More

    ಚಾರ್​ ಧಾಮ್​ ಯಾತ್ರೆಗೆ ಸಂಪೂರ್ಣ ತೆರೆದ ಬಾಗಿಲು; ಯಾತ್ರಾರ್ಥಿಗಳಿಗೆ ಈ ದಾಖಲಾತಿಗಳು ಅಗತ್ಯ

    ಡೆಹ್ರಾಡೂನ್: ಹಿಮಾಲಯದ ಮಡಿಲಿನಲ್ಲಿರುವ ನಾಲ್ಕು ಪುಣ್ಯ ಕ್ಷೇತ್ರಗಳ ಯಾತ್ರೆಯಾದ ‘ಚಾರ್​ ಧಾಮ್​ ಯಾತ್ರೆ’ಗೆ ಉತ್ತರಾಖಂಡ ಸರ್ಕಾರ ಇಂದು ಹೊಸ ಎಸ್​ಒಪಿ ಜಾರಿಗೊಳಿಸಿದೆ. ನೋಂದಣಿ ಮತ್ತು ಈ-ಪಾಸ್​ಗಳೊಂದಿಗೆ ಕೇದಾರನಾಥ, ಬದರೀನಾಥ, ಗಂತೋತ್ರಿ ಮತ್ತು ಯಮುನೋತ್ರಿ ದೇವಾಲಯಗಳಿಗೆ ಭೇಟಿ ನೀಡಲು ಯಾತ್ರಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

    ಚಾರ್​ ಧಾಮ್​ ಯಾತ್ರೆಗೆ ತೆರಳಲಿಚ್ಛಿಸುವವರು ಎರಡೂ ಡೋಸ್​ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು ಅಥವಾ 72 ಗಂಟೆಗಳೊಳಗೆ ಪಡೆದಿರುವ ಕೋವಿಡ್​ ನೆಗೆಟೀವ್ ರಿಪೋರ್ಟ್​ ಹೊಂದಿರಬೇಕು. ಯಾತ್ರಾರ್ಥಿಗಳು ಅಗತ್ಯ ದಾಖಲೆಗಳನ್ನು ಹೊಂದಿರುವುದನ್ನು ತಪಾಸಣೆ ಮಾಡಲು ಚಮೋಲಿ, ರುದ್ರಪ್ರಯಾಗ್ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಚೆಕ್​ಪೋಸ್ಟ್​ಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

    ಕರೊನಾ ಹಿನ್ನೆಲೆಯಲ್ಲಿ ಈ ನಾಲ್ಕು ಕ್ಷೇತ್ರಗಳಿಗೆ ಪ್ರತಿದಿನ ಭೇಟಿ ನೀಡಬಲ್ಲ ಭಕ್ತರ ಸಂಖ್ಯೆ ಮೇಲೆ ಈ ಮುನ್ನ ವಿಧಿಸಲಾಗಿದ್ದ ಮಿತಿಯನ್ನು ಉತ್ತರಾಖಂಡ ಹೈಕೋರ್ಟ್​ ಮಂಗಳವಾರದಂದು ತೆರವುಗೊಳಿಸಿತ್ತು. ಈವರೆಗೆ ಬದರೀನಾಥಕ್ಕೆ ದಿನವೊಂದಕ್ಕೆ 1,000, ಕೇದಾರನಾಥಕ್ಕೆ 800, ಗಂಗೋತ್ರಿಗೆ 600 ಮತ್ತು ಯಮುನೋತ್ರಿಗೆ 400 ಯಾತ್ರಿಗಳಿಗೆ ಮಾತ್ರ ಪ್ರವೇಶಾವಕಾಶ ಇತ್ತು. ಇನ್ನು ಮುಂದೆ ಆ ರೀತಿಯ ಯಾವುದೇ ನಿರ್ಬಂಧ ಇರುವುದಿಲ್ಲ. (ಏಜೆನ್ಸೀಸ್)

    ತುಂಬಾ ಹೊತ್ತು ಕಂಪ್ಯೂಟರ್​ ಮುಂದೆ ಕೂತು ಕೆಲಸ ಮಾಡುತ್ತೀರಾ? ಹಾಗಿದ್ರೆ, ಈ ಉಪಯುಕ್ತ ಆಸನಗಳನ್ನು ಮಾಡಿ

    ‘ಸರ್ಕಾರದ ದುಷ್ಕರ್ಮಗಳಿಗೆ ಪಶ್ಚಾತ್ತಾಪ’ ಎಂದು ತಲೆಬೋಳಿಸಿಕೊಂಡ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts