More

    ಪಾಪು ಹುಟ್ಟುಹಬ್ಬ ಆಚರಿಸಿದ ಕೂಕು!

    ‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡಗೆ ಹುಟ್ಟುಹಬ್ಬದ ಸಂಭ್ರಮ. ಈ ಹುಟ್ಟುಹಬ್ಬವನ್ನು ಮನೆಯಲ್ಲೇ ಗ್ರಾಂಡ್ ಆಗಿ ಆಚರಿಸಿದ್ದಾರೆ ಪತಿ ಚಂದನ್ ಶೆಟ್ಟಿ.

    ಇದನ್ನೂ ಓದಿ: ಹೇಳಿದ ದಿನದಂದೇ ಕೆಜಿಎಫ್ ​2 ಬಿಡುಗಡೆ ಆಗುವುದಾ?

    ಚಂದನ್ ಮತ್ತು ನಿವೇದಿತಾ ಇಬ್ಬರೂ ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಗಳಾಗಿದ್ದು, ಅವರಿಬ್ಬರ ಮಧ್ಯೆ ಲವ್ ಆಗಿದ್ದು, ಕಳೆದ ವರ್ಷ ಮೈಸೂರಿನಲ್ಲಿ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು, ಆ ನಂತರ ಇಬ್ಬರೂ ಮದುವೆಯಾಗಿದ್ದು … ಎಲ್ಲವೂ ಗೊತ್ತೇ ಇದೆ. ಚಂದನ್ ಅವರನ್ನು ಮದುವೆಯಾದ ಮೇಲೆ, ನಿವೇದಿತಾ ಅವರ ಮೊದಲ ಹುಟ್ಟುಹಬ್ಬ ಇದು. ಈ ಮೊದಲ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿಯೇ ಆಚರಿಸಿದ್ದಾರೆ ಚಂದನ್.

    ಮನೆಯನ್ನು, ಬಣ್ಣದ ಬಲೂನುಗಳಿಂದ ಸಿಂಗರಿಸಿ, ಹುಟ್ಟುಹಬ್ಬಕ್ಕೆಂದೇ ವಿಶೇಷವಾದ ಕೇಕ್ ತಯಾರಿಸಿ … ಈ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ಚಂದನ್. ಕೇಕ್ ಕಟ್ ಆದ ನಂತರ, ‘ನನ್ನ ರಾಣಿಗೆ ಹ್ಯಾಪಿಯಸ್ಟ್ ಬರ್ಥ್‌ಡೇ, ಲವ್ ಯೂ ಸೋ ಮಚ್ ಪಾಪು’ ಎಂದು ಚಂದನ್ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರುವ ನಿವೇದಿತಾ, ‘ಕೂಕೂ … ಐ ಲವ್ ಯೂ ಮೋರ್ ಆ್ಯಂಡ್ ಮೋರ್ …’ ಎಂದು ಬರೆದಿದ್ದಾರೆ.

    ಇದನ್ನೂ ಓದಿ: ಬಾಡಿಗೆ ತಾಯ್ತನ ಆಯ್ಕೆ ಮಾಡಿದ್ದೇಕೆ? ಕಾಯಿಲೆಯ ಗುಟ್ಟು ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ…

    ಲಾಕ್‌ಡೌನ್ ಶುರುವಾಗುವ ಮುನ್ನ ಚಂದನ್ ಮತ್ತು ನಿವೇದಿತಾ ಗೌಡ ಹನಿಮೂನ್‌ಗೆಂದು ಫಾರಿನ್‌ಗೆ ಹೋಗಿದ್ದರು. ಅಷ್ಟರಲ್ಲಿ ಲಾಕ್ಡೌನ್ ಘೋಣೆಯಾದ್ದರಿಂದ, ಹನಿಮೂನ್ ಮೊಟಕುಗೊಳಿಸಿ ತಕ್ಷಣವೇ ಭಾರತಕ್ಕೆ ವಾಪಸ್ಸಾಗಿದ್ದರು.

    ಸಂಸ್ಕಾರಕ್ಕೆ 50 ವರ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts