More

    ದೊಡ್ಡ ಅಪ್​​​ಡೇಟ್ ಕೊಟ್ಟ ಗೂಗಲ್‌ ಸಿಇಒ; ಕೊನೆಗೂ ಮೌನ ಮುರಿದ ಸುಂದರ್‌ ಪಿಚೈ!

    ನವದೆಹಲಿ: ಗೂಗಲ್‌ನ ಜೆಮಿನಿಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ತಪ್ಪು ತಪ್ಪಾದ ಫೋಟೋಗಳನ್ನು ಕ್ರಿಯೇಟ್ ಮಾಡುತ್ತಿದ್ದರಿಂದ ಕಂಪನಿಯ ಎಐ ಚಾಟ್‌ಬಾಟ್‌ನ ಇಮೇಜ್ ಜನರೇಶನ್ ಅನ್ನು ನಿಲ್ಲಿಸಿದೆ. ಏತನ್ಮಧ್ಯೆ, ಗೂಗಲ್ ಸಿಇಒ ಸುಂದರ್ ಪಿಚೈ ರಾಜೀನಾಮೆ ಅಥವಾ ವಜಾಗೊಳಿಸುವ ಬಗ್ಗೆಯೂ ಸುದ್ದಿ ಕೇಳಿಬರುತ್ತಿತ್ತು. ಇದೆಲ್ಲದರ ನಡುವೆ ಸುಂದರ್ ಪಿಚೈ ಕೊನೆಗೂ ಮೌನ ಮುರಿದಿದ್ದಾರೆ.

    ಪಿಚೈ, “ಕಂಪೆನಿಯು ಈ ಸಮಸ್ಯೆಯನ್ನು ಅರ್ಥಮಾಡಿಕೊಂಡಿದೆ. ಏನಾಯಿತು ಅದನ್ನು ಸರಿಪಡಿಸಲಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ನಮ್ಮ ತಂಡವು ನಿರಂತರವಾಗಿ ಕೆಲಸ ಮಾಡುತ್ತಿದೆ” ಎಂದು ಸೆಮಾಫೋರ್ ಗೆ ನೀಡಿರುವ ಮೆಮೊದಲ್ಲಿ ಮಾಹಿತಿ ನೀಡಿದ್ದಾರೆ.

    ಪಿಚೈ, “ನಾನು ಜೆಮಿನಿ ಅಪ್ಲಿಕೇಶನ್‌ನ ತಪ್ಪಾದ ಬರಹ ಮತ್ತು ಇಮೇಜ್ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ಅದರ ಕೆಲವು ಪ್ರತಿಕ್ರಿಯೆಗಳು ನಮ್ಮ ಬಳಕೆದಾರರನ್ನು ನಿರಾಶೆಗೊಳಿಸಿವೆ ಎಂದು ನನಗೆ ತಿಳಿದಿದೆ. ಇದು ಸಾಕಷ್ಟು ಏಕಪಕ್ಷೀಯವಾಗಿದ್ದು, ಕಂಪನಿಯು ಇದನ್ನು ಸಂಪೂರ್ಣವಾಗಿ ತಪ್ಪು ಎಂದು ಪರಿಗಣಿಸುತ್ತದೆ. ಯಾವುದೇ AI ಪರಿಪೂರ್ಣವಲ್ಲ, ವಿಶೇಷವಾಗಿ ಇದು ಅಭಿವೃದ್ಧಿಯ ಹಂತದಲ್ಲಿದ್ದಾಗ” ಎಂದು ಪಿಚೈ ಜೆಮಿನಿ ಬಗ್ಗೆಯೂ ಹೇಳಿದ್ದಾರೆ.
    “ಆದರೆ ಜನರು ನಮ್ಮಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಅದನ್ನು ಈಡೇರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಏನಾಯಿತು ಅದನ್ನು ಸರಿಪಡಿಸುತ್ತೇವೆ” ಎಂದು ಪಿಚೈ ತಿಳಿಸಿದ್ದಾರೆ.

    ಜಗತ್ತಿನಾದ್ಯಂತ ಮಾಹಿತಿ ಸಂಗ್ರಹಿಸಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಕಂಪನಿಯ ಉದ್ದೇಶವಾಗಿದೆ ಎಂದು ಹೇಳಿರುವ ಸುಂದರ್ ಪಿಚೈ, ಕಂಪನಿಯು ಯಾವಾಗಲೂ ನಿಖರವಾದ ಮತ್ತು ಏಕಪಕ್ಷೀಯವಲ್ಲದ ವಿಷಯವನ್ನು ಒದಗಿಸಿದೆ. ಇದಕ್ಕಾಗಿಯೇ ಬಳಕೆದಾರರು ನಮ್ಮನ್ನು ನಂಬುತ್ತಾರೆ. ಜೆಮಿನಿ ಎಐಗೆ ಇನ್ನೂ ಹೆಚ್ಚಿನ ಪರಿಷ್ಕರಣೆಯ ಅಗತ್ಯವಿದೆ. ಇದನ್ನು ಸರಿಪಡಿಸಿದ ನಂತರ, ಕಂಪನಿಯು ಅದನ್ನು ಮತ್ತೊಮ್ಮೆ ಲಭ್ಯವಾಗುವಂತೆ ಮಾಡುತ್ತದೆ ಎಂದರು.

    ಒಂದೇ ದಿನದಲ್ಲಿ 90 ಬಿಲಿಯನ್ ಡಾಲರ್‌ ಕಳೆದುಕೊಂಡ ಗೂಗಲ್!

    ಕಟ್ಟಡದ ಸೌಂದರ್ಯಕ್ಕೆ ಅಡ್ಡಿಯಾಗುತ್ತೆಂದು 19 ಅಶೋಕ ಮರಗಳಿಗೆ ಕೊಡಲಿ ಪೆಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts