More

    ಪೆಟ್ರೋಲ್​, ಡೀಸೆಲ್​ ಅಬಕಾರಿ ಸುಂಕದಲ್ಲಿ ಭಾರಿ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ ಬೀಳತ್ತಾ? ಇಲ್ಲಿದೆ ಉತ್ತರ

    ನವದೆಹಲಿ: ಕಚ್ಚಾತೈಲಗಳ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಪ್ರತಿ ಲೀಟರ್​ ಪೆಟ್ರೋಲ್​ಗೆ 10 ರೂಪಾಯಿ ಹಾಗೂ ಡೀಸೆಲ್​ಗೆ 13 ರೂಪಾಯಿ ಏರಿಕೆ ಮಾಡಲಾಗಿದೆ. ಈ ಮೂಲಕ ಕಳೆದ ಎರಡು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಎರಡನೇ ಅವಧಿಗೆ ಅಬಕಾರಿ ಸುಂಕವನ್ನು ಏರಿಕೆ ಮಾಡಿದಂತಾಗಿದೆ.

    ಈ ಏರಿಕೆಯಿಂದ ಜನಸಾಮಾನ್ಯರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಮಾರಾಟ ದರದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಪಂಪ್‌ನಲ್ಲಿ ಮಾರಾಟವಾಗುವ ಇಂಧನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಇಂಧನ ಪಂಪ್‌ನಲ್ಲಿ ಚಿಲ್ಲರೆ ಬೆಲೆಗಳು ಒಂದೇ ಆಗಿರುತ್ತವೆ. ಸುಂಕ ಏರಿಕೆಯಿಂದ ತೈಲ ಕಂಪನಿಗಳಿಗೆ ಮಾತ್ರ ಹೊರೆಯಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

    ಇದನ್ನೂ ಓದಿ 160ಕಿ.ಮೀ ನಡೆದು ಬಂದ್ರೆ ಊರವರು ಮರ ಹತ್ತಿಸೋದಾ?

    ಬದಲಾಗಿ, ಸರ್ಕಾರದ ಬೊಕ್ಕಸಕ್ಕೆ ಈ ಸುಂಕ ಹೆಚ್ಚಳದಿಂದ 1.6 ಲಕ್ಷ ಕೋಟಿ ರೂಪಾಯಿ ಆದಾಯ ಸಂದಾಯವಾಗಲಿದೆ. ಸರ್ಕಾರದ ಈ ಏರಿಕೆಯಿಂದ ದೇಶದ ತೈಲ ಮಾರುಕಟ್ಟೆ ಕಂಪನಿಗಳನ್ನು ಸರ್ಕಾರ ಆರ್ಥಿಕವಾಗಿ ಬಲಪಡಿಸಿದಂತಾಗಿದೆ. ತೆರಿಗೆ ಹೆಚ್ಚಳವು ತೈಲ ಮಾರುಕಟ್ಟೆ ಕಂಪನಿಗಳಿಗೆ ಹೆಚ್ಚಿನ ಕಾರ್ಯನಿರತ ಬಂಡವಾಳದ ಹೊರಹರಿವಿಗೆ ಕಾರಣವಾಗಬಹುದು ಎನ್ನಲಾಗಿದೆ.

    ಮಾರ್ಚ್ 14ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ 3 ರೂ ಹೆಚ್ಚಳದಿಂದ ವಾರ್ಷಿಕ ಆದಾಯ 39 ಸಾವಿರ ಕೋಟಿ ಎಂದು ನಿರೀಕ್ಷಿಸಲಾಗಿತ್ತು. ಈಗ 10ರೂ ಏರಿಕೆ ಮಾಡಿರುವುದರಿಂದ ಸರ್ಕಾರವು ವಾರ್ಷಿಕ 2ಲಕ್ಷ ಕೋಟಿ ರೂಪಾಯಿ ಆದಾಯಗಳಿಸುವ ನಿರೀಕ್ಷೆ ಹೊಂದಿದೆ. ‘

    ಇದನ್ನೂ ಓದಿ: ಒಬ್ಬನಿಂದ 13 ಮಂದಿ ಜೀವಹಿಂಡುತಿದೆ ಕರೊನಾ! ನಿಮ್ಮೂರಿಗೂ ಬಂದಿದ್ಯಾ? ಇಲ್ಲಿದೆ ವಿವರ

    ಸುಂಕ ಹೆಚ್ಚಳದ ಕುರಿತಂತೆ ಇನ್​ವೆಸ್ಟರ್ಸ್​ ಕಾರ್ಪೋರೇಟ್​ ಸಂಸ್ಥೆಯ ಉಪಾಧ್ಯಕ್ಷ ವಿಕಾಸ್ ಹಲನ್ ಸ್ಪಷ್ಟಪಡಿಸಿದ್ದು, ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯನ್ನು ಕ್ರಮವಾಗಿ ಬ್ಯಾರೆಲ್‌‌ಗೆ 21 ಡಾಲರ್, 27 ಡಾಲರ್ ಹೆಚ್ಚಳ ಮಾಡಿದೆ. ಇದರಿಂದ ಸರ್ಕಾರದ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗುತ್ತದೆ. ತೆರಿಗೆ ಹೆಚ್ಚಳವನ್ನು ಪೂರ್ಣ ವರ್ಷಕ್ಕೆ ಕಾಪಾಡಿಕೊಂಡು ಬಂದರೆ ಸುಮಾರು 21 ಶತಕೋಟಿ ಡಾಲರ್‌‌ಗಳಷ್ಟು ಹೆಚ್ಚಾಗುತ್ತದೆ ಎಂದಿದ್ದಾರೆ.

    ಭಯಪಡಬೇಡಿ ಎಂದ ಕರ್ನಾಟಕ: ಇದು ಅಬಕಾರಿ ಸುಂಕದ ಹೆಚ್ಚಳವಷ್ಟೇ. ಇದರಿಂದ ಜನರ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅಖಿಲ ಕರ್ನಾಟಕ ಪೆಟ್ರೊಲಿಯಂ ಟ್ರೇಡರ್ಸ್ ಒಕ್ಕೂಟದ ಅಧ್ಯಕ್ಷ ಕೆ.ಎಂ. ಬಸವೇಗೌಡ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts