More

    ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಿಕ್ತು ಮೇಜರ್ ಟ್ವಿಸ್ಟ್: ಪ್ರತಾಪ್​ ಸಿಂಹ ಸ್ಫೋಟಕ ಹೇಳಿಕೆ

    ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್​ ದುರಂತ ಪ್ರಕರಣಕ್ಕೆ ಮೇಜರ್​ ಟ್ವಿಸ್ಟ್​ ಸಿಕ್ಕಿದ್ದು, ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಪೂರೈಕೆಗೆ ರೋಹಿಣಿ ಸಿಂಧೂರಿಯ ಮೌಖಿಕ ಸೂಚನೆ ಅಡ್ಡಿಯಾಗಿತ್ತು ಎಂದು ಹೇಳಲಾಗಿದೆ.

    ಅಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರವಾಗಿ ಹೇಳಿಕೆ ನೀಡಿದ್ದ ಪ್ರತಾಪ್​ ಸಿಂಹ ಫೇಸ್​ಬುಕ್ ಲೈವ್​ನಲ್ಲಿ ಆಕ್ಸಿಜನ್ ದುರಂತ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ಚಾಮರಾಜನಗರಕ್ಕೆ ಆಕ್ಸಿಜನ್ ಕೊಡದಿರಲು ಮೈಸೂರು ಜಿಲ್ಲಾಧಿಕಾರಿ‌ ರೋಹಿಣಿ ಸಿಂಧೂರಿ (ಸದ್ಯ ವರ್ಗಾವಣೆ ಆಗಿದ್ದಾರೆ) ಅವರು ಮೌಖಿಕ ಸೂಚನೆ ನೀಡಿದ್ದರು. ಆ ಮೌಖಿಕ ಸೂಚನೆ ಏನಿತ್ತು? ಏತಕ್ಕಾಗಿ ಚಾಮರಾಜನಗರಕ್ಕೆ ಆಕ್ಸಿಜನ್ ಸಿಲಂಡಿರ್ ಹೋಗಲಿಲ್ಲಾ ಎಂಬುದು ಗೊತ್ತಿದೆ ಎಂದು ಪ್ರತಾಪ್​ ಸಿಂಹ ತಿಳಿಸಿದ್ದಾರೆ.

    ಸದ್ಯ ನ್ಯಾಯಂಗ ತನಿಖೆ ಆರಂಭವಾಗಿದೆ. ತನಿಖೆ ನಂತರ ಸತ್ಯಾಸತ್ಯತೆ ಎಲ್ಲರಿಗೂ‌ ಗೊತ್ತಾಗಲಿದೆ. ಟೆಕ್ನಿಕಲ್ ಆಗಿ ಸಾಕ್ಷಿ ಸಿಗದಿರಬಹುದು. ಆದ್ರೆ ಅದರೊಳಗೆ ಏನ್ ನಡೆದಿದೆ ಎಂದು ಮೈಸೂರಿಗನಾಗಿ ನಮಗೆ ಗೊತ್ತಿದೆ. ಪದಕಿ ಏಜೆನ್ಸಿಯ ಅನಿಲ್ ಪದಕಿ ಅವರನ್ನು ಕೇಳಿದ್ರೆ ಚಾಮರಾಜನಗರಕ್ಕೆ ಆಕ್ಸಿಜನ್ ಸಿಲಿಂಡರ್ ಏಕೆ ಕೊಡಲಿಲ್ಲಾ ಎಂಬುದು ಗೊತ್ತಾಗಲಿದೆ. ಇದೆಲ್ಲಾ ಸಾಮಾಜಿಕ ಜಾಲಾತಾಣ ಬಳಸುವವರಿಗೆ ಗೊತ್ತಾಗುವುದಿಲ್ಲ. ಎಲ್ಲೂ ಕುಳಿತುಕೊಂಡು ಸುಮ್ಮನೆ ಯಾರಿಗೋ ಜೈಕಾರ ಹಾಕುತ್ತೀರಾ, ಧಿಕ್ಕಾರ ಹಾಕ್ತೀರಾ, ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವುದು ನಮ್ಮ ಸರ್ಕಾರ. ಡೀನ್, ಡಿಹೆಚ್ಒ ಎಲ್ಲರೂ ನಮ್ಮ‌ ಅಧೀನದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಸಚಿವ ಸುರೇಶ್ ಕುಮಾರ್ ಸಹ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ದೂರಿದ್ರು. ಮೈಸೂರನ್ನು ಕಟಕಟೆಗೆ ತಂದು ನಿಲ್ಲಿಸಬಾರದು, ಮೈಸೂರು, ಚಾಮರಾಜನಗರ, ಮಂಡ್ಯ ಮಧ್ಯ ಜಗಳವಾಗುತ್ತೆ ಎಂದು ನಾನು ಅಂದು ಡಿಫೆಂಡ್ ಮಾಡಿಕೊಂಡೆ. ನನಗೆ ಆಕ್ಸಿಜನ ದುರಂತದ ಸತ್ಯಾಸತ್ಯತೆ ಗೊತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸೈಕ್ಲಿಂಗ್ ಆರೋಗ್ಯದ ಕಿಂಗ್…: ಸೆಲೆಬ್ರಿಟಿ ಕಾರ್ನರ್​ನಲ್ಲಿ ಭಾಸ್ಕರ್ ರಾವ್​

    ಈ ರಾಶಿಯವರು ಭಕ್ತಿಯಿಂದ ಶಿವಪೂಜೆ ಮಾಡಿದರೆ ಬೇಡಿದ್ದನ್ನು ಕೊಡುತ್ತಾನೆ: ವಾರ ಭವಿಷ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts