗೆ ಹಾರಿದ ಸೋಶಿಯಲ್ ಮೀಡಿಯಾ ಸ್ಟಾರ್! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆತ್ಮಹತ್ಯೆಯ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts