More

    ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

    ಚಳ್ಳಕೆರೆ: ವಿಶೇಷ ಪ್ಯಾಕೇಜ್ ಸೌಲಭ್ಯ ಚಮ್ಮಾರರಿಗೂ ಸಿಗುವ ವ್ಯವಸ್ಥೆ ಮಾಡಬೇಕೆಂದು ಸಾಮಾಜಿಕ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.

    ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಶೋಷಿತ ಸಮುದಾಯ ಸಂಕಷ್ಟದಲ್ಲಿದೆ. ಗ್ರಾಮೀಣ ಭಾಗದಲ್ಲಿ ಈಗಲೂ ಚರ್ಮಗಾರಿಕೆ ವೃತ್ತಿಯಿಂದಲೇ ಜೀವನ ನಡೆಸುವ ಬಹಳಷ್ಟು ಕುಟುಂಬಗಳಿವೆ.

    ನಗರದ ಬೀದಿಗಳ ಬದಿಯಲ್ಲಿ ಚಮ್ಮಾರಿಕೆ ವೃತ್ತಿ ನಿರ್ವಹಿಸುವ ಅದೆಷ್ಟೋ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿವೆ. ಇವರಿಗೆ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯಿಂದ ನೆರವು ನೀಡಬೇಕು ಎಂದು ಒತ್ತಾಯಿಸಿದರು.

    ಸಮಿತಿಯ ಪಿ.ದ್ಯಾಮಯ್ಯ, ಉಮೇಶ್ ಚಂದ್ರ ಬ್ಯಾನರ್ಜಿ, ಕೆ.ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts