More

    ಫುಲೆ ಬದುಕು ಸರ್ವರಿಗೂ ಆದರ್ಶ

    ಚಳ್ಳಕೆರೆ: ಸಾಮಾಜಿಕ ಅಸಮಾನತೆ, ಕೌಟುಂಬಿಕ ಸಮಸ್ಯೆ ಇರುವ ಕಾಲದಲ್ಲೇ ಶಿಕ್ಷಣ ಕಲಿತು ಮೊದಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಸಾವಿತ್ರಿಬಾಯಿ ಫುಲೆ ಬದುಕು ಸರ್ವರಿಗೂ ಪ್ರೇರಣೆ ಎಂದು ಪ್ರಾಚಾರ್ಯ ಎಸ್.ಲಕ್ಷ್ಮಣ್ ಹೇಳಿದರು.

    ತಾಲೂಕಿನ ದೊಡ್ಡೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವದಲ್ಲಿ ಮಾತನಾಡಿ, ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ, ಕೇಶ ಮುಂಡನೆಯಂತಹ ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದರು.

    ಶೋಷಿತ ಮತ್ತು ವಂಚಿತ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣ ಅಗತ್ಯ ಎಂಬುದನ್ನು ಅರಿತ ಫುಲೆ, ಕಷ್ಟಗಳ ನಡುವೆ ಶಿಕ್ಷಣ ಪಡೆದು ಪತಿ ಜ್ಯೋತಿಬಾ ಫುಲೆ ಸಹಕಾರದಿಂದ 18 ಪಾಠ ಶಾಲೆ ಆರಂಭಿಸಿ ಶಿಕ್ಷಣ ವಲಯದಲ್ಲಿ ಕ್ರಾಂತಿಗೆ ಕಾರಣರಾದರು ಎಂದು ಸ್ಮರಿಸಿದರು.

    ಉಪನ್ಯಾಸಕರಾದ ಹೀನಾಕೌಶದ್, ಓ.ನಾಗರಾಜ, ಆರ್.ಕರಿಯಪ್ಪ, ನಾಗರಾಜ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts