More

    ಕೋಡಿ ಬಿದ್ದ ಹಿರೇಕೋಗಲೂರು ಕೆರೆ; ಮೀನು ಬೇಟೆಗೆ ಮುಗಿಬಿದ್ದ ಜನ

    ಚನ್ನಗಿರಿ: ತಾಲೂಕಿನಲ್ಲಿ ಈಚೆಗೆ ಸುರಿದ ಮಳೆಯಿಂದ ಹಿರೇಕೋಗಲೂರು ಕೆರೆ ಕೋಡಿ ಬಿದ್ದಿದ್ದು, ಮೀನು ಹಿಡಿಯಲು ಜನ ಮುಗಿದ್ದಿದ್ದರು.

    ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದ ತಾಲೂಕಿನ ಬಹುತೇಕ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಹೀರೆಕೋಗಲೂರು ಕೆರೆ ಗುರುವಾರ ರಾತ್ರಿ ಕೋಡಿ ಬಿದ್ದು, ನೀರು ಸಮೇತ ಮೀನುಗಳು ಹರಿಯುತ್ತಿವೆ. ಇದರಿಂದ ಮತ್ಸೃ ಬೇಟೆಯಾಡಲು ಗ್ರಾಮಸ್ಥರು ಬೆಳಗ್ಗೆಯಿಂದಲೇ ಕೆರೆ ಬಳಿ ನೆರೆದಿದ್ದರು.

    ಬೆಲೆ, ಸೊಳ್ಳೆ ಪರದೆ ಹಿಡಿದು ಬಂದಿದ್ದ ಹಲವರಿಗೆ ಭರಪೂರ ಮೀನುಗಳು ಸಿಕ್ಕಿದ್ದವು. ಇದರಿಂದ ಕೆಲವರು ತಮ್ಮ ಸಂಬಂಧಿಗಳು ಹಾಗೂ ಸ್ನೇಹಿತರ ಊರುಗಳಿಗೆ ಕಳುಹಿಸಿದರು. ಮೀನುಗಾರರ ಸಹಕಾರ ಸಂಘದಿಂದ ಕೆರೆಯಲ್ಲಿ ಈ ಹಿಂದೆ ಗೌರಿ, ಕಾಟ್ಲ, ಜಿಲೇಬಿ ಸೇರಿ ವಿವಿಧ ಜಾತಿಯ ಮೀನು ಮರಿಗಳನ್ನು ಬಿಡಲಾಗಿದ್ದು, ಅವು ಈಗ ದೊಡ್ಡವಾಗಿವೆ. ಬಾರಿ ಮಳೆ ಸುರಿದ ಪರಿಣಾಮ ಕೆರೆ ತುಂಬಿ ಮೀನು ಹಾಗೂ ಮರಿಗಳು ಹೊರ ಬಂದಿವೆ.

    ಕೆರೆಯಲ್ಲಿ ಹೂಳು ತುಂಬಿದ್ದು, ಈಗ ಮಳೆಯಿಂದ ಕೋಡಿ ಬಿದ್ದಿದೆ. ಈ ಬಾರಿಗೆ ಕೆರೆ ವಿವಿಧ ಜಾತಿಯ ಮೀನಿನ ಮರಿಗಳನ್ನು ಬಿಡಲಾಗಿತ್ತು. ಕೋಡಿ ಬಿದ್ದ ಕಾರಣ ಮೀನು ಹೊರ ಬಂದಿದ್ದು, ನಷ್ಟ ಸಂಭವಿಸಿದೆ.
    | ಕೆ.ಜಿ.ಜಗದೀಶ್‌ಗೌಡ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ

    ನಮ್ಮ ಗ್ರಾಮದ ಕೆರೆಯ ಮೀನು ರುಚಿಯಾಗಿರುತ್ತವೆ. ಕೆರೆ ಕೋಡಿಬಿದ್ದ ಸುದ್ದಿ ಹರಡುತ್ತಿದ್ದಂತೆ ಜನ ಮನೆಯಲ್ಲಿನ ಬುಟ್ಟಿ, ಪರದೆ ಸೇರಿ ವಿವಿಧ ಸಾಮಗ್ರಿ ಹಿಡಿದು ಕೆರೆ ಬಳಿ ತೆರಳಿದ್ದರು. ಒಂದು ಮನೆಗೆ ನಾಲ್ಕರಿಂದ ಐದು ಕೆಜಿವರೆಗೆ ಮೀನು ಸಿಕ್ಕಿವೆ.
    | ರಂಗಪ್ಪ ಗ್ರಾಮಸ್ಥ

    ಸಿಂದಗಿಯಲ್ಲಿ ಕಂಡ ಹಳದಿ ಕಪ್ಪೆ

    ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಅಳಿವಿಲ್ಲ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts