More

    ಸಹೋದರತ್ವ ಭಾವ ಮೂಡಿಸುವ ಬನ್ನಿ ವಿನಿಮಯ

    ಚಿತ್ತಾಪುರ: ಮನಸ್ಸಿನಲ್ಲಿರುವ ವೈಮನಸ್ಸು ದೂರ ಮಾಡಿ ಪ್ರೀತಿ ವಿಶ್ವಾಸದಿಂದ ಒಬ್ಬರಿಗೊಬ್ಬರು ಜೀವನ ನಡೆಸಲು ಬನ್ನಿ ವಿನಿಮಯ ಮಾಡಿಕೊಂಡು ಬಂಗಾರದಂತೆ ಬಾಳೋಣ ಎಂಬ ಸಂದೇಶ ದಸರಾ ಹಬ್ಬದ ಮಹತ್ವವಾಗಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.

    ದಸರಾ ಹಬ್ಬ ನಿಮಿತ್ತ ಮಂಗಳವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಿಂದ ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಮುಖರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಸವೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ನಂತರ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

    ಒಬ್ಬರಿಂದ ಇನ್ನೊಬ್ಬರಿಗೆ ಬನ್ನಿ ಕೊಟ್ಟು ಯಾವತ್ತು ಪ್ರೀತಿ, ಪ್ರೇಮದಿಂದ ಬಾಳೋಣ ಎಂದು ಬನ್ನಿ ವಿನಿಮಯ ಮಾಡಿಕೊಂಡು ವಿಜಯ ದಶಮಿ (ದಸರಾ) ಹಬ್ಬ ಆಚರಿಸಿದರು. ಮಂಜುನಾಥ ಶಾಸ್ತ್ರಿ, ಕರಬಸಯ್ಯ ಶಾಸ್ತ್ರಿ ಮಂತ್ರ ಪಠಣ ಮಾಡಿದರು.

    ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.

    ಸಮಾಜದ ಪ್ರಮುಖರಾದ ಚಂದ್ರಶೇಖರ ಅವಂಟಿ, ನಾಗರಾಜ ರೇಷ್ಮಿ, ಡಾ.ಚಂದ್ರಶೇಖರ ಕಾಂತಾ, ನಾಗರಾಜ ರೇಷ್ಮಿ, ಆನಂದ ಪಾಟೀಲ್ ನರಿಬೋಳ, ಶರಣಬಸಪ್ಪ ಯದಲಾಪುರ, ರವೀಂದ್ರ ಸಜ್ಜನಶೆಟ್ಟಿ, ಮಂಜುನಾಥ ಪಾಟೀಲ್, ಶ್ರೀಕಾಂತ ಸುಲೇಗಾಂವ, ನಾಗರೆಡ್ಡಿ ಗೋಪಶೇನ್, ಬಸವರಾಜ ಹೂಗಾರ, ಬಸವರಾಜ ಸಂಕನೂರ, ಬಸವರಾಜ ಕಾಳಗಿ, ನಾಗರಾಜ ಹೂಗಾರ, ಅಂಬರೀಶ ಸುಲೇಗಾಂವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts