More

    ಚಳ್ಳಕೆರೆ ನಗರ ಸಭೆಯಲ್ಲಿ ಗದ್ದಲ ಎಬ್ಬಿಸಿದ ಜಿ+2 ವಸತಿ

    ಚಳ್ಳಕೆರೆ: ನಗರಸಭೆಯಲ್ಲಿ ಶುಕ್ರವಾರ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತುರ್ತು ಸಭೆಯಲ್ಲಿ ಫಲಾನುಭವಿಗಳಿಗೆ ಹಂಚಿಕೆಯಾದ ಜಿ+2 ವಸತಿ ಸೌಲಭ್ಯ ಸಂಬಂಧ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಲ್ಲಿ ವಾಗ್ವಾದ ನಡೆಯಿತು.

    ಜಿ+2 ಗುಂಪು ಮನೆಗಳಿಗೆ ಫಲಾನುಭವಿಗಳಿಂದ ಪಾವತಿಸಬೇಕಾದ ಮೊತ್ತವನ್ನು ನಗರಸಭೆ ತುಂಬುವ ಬಗ್ಗೆ ವಿಷಯ ಮಂಡನೆ ಆಗುತ್ತಿದ್ದಂತೆ ಕೆಂಡಮಂಡಲವಾದ ವಿರೋಧ ಪಕ್ಷದ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್ ಮತ್ತು ನಾಮನಿರ್ದೇಶಿತರಾದ ಎಂ.ಇಂದ್ರೇಶ್, ಕಾಟಪ್ಪನಹಟ್ಟಿ ವೀರೇಶ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಪಾವಗಡ ರಸ್ತೆಯಲ್ಲಿನ ಕೆಎಚ್‌ಬಿ ಕಾಲನಿ ಜಮೀನು ವಿವಾದ ನ್ಯಾಯಾಲಯದಲ್ಲಿದೆ. ಇದನ್ನು ಧಿಕ್ಕರಿಸಿ ಜಿ+2 ಮನೆಗಳ ನಿರ್ಮಣ ಆರಂಭಿಸಲಾಗಿದೆ. 1008 ಮನೆಗಳ ಫಲಾನುಭವಿಗಳಲ್ಲಿ 100 ಜನ ಮಾತ್ರ ವಂತಿಕೆ ಕಟ್ಟಿದ್ದು, ಸಾರ್ವಜನಿಕವಾಗಿ ಜಿ+2 ಯೋಜನೆ ಪ್ರಯೋಜನವಾಗುತ್ತಿಲ್ಲ ಎಂದರು.

    ಕಸ ಸಂಗ್ರಹಕ್ಕೆ ವಾಹನ ಮತ್ತು ಕೆಲ ವಾರ್ಡ್‌ಗಳಲ್ಲಿ ರಸ್ತೆ, ನೀರಿನ ಸಮಸ್ಯೆ ಗಂಭೀರವಾಗಿದೆ. ಆದ್ದರಿಂದ ಜಿ+2 ಯೋಜನೆಗೆ ಹಣ ನಿಯೋಜಿಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಎಸ್‌ಎಫ್‌ಸಿ ಮತ್ತು ನಗರಸಭೆ ನಿಧಿಯಡಿ ಕುಡಿಯುವ ನೀರು ಮತ್ತು ನಗರಸಭೆ ವಸತಿ ಗೃಹ ದುರಸ್ತಿ ಕಾಮಗಾರಿಗಳಿಗೆ ಒಪ್ಪಿಗೆ ಸೂಚಿಸಲಾಯಿತು. ಪ್ರಭಾರ ಪೌರಾಯುಕ್ತ ವಾಸಿಮ್, ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷೆ ಆರ್.ಮಂಜುಳ, ಸದಸ್ಯರಾದ ಎಸ್.ಜಯಣ್ಣ, ಹೊಯ್ಸಳ ಗೋವಿಂದ, ಸುಜಾತಾ, ಸುಮಾ, ಕವಿತಾ, ವೆಂಕಟೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts