More

    ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಿ

    ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ಏ.26 ರಂದು ನಡೆಯಲಿದ್ದು, ಅರ್ಹರೆಲ್ಲರು ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸುವಂತೆ ಹನೂರು ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದ ಶಾಲಾ ಸಹಶಿಕ್ಷಕ ಆನಂದ ಕರೆ ನೀಡಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ, ಹನೂರು ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯಿತಿ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ರಾಮಾಪುರ ಹಾಗೂ ಸೂಳೇರಿಪಾಳ್ಯ ಹಾಗೂ ಬಸಪ್ಪನದೊಡ್ಡಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮತದಾನ ಪವಿತ್ರವಾದ ಕಾರ್ಯವಗಿದೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಒಬ್ಬಸೂಕ್ತವಾದ ಅಭ್ಯರ್ಥಿ ಆಯ್ಕೆ ಮಾಡಲು ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ದೇಶವನ್ನ ನಡೆಸಲು ನಿಮ್ಮ ಒಂದು ಓಟು ಬಹಳ ಅಮೂಲ್ಯವಾಗಿದೆ. ಹಣದ ಆಸೆಗೆ ಮತವನ್ನು ಮಾರಿಕೊಳ್ಳಬೇಡಿ. ನಿಮಗೆಮೂಲ ಸೌಕರ್ಯ ಒದಗಿಸಲು ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ಶಿಕ್ಷಕರಾದ ಆನಂದ ಅವರು ತಿಳಿಸಿದರು.

    ಬಸಪ್ಪನ ದೊಡ್ಡಿ ಶಾಲೆಯ ಮಕ್ಕಳು ಕಡ್ಡಾಯವಾಗಿ ಮತದಾನ ಮಾಡುವಂತೆ ಅವರ ತಂದೆ ತಾಯಿಗಳಿಗೆ ಮತದಾನದ ಮಮತೆಯ ಕರೆಯೋಲೆ ಪತ್ರ ಬರೆದಿರುವುದು ಗಮನ ಸೆಳೆಯಿತು. ಇದೇ ಸಂಧರ್ಭದಲ್ಲಿ ಮತದಾನ ಜಾಗೃತಿಯ ವಿಡಿಯೋ ಮತ್ತು ಜಿಗಲ್ಸ್‌ಗಳಮೂಲಕ ಸಾರ್ವಜನಿಕ ಮತ ಚಲಾವಣೆಯ ಮಹತ್ವದ ತಿಳುವಳಿಕೆ ನೀಡಲಾಯಿತು. ತಾಲೂಕು ಪಂಚಾಯತಿಯ ಮಹೇಶ್, ಗ್ರಾ.ಪಂ ಸದಸ್ಯೆ ಅಂಬಿಕಾ, ರಾಜಶೇಖರ, ಶಾಲಾ ಶಿಕ್ಷಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts