More

    ಮುಂದಿನ ವರ್ಷ 3ನೇ ತ್ರೈಮಾಸಿಕದಲ್ಲಿ ಚಂದ್ರಯಾನ 3; ಸಂಸತ್ತಿನಲ್ಲಿ ಉತ್ತರಿಸಿದ ಸಚಿವ

    ನವದೆಹಲಿ: ದೇಶದಲ್ಲಿ ಕರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಚಂದ್ರಯಾನ -3 ಮಿಷನ್​ ವಿಳಂಬವಾಗುತ್ತಿದ್ದು, ಮುಂದಿನ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಉಡಾವಣೆ ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಇನ್ನು ಮುಂದೆ ಕರೊನಾದಿಂದಾಗಿ ಕೆಲಸದಲ್ಲಿ ವಿಳಂಬವಾಗದಿದ್ದರೆ, 2022ರ ಮೂರನೇ ತ್ರೈಮಾಸಿಕದಲ್ಲಿ ಚಂದ್ರಯಾನ 3 ಉಡಾವಣೆ ಆಗಬಹುದು ಎಂದು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಸಂಸತ್ತಿನಲ್ಲಿ ಲಿಖಿತ ಉತ್ತರ ನೀಡಿದರು. ಈ ಮೊದಲು ಚಂದ್ರಯಾನ್ 3 ಅನ್ನು 2020ರ ಕೊನೆಯಲ್ಲಿ ಅಥವಾ 2021ರ ಪ್ರಾರಂಭದಲ್ಲಿ ನಡೆಸಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಕರೊನಾ ಕಾರಣದಿಂದಾಗಿ ಸಾಕಷ್ಟು ವಿಳಂಬವಾಗಿರುವುದಾಗಿ ತಿಳಿಸಲಾಗಿದೆ.

    ಚಂದ್ರಯಾನ 3 ಮಿಷನ್ ಅನ್ನು ಲ್ಯಾಂಡರ್ ರೋವರ್ ಮಿಷನ್ ಎಂದು ಹೇಳಲಾಗಿದೆ. ಇದು ಚಂದ್ರಯಾನ 2ರ ಕಕ್ಷೆಗೆ ತೆರಳಿ ಅಲ್ಲಿಂದ ಭೂಮಿಯೊಂದಿಗೆ ಸಂವಹನ ನಡೆಸುತ್ತದೆ. 2019ರ ಸೆಪ್ಟೆಂಬರ್​ನಲ್ಲಿ ಚಂದ್ರಯಾನ 2 ಉಡಾವಣೆಯಾದ ಕೆಲವೇ ತಿಂಗಳುಗಳಲ್ಲಿ ಚಂದ್ರಯಾನ 3ರ ಬಗ್ಗೆ ಘೋಷಣೆ ಮಾಡಲಾಗಿತ್ತು. (ಏಜೆನ್ಸೀಸ್)

    ಶಿಕ್ಷಕರರೇ ಗಮನಿಸಿ: ಇನ್ನು ಮುಂದೆ ಶಿಕ್ಷಕರ ಸೇವಾ ಸೌಲಭ್ಯಕ್ಕೆ ಭೌತಿಕ ಅರ್ಜಿ ಸ್ವೀಕರಿಸುವುದಿಲ್ಲ

    ಬೆಳ್ಳಿ ಗೆದ್ದರೂ ಖುಷಿ ಪಡದೆ ಅಳುತ್ತಾ, ಕ್ಷಮೆ ಕೇಳಿದ ಕ್ರೀಡಾಪಟುಗಳು! 17 ವರ್ಷಗಳ ದಾಖಲೆ ಮುರಿದುಬಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts