More

    ಚಂದ್ರನಿಗೆ ಇನ್ನಷ್ಟು ಸಮೀಪವಾದ ಇಸ್ರೋ; 2.6 ಲಕ್ಷ ಕಿ.ಮೀ. ಕ್ರಮಿಸಿದ ಲ್ಯಾಂಡರ್​

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಚಂದ್ರಯಾನ-3ನ ಲ್ಯಾಂಡರ್​ ಬರೋಬ್ಬರಿ 2.6 ಲಕ್ಷ ಕಿ.ಮೀ. ದೂರವನ್ನು ಕ್ರಮಿಸಿದ್ದು, ಪ್ರಯಾಣದ ಮೂರನೇ ಎರಡರಷ್ಟು ಭಾಗವನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಘೋಷಿಸಿದೆ.

    ಆಗಸ್ಟ್ 4ರ ಹೊತ್ತಿಗೆ, ಬಾಹ್ಯಾಕಾಶ ನೌಕೆ ಸುಮಾರು 2.6 ಲಕ್ಷ ಕಿಲೋಮೀಟರ್ ಗಳನ್ನು ಕ್ರಮಿಸಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಇಸ್ರೋ ಇಂದು (ಆ.5) ಬೆಳಗ್ಗೆ 7:00 ಗಂಟೆ ಹೊತ್ತಿಗೆ ಚಂದ್ರನ ಕಕ್ಷೆಗೆ ಬಾಹ್ಯಾಕಾಶ ನೌಕೆಯನ್ನು ಸೇರಿಸಲು ನಿಗದಿಪಡಿಸಿದ್ದಾರೆ. ಈ ನಿರ್ಣಾಯಕ ಹಂತವು ಯಶಸ್ವಿ ಆದಲ್ಲಿ ನಿರೀಕ್ಷಿತ ಸಮಯಕ್ಕೆ ಚಂದಿರನ ಅಂಗಳದಲ್ಲಿ ಲ್ಯಾಂಡ್ ಆಗಲಿದೆ.

    ಇದನ್ನೂ ಓದಿ: ಚಂದ್ರಯಾನಕ್ಕೆ ದೇವಯಾನದ ಶ್ರೀರಕ್ಷೆ ಅದೇ ವಿಜ್ಞಾನ…

    LOI ಪ್ರಕ್ರೀಯೆ ಒಂದು ನಿರ್ಣಾಯಕ ಮನ್ಯೂವರ್​ ಆಗಿದ್ದು ಚಂದ್ರನ ಕಕ್ಷೆಯನ್ನು ಸೇರಿಸಲು ಬಾಹ್ಯಾಕಾಶ ನೌಕೆಯ ಟ್ರಜೆಕ್ಟರಿ ಹೊಂದಿಸಲಾಗುತ್ತದೆ. ಇದು ಗಮನಾರ್ಹವಾದ ಇಂಧನದ ಸುಡುವಿಕೆಯನ್ನು ಒಳಗೊಂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಕೆಮಿಕಲ್​ ರಾಕೆಟ್ ಎಂಜಿನ್ ನಿರ್ವಹಿಸುತ್ತದೆ. ಇದು ಬಾಹ್ಯಾಕಾಶ ನೌಕೆಯ ವೇಗವನ್ನು ಹೆಚ್ಚಿಸುತ್ತದೆ.

    ಇದನ್ನೂ ಓದಿ: ಚಂದ್ರಯಾನ-3: ಭಾರತದ ಬಾಹ್ಯಾಕಾಶ ವಲಯಕ್ಕೆ ಆರ್ಥಿಕ ವೇಗವರ್ಧಕವಾಗಲಿದೆ ಚಂದ್ರ ಅನ್ವೇಷಣಾ ಯೋಜನೆ

    LOI ಮನ್ಯೂವರ್​ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಚಂದ್ರಯಾನ್-3ಅನ್ನು ಚಂದ್ರನ ಸುತ್ತಲಿನ ಕಕ್ಷೆಯಲ್ಲಿ ಸೇರಿಸಲಾಗುತ್ತದೆ. ಬಾಹ್ಯಾಕಾಶ ನೌಕೆ ನಂತರ ಚಂದ್ರನ ಮೇಲ್ಮೈಯನ್ನು ತಲುಪಲು ಸಂಕೀರ್ಣ ಮನ್ಯೂವರ್​ ಸರಣಿಯನ್ನು ಪ್ರಾರಂಭಿಸುತ್ತದೆ. ಇವುಗಳಲ್ಲಿ ಲ್ಯಾಂಡರ್​ನ ಬೇರ್ಪಡಿಕೆ, ಡಿಬೂಸ್ಟ್ ಮನ್ಯೂವರ್​ ನಡೆದು ಅಂತಿಮವಾಗಿ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್​ ಆಗುವ ಹಂತ ಸೇರಿವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts