More

    ಶಿಕ್ಷಕರರೇ ಗಮನಿಸಿ: ಇನ್ನು ಮುಂದೆ ಶಿಕ್ಷಕರ ಸೇವಾ ಸೌಲಭ್ಯಕ್ಕೆ ಭೌತಿಕ ಅರ್ಜಿ ಸ್ವೀಕರಿಸುವುದಿಲ್ಲ

    ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿ ಎಲ್ಲರೂ ತಮ್ಮ ಸೇವಾ ಸೌಲಭ್ಯವನ್ನು ಪಡೆಯಲು ಆ.2ರಿಂದ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕು. ಭೌತಿಕ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲವೆಂದು ಇಲಾಖೆ ಸ್ಪಷ್ಟವಾಗಿ ಸೂಚಿಸಿದೆ.


    ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2.5 ಲಕ್ಷ ಶಿಕ್ಷಕರು, ಸಿಬ್ಬಂದಿ, ಅಧಿಕಾರಿಗಳಿಗೆ ನೀಡುವ ಸೇವಾ ಸೌಲಭ್ಯಗಳ ಅರ್ಜಿ ಸ್ವೀಕರಿಸಲು ಆನ್‌ಲೈನ್‌ನಲ್ಲೇ ಅವಕಾಶ ನೀಡಲು ಶಿಕ್ಷಣ ಇಲಾಖೆಯು ‘ಶಿಕ್ಷಕ ಮಿತ್ರ’ ಮೊಬೈಲ್ ಆ್ಯಪ್ ರೂಪಿಸಿದೆ.


    ಈ ಮೂಲಕ ರಜಾ ಅರ್ಜಿ, ಪ್ರಥಮ ವೇತನ, ಪ್ರಮಾಣ ಪತ್ರ, ಪ್ರಭಾರ ಭತ್ಯೆ, ಅಂಗವಿಕಲ ಭತ್ಯೆ, ಮಿತ ಕುಟುಂಬ, ಯೋಜನಾ ಭತ್ಯೆ, ಜಿಪಿಎಫ್ ಮುಂಗಡ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಪಡೆಯಲು ಈ ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಇದು ಆ.2ರಿಂದ ಪರಿಪೂರ್ಣವಾಗಿ ಜಾರಿಯಾಗಲಿದ್ದು, ಆನ್‌ಲೈನ್ ಹೊರತಾಗಿ ಭೌತಿಕ ರೂಪದಲ್ಲಿ ಅರ್ಜಿಗಳನ್ನು ಸ್ವೀಕರಿಸುವುದಿಲ್ಲವೆಂದು ಇಲಾಖೆಯು ಸ್ಪಷ್ಟವಾಗಿ ತಿಳಿಸಿದೆ.


    ಆನ್‌ಲೈನ್ ಸೇವಾ ಸೌಲಭ್ಯದ ಬಗ್ಗೆ ಇಲಾಖೆ ಕೈಪಿಡಿ ಹೊರತಂದಿದೆ. ಅಲ್ಲದೆ, ವೀಡಿಯೋ ಮಾರ್ಗಸೂಚಿಯನ್ನು ರೂಪಿಸಿದೆ. ಇದೆಲ್ಲಾವನ್ನು ನೋಡಿಕೊಳ್ಳಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿ.ಅನ್ಬುಕುಮಾರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

    ಬೊಮ್ಮಾಯಿ ಸಂಪುಟದಲ್ಲಿ ನಾನು ಮಂತ್ರಿಯಾಗುವುದಿಲ್ಲ: ಜಗದೀಶ ಶೆಟ್ಟರ್

    ಬೆಳ್ಳಿ ಗೆದ್ದರೂ ಖುಷಿ ಪಡದೆ ಅಳುತ್ತಾ, ಕ್ಷಮೆ ಕೇಳಿದ ಕ್ರೀಡಾಪಟುಗಳು! 17 ವರ್ಷಗಳ ದಾಖಲೆ ಮುರಿದುಬಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts