More

    ಅಧಿಕಾರ ದುರುಪಯೋಗ ಪಡಿಸಿದ್ರಾ ಕುವೆಂಪು ವಿವಿ ಕುಲಪತಿ? ಮಗಳ ಹುಟ್ಟುಹಬ್ಬ ಆಚರಣೆಗೆ ವಿವಿಯಿಂದಲೇ ಸುತ್ತೋಲೆ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ಇತ್ತೀಚಿನ ದಿನಗಳಲ್ಲಿ ಒಂದಲ್ಲ, ಒಂದು ವಿವಾದದ ಮೂಲಕ ಸುದ್ದಿಯಲ್ಲಿದೆ. ಈ ಬಾರಿ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ ಅವರು ಹೊರಡಿಸಿರುವ ಸುತ್ತೋಲೆಯೊಂದು ವಿವಾದಕ್ಕೆ ಕಾರಣವಾಗಿದೆ.

    ಭಾನುವಾರ (ಮೇ 28) ಮಧ್ಯಾಹ್ನ ವೀರಭದ್ರಪ್ಪ ಅವರು ಜನ್ಮದಿನದ ನಿಮಿತ್ತ ಸಂತೋಷಕೂಟ ಆಯೋಜನೆ ಮಾಡಿದ್ದರು. ಅದಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಕುಲಪತಿಗಳು ಪುತ್ರಿ ಬಿ.ವಿ.ಆಕಾಂಕ್ಷಾ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿರುವ ಸಂತೋಷ ಕೂಟಕ್ಕೆ ಹಾಜರಾಗುವಂತೆ ವಿವಿಯಿಂದಲೇ ಸುತ್ತೋಲೆ ಹೊರಡಿಸಿದ್ದಾರೆ.

    ಇದನ್ನೂ ಓದಿ: ಸಂಸತ್ ಭವನ ಉದ್ಘಾಟನೆಯನ್ನು ‘ಪಟ್ಟಾಭಿಷೇಕ’ ಎಂದು ಪರಿಗಣಿಸಿದ ಪ್ರಧಾನಿ: ಕಿಡಿಕಾರಿದ ರಾಹುಲ್ ಗಾಂಧಿ

    ಮೇ 28ರ ಮಧ್ಯಾಹ್ನ 12.30ಕ್ಕೆ ಕುಲಪತಿಗಳ ಗೃಹದಲ್ಲಿ ಸಂತೋಷಕೂಟ ಆಯೋಜಿಸಿದ್ದು ವಿವಿಯ ಅಧ್ಯಾಪಕರು, ಅಧ್ಯಾಪಕೇತರ ನೌಕರರು, ಅತಿಥಿ ಉಪನ್ಯಾಸಕರು, ಏಜೆನ್ಸಿ ನೌಕರರು ತಪ್ಪದೇ ಹಾಜರಾಗುವಂತೆ ವಿನಂತಿಸಿಕೊಂಡಿದ್ದಾರೆ. ಇದನ್ನೇ ವೈಯಕ್ತಿಕ ಅಹ್ವಾನವೆಂದು ಭಾವಿಸಿ ಭಾಗವಹಿಸಲು ಕೋರಿದ್ದಾರೆ. ಈ ಸುತ್ತೋಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಗಳ ಜನ್ಮದಿನದ ಸಂಭ್ರಮಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ನೂತನ ಸಂಸತ್​ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ನಾಣ್ಯ, ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ರಧಾನಿ

    ಇದುವರೆಗೂ ಹಲವಾರು ಕುಲಪತಿಗಳನ್ನು ಕುವೆಂಪು ವಿವಿ ಕಂಡಿದೆ. ಹಿಂದಿನ ಯಾವೊಬ್ಬ ಕುಲಪತಿಗಳೂ ಇಂತಹ ಸುತ್ತೋಲೆ ಹೊರಡಿಸಿರಲಿಲ್ಲ. ಇದೀಗ ಕುಲಪತಿ ಬಿ.ವಿ.ವೀರಭದ್ರಪ್ಪ ಅವರು ಸುತ್ತೋಲೆ ಹೊರಡಿಸುವ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕುಲಪತಿಗಳ ಸುತ್ತೋಲೆ ಮೇರೆಗೆ ಭಾನುವಾರ ರಜೆ ಇದ್ದರೂ ಹಲವರು ನೌಕರರು, ಅಧ್ಯಾಪಕರು ಸಂತೋಷಕೂಟದಲ್ಲಿ ಭಾಗವಹಿಸಿದ್ದರು ಎಂಬುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts