More

    ಏ.5 ರಿಂದ ವಚನ ಸಂವಿಧಾನ ಉಳಿಸೋಣ ಜಾಥಾ

    ಚಾಮರಾಜನಗರ: ವಚನ ಸಂವಿಧಾನವನ್ನು ಉಳಿಸೋಣ, ಬಹುತ್ವ ಸಮಾಜವನ್ನು ಕಟ್ಟೋಣ ಎಂಬ ಧ್ಯೇಯವಾಕ್ಯದೊಂದಿಗೆ ಚಾಮರಾಜನಗರದಿಂದ ಬೀದರ್ ವರೆಗೆ ಏ.5 ರಿಂದ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಮಾನ ಮನಸ್ಕ ವೇದಿಕೆಯ ರಾಜ್ಯ ಸಂಚಾಲಕ ಸಿ.ಕೆ.ಜಗನ್ ತಿಳಿಸಿದರು.

    ಸಾಹಿತಿ ಗೋರೂರು ಚೆನ್ನಬಸಪ್ಪ ಹಾಗೂ ಇನ್ನಿತರರ ನೇತೃತ್ವದಲ್ಲಿ ವಚನ ಸಂವಿಧಾನವನ್ನು ಉಳಿಸಬೇಕು, ಬಹುತ್ವ ಸಮಾಜವನ್ನು ಕಟ್ಟಬೇಕು ಎನ್ನುವ ಉದ್ದೇಶದಿಂದ ಮಾ.13 ರಂದು ಸಮಾನ ಮನಸ್ಕ ವೇದಿಕೆಯನ್ನು ಉದ್ಘಾಟನೆ ಮಾಡಲಾಯಿತು. ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ವಚನ ಸಂವಿಧಾನ ಉಳಿಸುವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಚಾಮರಾಜನಗರಕ್ಕೆ ಜಾಥಾ ಆಗಮಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲಿದೆ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಭಾರತದ ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವ, ಗಾಂಧೀಜಿಯವರ ಸಮಾನತೆಯ ಚಿಂತನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾನ ಮನಸ್ಕರ ವೇದಿಕೆ ಪ್ರಯತ್ನಮಾಡುತ್ತದೆ. ತಗಡೂರಿಂದ ಪ್ರಾರಂಭ ಮಾಡಿ ಬೀದರ್‌ನ ಬಸವಕಲ್ಯಾಣದ ವರೆಗೆ ಜಾಥಾ ಆಯೋಜನೆ ಮಾಡಲಾಗಿದ್ದು, ಮೇ.5 ರಂದು ಮುಕ್ತಾಯವಾಗಲಿದೆ. ಪ್ರಸ್ತುತ ನಮ್ಮ ಸಂವಿಧಾನ ಅಪಾಯದ ಸ್ಥಿತಿಯಕಲ್ಲಿದ್ದು, ಅದನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಈ ಮೂಲಕ ಮತದಾರರು ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದು ಕರೆನೀಡಿದರು.

    ಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಎನ್.ಶಿವಪ್ರಸಾದ್, ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ವೀರಭದ್ರ ನಾಯಕ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts