More

    ಕಲ್ಯಾಣ ಮಂಟಪದಲ್ಲಿ ಮತದಾನ ಜಾಗೃತಿ

    ಚನ್ನಗಿರಿ: ಪಟ್ಟಣದ ಶ್ರೀ ವಿಠಲ ರುಖುಮಾಯಿ ಕಲ್ಯಾಣ ಮಂದಿರದಲ್ಲಿ ಮಂಗಳವಾರ ನಡೆಯುತ್ತಿದ್ದ ವಿವಾಹದಲ್ಲಿ ನವ ದಂಪತಿ ಸೇರಿ ಮದುವೆಗೆ ಬಂದವರಿಗೆ ಪುರಸಭೆ ಸಿಬ್ಬಂದಿ ಮತದಾನ ಮಾಡುವಂತೆ ಪ್ರೇರೇಪಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು.

    ಚನ್ನಗಿರಿ: ಪಟ್ಟಣದ ಶ್ರೀ ವಿಠಲ ರುಖುಮಾಯಿ ಕಲ್ಯಾಣ ಮಂದಿರದಲ್ಲಿ ಮಂಗಳವಾರ ನಡೆಯುತ್ತಿದ್ದ ವಿವಾಹದಲ್ಲಿ ನವ ದಂಪತಿ ಸೇರಿ ಮದುವೆಗೆ ಬಂದವರಿಗೆ ಪುರಸಭೆ ಸಿಬ್ಬಂದಿ ಮತದಾನ ಮಾಡುವಂತೆ ಪ್ರೇರೇಪಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು.

    ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಾಸೀಂ ಮಾತನಾಡಿ, ಉತ್ತಮ ನಾಯಕರ ಆಯ್ಕೆ ಮಾಡಲು ಸಂವಿಧಾನ ನಮಗೆ ಮತದಾನ ಹಕ್ಕು ನೀಡಿದೆ. ಅದನ್ನು ನಿರ್ಲಕ್ಷೃ ಮಾಡದೇ ಮತ ಚಲಾಯಿಸಬೇಕು. ಜನರ ಕಷ್ಟ- ಸುಖ ಆಲಿಸುವಂತಹ ನಾಯಕರ ಆಯ್ಕೆ ಆಗಬೇಕು ಎಂದರು.

    ಮತದಾನ ದಿನ ಸಮೀಪ ಬಂದಿದ್ದು, ಹಣ, ಆಸೆ, ಆಮಿಷಗಳಿಗೆ ಬಲಿಯಾಗಿ ಮತ ನೀಡಬೇಡಿ ಎಂದರು. ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಇಂಜಿನಿಯರ್ ಹಾಲೇಶ್, ನಿಂಗಪ್ಪ, ವಿಜಯ್, ರಾಮಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts