More

    ತವರಿನತ್ತ ಚಾರ್‌ಧಾಮ್ ಯಾತ್ರಾರ್ಥಿಗಳು

    ಲಕ್ಷ್ಮೇಶ್ವರ: ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಪಟ್ಟಣದ ಪ್ರಕಾಶ ಕಮಡೊಳ್ಳಿ ಸೇರಿ ಮೂವರು ಸಹ ಯಾತ್ರಾರ್ಥಿಗಳು ಬುಧವಾರ ರೈಲ್ವೆ ಮೂಲಕ ದೆಹಲಿಯಿಂದ ತವರಿನತ್ತ ಬರುತ್ತಿದ್ದಾರೆ.

    ಪಟ್ಟಣದ ಹಿಂದುಪರ ಸಂಘಟನೆಯ ಪ್ರಕಾಶ ಕಮಡೊಳ್ಳಿ ಅವರು ಸ್ನೇಹಿತರಾದ ಹಾವೇರಿ ಜಿಲ್ಲೆ ಗುಡಿಸಲಕೊಪ್ಪದ ಪರಮೇಶ ಬಂಡಿ, ಕುಂದಾಪುರದ ದೀಕ್ಷಿತ ಶೆಟ್ಟಿ, ಕುಂದಗೋಳ ತಾಲೂಕು ಸಂಶಿ ಗ್ರಾಮದ ಭೀಮಸೇನ ಗೋಕುಲ ಜೂ.30ರಂದು ಹುಬ್ಬಳ್ಳಿಯಿಂದ ಹೊರಟು ಕೇದಾರನಾಥ, ಬದರಿನಾಥ, ದೇವಪ್ರಯಾಗ ಕ್ಷೇತ್ರ ದರ್ಶನ ಕೈಗೊಂಡಿದ್ದರು. ಈ ವೇಳೆ ಹವಾಮಾನ ವೈಪರೀತ್ಯದಿಂದ ಪ್ರಯಾಣಕ್ಕೆ ಅಡ್ಡಿಯಾಗಿದ್ದರಿಂದ ವಾಪಸಾಗುತ್ತಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ಪ್ರಕಾಶ, ಋಷಿಕೇಶ ಕ್ಷೇತ್ರಕ್ಕೆ 30 ಕಿ.ಮೀ. ಅಂತರವಿರುವ ಸಂದರ್ಭದಲ್ಲಿ ಗುಡ್ಡ ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಈ ವೇಳೆ ಕಾರ್ ಪಂಕ್ಚರ್ ಆಗಿ 2-3 ಗಂಟೆಯವರೆಗೂ ಕೊರೆವ ಚಳಿಯಲ್ಲಿ ರಾತ್ರಿಯಿಡಿ ಭಯದಲ್ಲಿ ಕಾಲ ಕಳೆಯುವಂತಾಗಿತ್ತು. ಬೆಳಗಿನ ಜಾವ ಎನ್‌ಡಿಆರ್‌ಎಫ್ ತಂಡವು ಸುಗಮ ಸಂಚಾರಕ್ಕೆ ಅನುಕೂಲ ಮಾಡಿದ್ದರಿಂದ ಹರಿದ್ವಾರ ತಲುಪಿದೆವು. ಬಸ್, ರೈಲು ಸಂಪರ್ಕ ಕಡಿತಗೊಂಡಿದ್ದರಿಂದ ಎರಡು ದಿನ ಅಲ್ಲಿಯೇ ಇದ್ದೆವು. ಎನ್‌ಡಿಆರ್‌ಎಫ್ ಮತ್ತು ಪೊಲೀಸರು ಸಾಕಷ್ಟು ಸಹಾಯ ಮಾಡಿದ್ದಾರೆ. ಹರಿದ್ವಾರದಿಂದ ಬುಧವಾರ ಹೊರಟು ಸಂಜೆ ವೇಳೆಗೆ ನಾಲ್ವರೂ ಸುರಕ್ಷಿತವಾಗಿ ದೆಹಲಿ ತಲುಪಿದ್ದೇವೆ’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts