More

    ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ 100ರ ಗಡಿ ದಾಟಿದ್ರೂ ಚಿಂತಿಸಬೇಡಿ, ಈ ಟಿಪ್ಸ್​ ಫಾಲೋ ಮಾಡಿ!

    ಮೈಸೂರು: ಅತಿಯಾದ ಬೆಳೆ ಮತ್ತು ಬೆಲೆ ಕುಸಿತ ಹೆಚ್ಚಾಗಿ ಟೊಮ್ಯಾಟೊ ಮೇಲೆಯೇ ಪರಿಣಾಮ ಬೀರುತ್ತವೆ. ಬೆಳೆ ಬಂದರೆ ಬೆಲೆಯಿಲ್ಲ. ಬೆಲೆ ಇದ್ದರೆ ಬೆಳೆ ಇಲ್ಲ. ಇದು ರೈತರ ಸಂಕಷ್ಟವೂ ಹೌದು. ಹೀಗಾಗಿ ಈ ಸಮಸ್ಯೆಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್​ಟಿಆರ್​ಐ) ಸರಳ ಪರಿಹಾರವೊಂದನ್ನು ಪರಿಚಯಿಸಿದ್ದು, ಟೊಮ್ಯಾಟೊವನ್ನು ಕೈಗೆಟುಕುವ ದರದಲ್ಲಿ ಸಂರಕ್ಷಿಸಿ ಇಡಬಹುದಾಗಿದೆ. ಗ್ರಾಹಕರು ಕೂಡ ಇದನ್ನು ಅನುಸರಿಸಬಹುದಾಗಿದೆ.

    ಪ್ರತಿಶತ 4 ರಷ್ಟು ಉಪ್ಪು ತುಂಬಿದ ಪಾಲಿಥಿನ್ ಕವರ್​ನಲ್ಲಿ ಟೊಮ್ಯಾಟೊವನ್ನು ಸಂರಕ್ಷಿಸಿ ಇಡುವ ವಿಧಾನವನ್ನು ಸಿಎಫ್‌ಟಿಆರ್‌ಐ ಸೂಚಿಸಿದೆ. ಸಣ್ಣ ಪ್ರಮಾಣದ ರೈತರು ಕವರ್​ಗಳಲ್ಲಿ 1 ಕೆ.ಜಿ. ಟೊಮ್ಯಾಟೊವನ್ನು ತುಂಬಿ ಕೊಠಡಿಯ ತಾಪಮಾನದಲ್ಲಿ ಸುಮಾರು 3 ರಿಂದ 4 ತಿಂಗಳವರೆಗೆ ಇಡಬಹುದು. ಉಪ್ಪಿನಿರಿನಲ್ಲಿ ಸೂಕ್ಷ್ಮಾಣು ಜೀವಿಗಳು ಬೆಳೆಯದೇ ಇರುವುದರಿಂದ ಟೊಮ್ಯಾಟೊಗಳು ಹಾಳಾಗುವುದಿಲ್ಲ ಎಂದು ಸಿಎಫ್​ಟಿಆರ್​ಐ ಹೇಳಿದೆ.

    ಇದನ್ನೂ ಓದಿ: ಜಾಮೀನು ಕೇಳೋದು ಬಿಟ್ಟು, ತನ್ನ ವಿರುದ್ಧದ ಕೇಸ್​ ಅನ್ನೇ ರದ್ದು ಮಾಡಿ ಎಂದ ಆದಿತ್ಯ ಆಳ್ವ

    ಈ ರೀತಿ ಸಂರಕ್ಷಿಸಿ ಇಡಲಾದ ಟೊಮ್ಯಾಟೊವನ್ನು ಬೆಲೆ ಹೆಚ್ಚಾದಾಗ ಮಾರಾಟ ಮಾಡಬಹುದು. ಒಂದು ಕೆ.ಜಿ. ಟೊಮ್ಯಾಟೊವನ್ನು ಸಂರಕ್ಷಿಸಲು 3 ರೂ. ಮಾತ್ರ ಖರ್ಚಾಗಲಿದೆ. ಟೊಮ್ಯಾಟೊವನ್ನು ನಿಖರವಾದ ಪಾಲಿಥಿನಿ ಕವರ್​ ಮತ್ತು ಸಿಎಫ್​ಟಿಆರ್​ಐ ಶಿಫಾರಸು ಮಾಡಿದ ತಾಪಮಾನದಲ್ಲಿ ಇಟ್ಟರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಸಿಎಫ್​ಟಿಆರ್​ಐ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಯಾವುದೇ ಶೈತ್ಯೀಕರಣದ ಅವಶ್ಯಕತೆಯು ಇಲ್ಲ ಎಂದಿದ್ದಾರೆ.

    ಇನ್ನು ಟೊಮ್ಯಾಟೊ ಬೆಲೆ ಏರಿದಾಗ ಪರದಾಡುವ ಗ್ರಾಹಕರು ಇದೇ ವಿಧಾನವನ್ನು ಅನುಸರಿಸುವ ಮೂಲಕ ತಮ್ಮ ಜೇಬಿಗೆ ಹೊರೆಯಾಗದಂತೆ ನಿರ್ವಹಣೆ ಮಾಡಬಹುದಾಗಿದೆ.

    ಇನ್ನು ಸಿಎಫ್​ಟಿಆರ್​ಐ ಇನ್ನಿತರ ತರಕಾರಿಗಳ ಮೇಲೂ ತನ್ನ ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದು, ಇದನ್ನು ಉಚಿತವಾಗಿ ರೈತರೊಂದಿಗೆ ಹಂಚಿಕೊಳ್ಳಲು ತಯಾರಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ವಾಣಿಜ್ಯ ಆಧಾರದ ಮೇಲೆ ಟೊಮ್ಯಾಟೊ ಖರೀದಿಸಲು ಕರ್ನಾಟಕ ಸರ್ಕಾರ ಸಿಎಫ್‌ಟಿಆರ್‌ಐ ಜತೆ ಒಪ್ಪಂದ ಮಾಡಿಕೊಂಡಿದೆ. (ಏಜೆನ್ಸೀಸ್​)

    ಅರಬ್ ರಾಷ್ಟ್ರದಲ್ಲಿ ಐಪಿಎಲ್ ಬಿಸಿ ಏರಿಸಿದ ‘ಶಾರ್ಟ್ ರನ್’ ವಿವಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts