More

    ಸರ್ಕಾರಿ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಅನ್ಯರಿಗೆ ಲೀಸ್ ನೀಡಿದ ವಂಚಕರು! ಕೋಟ್ಯಾಂತರ ರೂ. ಗುಳುಂ…

    ಬೆಂಗಳೂರು: ಕೇಂದ್ರ ಸರ್ಕಾರ ಅಧೀನದಲ್ಲಿರುವ ಹೆಚ್ಎಎಲ್ ಜಮೀನಿನ ನಕಲಿ ದಾಖಲೆ ಸೃಷ್ಟಿ ಮಾಡಿ ಬೇರೆಯವರಿಗೆ ಲೀಸ್ ಗೆ ಕೊಟ್ಟು ಕೊಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಏಳು ಮಂದಿ ವಂಚಕರನ್ಜು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.

    ಎಚ್ಎಎಲ್ ಅಧಿಕಾರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೈಯದ್ ಮುನ್ನಾವರ್ ಸಾಬ್ರಿ, ಪ್ರತಾಪ್, ಸೈಯದ್ ಅಫ್ರೋಜ್, ರಾಜ್ ಕುಮಾರ್, ಶ್ರೀನಿವಾಸ ಮೂರ್ತಿ ಹಾಗೂ ವೈಜಯಂತ್ ಎನ್ನುವವರನ್ನು ಬಂಧಿಸಿದ್ದಾರೆ.

    ಈ ಖತರ್ನಾಕ್ ಕಿಲಾಡಿಗಳು ದಾಖಲಾತಿಯನ್ನ ಡೂಪ್ಲಿಕೇಟ್ ಮಾಡುತ್ತಾರೆ. ಡೂಪ್ಲಿಕೇಟ್ ದಾಖಲೆಗಳನ್ನ ಒರಿಜಿನಲ್ ಮಾಡ್ತಾರೆ. ಯಾವ ಜಾಗಕ್ಕೆ ಬೇಕಾದರೂ ಬೇಕಾಗುವ ಹಾಗೆ ದಾಖಲೆ ಸೃಷ್ಟಿ ಮಾಡುವ ಕಲೆ ಸಿದ್ದಿಸಿಕೊಂಡಿದ್ದರು. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಜಾಗವನ್ನೇ ಕಬಳಿಸುವುದಕ್ಕೆ ಈ ಖತರ್ನಾಕ್ ಕಿಲಾಡಿಗಳು ಮುಂದಾಗಿದ್ದರು. ಸಣ್ಣ-ಪುಟ್ಟ ಜಾಗಕ್ಕೆ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿ ಮಾಡಿರೋರನ್ನ ನೀವು ನೋಡಿರುತ್ತೀರಿ. ಆದರೆ ಸಿಕ್ಕಿಬಿದ್ದಿರುವ ಆರೋಪಿಗಳು ಮಾತ್ರ ಸಾಮಾನ್ಯದವರಲ್ಲ. ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೇಂದ್ರ ಸರ್ಕಾರಕ್ಕೆ ಸೇರಿರುವ 833 ಎಕರೆ ಜಾಗದ ನಕಲಿ ದಾಖಲಾತಿ ಸೃಷ್ಟಿ ಮಾಡಿ ಲೀಸ್ ಗೆ ಪಡೆದಿರೋದಾಗಿ ಡಾಕ್ಯುಮೆಂಟ್ ರೆಡಿ ಮಾಡಿಕೊಂಡು ಅದಕ್ಕೆ ಹೆಚ್ಎಎಲ್ ಸಂಸ್ಥೆಯ ಲೆಟರ್ ಹೆಡ್ ಮತ್ತು ಅಧಿಕಾರಿಗಳ ಸೀಲ್ ಮತ್ತು ಸಹಿಯನ್ನ ನಕಲು ಮಾಡಿಸಿದ್ದಾರೆ.

    ಹೀಗೆ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದ ಆರೋಪಿಗಳು ಮೂರನೇ ವ್ಯಕ್ತಿಗಳಿಗೆ ಗಾಳ ಹಾಕುತ್ತಿದ್ದರು. ತಾವು ತಯಾರು ಮಾಡಿದ್ದ ನಕಲಿ ದಾಖಲಾತಿ ತೋರಿಸಿ ನಾವು ಹೆಚ್ಎಎಲ್ ಸಂಸ್ಥೆಯಿಂದ 30 ವರ್ಷಕ್ಕೆ ಜಾಗ ಲೀಸ್ ಪಡೆದಿದ್ದೇವೆ. ನಿಮಗೆ ಬೇಕಾದರೆ ವಾಣಿಜ್ಯ ವ್ಯವಹಾರಕ್ಕಾಗಿ ಲೀಸ್ ಮತ್ತು ಬಾಡಿಗೆಗಾಗಿ ನೀಡುತ್ತೇವೆ ಎಂದು ಹಣ ಪಡೆಯುತ್ತಿದ್ದರು. ಹೀಗೆ ಇಬ್ಬರು ವ್ಯಕ್ತಿಗಳಿಂದ ಒಂದು ಕೋಟಿ ಹಣ ಪಡೆದು ವಂಚನೆ ಮಾಡಿದ್ದಾರೆ. ವಿಚಾರ ಗೊತ್ತಾಗಿ ಹೆಚ್ಎಎಲ್ ಅಧಿಕಾರಿಗಳು ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ 7 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಪ್ರಮುಖ ಆರೋಪಿ ಬಿನಿಷ್ ಥಾಮಸ್ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ಏನೇ ಹೇಳಿ, ಸಣ್ಣ ಪುಟ್ಟ ನಿವೇಶನ,ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ ಮಾಡಿ ಗುಳುಂ ಮಾಡಿರುವ ತಿಮಿಂಗಲ ಗಳನ್ನ ನೋಡಿದ್ದೀವಿ. ಆದರೆ ಕೇಂದ್ರ ಸರ್ಕಾರದ ಜಮೀನಿನ ದಾಖಲೆ ಸೃಷ್ಟಿ ಮಾಡಿ ವ್ಯವಹಾರಕ್ಕೆ ಇಳಿದಿರೋದು ನಿಜಕ್ಕೂ ಬೆಚ್ಚಿ ಬೀಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts