More

    ಅನಗತ್ಯ ಪ್ರಯಾಣ ಬೇಡ, ಆನ್​ಲೈನ್​ ಆಚರಿಸಿ: ಹಬ್ಬದ ಸಮಯಕ್ಕೆ ಜನರಿಗೆ ಸರ್ಕಾರದ ಸಲಹೆ

    ನವದೆಹಲಿ: ಕರೊನಾ ಆತಂಕ ಇನ್ನೂ ಮರೆಯಾಗದಿರುವ​ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಮುಂಬರುವ ದಸರಾ ಹಬ್ಬದ ಸಂದರ್ಭದಲ್ಲಿ ಮುನ್ನೆಚ್ಚರಿಕೆಗಳೊಂದಿಗೆ ಹಬ್ಬ ಆಚರಿಸಿ ಎಂದು ಆಗ್ರಹಿಸಿದೆ. “ತ್ಯೋಹಾರ್​ ಭೀ, ಕೋವಿಡ್​-ಸೇಫ್​ ವ್ಯವಹಾರ್​ ಭೀ” ಎಂಬ ಘೋಷವಾಕ್ಯವನ್ನು ಪ್ರಕಟಿಸಿದೆ.

    ಮುಂಬರುವ ಹಬ್ಬಗಳ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಗಳಿಗೆ ಅದಾಗಲೇ ಸವಿವರ ಎಸ್​ಒಪಿ ಜಾರಿಗೊಳಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು, “ಅನಗತ್ಯವಾಗಿ ಪ್ರಯಾಣ ಮಾಡಬೇಡಿ. ನಿಮ್ಮ ಬಂಧುಮಿತ್ರರೊಂದಿಗೆ ಹಬ್ಬದ ಆನ್​ಲೈನ್​ ಆಚರಣೆ ಮಾಡಿ” ಎಂದು ಸಾರ್ವಜನಿಕರಿಗೆ ಸಲಹೆ ನೀಡಿದೆ.

    ದೇಶದ ವಿವಿಧೆಡೆ ಜಿಲ್ಲೆವಾರು ಶೇ.5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವೆಡೆ ಮಾತ್ರ ನಿಯಮಿತ ಸಂಖ್ಯೆಯಲ್ಲಿ ಪೂರ್ವಾನುಮತಿಯೊಂದಿಗೆ ಜನ ಸೇರಲು ಅವಕಾಶ ನೀಡಬಹುದು. ಶೇ.5 ಕ್ಕಿಂತ ಹೆಚ್ಚು ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಮತ್ತು ಕಂಟೈನ್​ಮೆಂಟ್​ ಜೋನ್​ಗಳಲ್ಲಿ ಜನ ಸೇರುವುದನ್ನು ತಡೆಯಬೇಕು ಎಂದೂ ಹೇಳಿರುವ ಸಚಿವಾಲಯ, ನಿರ್ಬಂಧಗಳು ಮತ್ತು ವಿನಾಯಿತಿಗಳನ್ನು ಸಾಪ್ತಾಹಿಕ ಕರೊನಾ ಪಾಸಿಟಿವಿಟಿ ದರಗಳನ್ನು ಆಧರಿಸಿ ನಿರ್ಧರಿಸಬೇಕು ಎಂದು ಹೇಳಿದೆ. (ಏಜೆನ್ಸೀಸ್)

    ಫ್ರಾನ್ಸ್​ ಮಾಜಿ ರಾಷ್ಟ್ರಪತಿ ನಿಕೋಲಸ್​ ಸರ್ಕೋಜಿಗೆ 1 ವರ್ಷ ಜೈಲು ಶಿಕ್ಷೆ

    VIDEO| ಚಿರತೆಯೊಂದಿಗೆ ಮಹಿಳೆಯ ಸೆಣಸಾಟ! ಮೈನವಿರೇಳಿಸುತ್ತೆ ಈ ದೃಶ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts